ಎ ಪಿ ಅರ್ಜುನ್ ಅವರ ಮುಂದಿನ ಸಿನೆಮಾ 'ಕಿಸ್'
'ಐರಾವತ' ಸಿನೆಮಾದ ನಂತರ ಮತ್ತೆ ಹೊಸ ಮುಖಗಳತ್ತ ಮುಖ ಮಾಡಿರುವ ಎ ಪಿ ಅರ್ಜುನ್ ಪ್ರೇಮ ಕಥೆ ಹೇಳಲು ಸಜ್ಜಾಗಿದ್ದಾರೆ. ಈ ರೊಮ್ಯಾಂಟಿಕ್ ಸಿನೆಮಾಗೆ 'ಕಿಸ್'

ಬೆಂಗಳೂರು: 'ಐರಾವತ' ಸಿನೆಮಾದ ನಂತರ ಮತ್ತೆ ಹೊಸ ಮುಖಗಳತ್ತ ಮುಖ ಮಾಡಿರುವ ಎ ಪಿ ಅರ್ಜುನ್ ಪ್ರೇಮ ಕಥೆ ಹೇಳಲು ಸಜ್ಜಾಗಿದ್ದಾರೆ. ಈ ರೊಮ್ಯಾಂಟಿಕ್ ಸಿನೆಮಾಗೆ 'ಕಿಸ್' ಎಂಬ ಶೀರ್ಷಿಕೆ ನೀಡಿದ್ದಾರೆ. ಪ್ರೇಮಿಗಳ ದಿನವಾದ ಫೆಬ್ರವರಿ ೧೪ ರಂದು ನಿರ್ದೇಶಕ ಸಿನೆಮಾದ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನುತ್ತವೆ ಮೂಲಗಳು.
'ಐರಾವತ' ಸಿನೆಮಾ ಚಿತ್ರೀಕರಣದ ವೇಳೆ ನಟ ದರ್ಶನ್ ಜೊತೆಗೆ ಗುದ್ದಾಟಗಳು ನಡೆದು, ಚಿತ್ರೀಕರಣದ ಕೆಲವು ಭಾಗಗಳಿಂದ ನಿರ್ದೇಶಕರೇ ಹೊರಬಿದ್ದಿದ್ದ ಈ ಘಟನೆಯ ಹಿನ್ನಲೆಯಲ್ಲಿ ಅರ್ಜುನ್ ಮತ್ತೆ ಹೊಸಬರತ್ತ ಮುಖ ಮಾಡಿರುವುದು ವಿಶೇಷ.
ವಿ ರವಿ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ ಹರಿಕೃಷ್ಣ ಸಂಗೀತ ನಿರ್ದೇಶಕ. ಸಿನೆಮಾಗೆ ದೀಪು ಎಸ್ ಕುಮಾರ್ ಅವರ ಸಂಕಲನ. ರವಿವರ್ಮ ಅವರ ಸ್ಟಂಟ್ಸ್ ಮತ್ತು ಸತ್ಯ ಹೆಗಡೆ ಅವರ ಸಿನೆಮ್ಯಾಟೋಗ್ರಫಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


