'ಪುಷ್ಪಕ ವಿಮಾನ' ಟ್ರೇಲರ್ ಗೆ ಭಾರಿ ಪ್ರಶಂಸೆ
ನಟ ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ' ಸಿನೆಮಾಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಶನಿವಾರವಷ್ಟೇ ಬಿಡುಗಡೆಯಾಗಿರುವ ಟ್ರೇಲರ್ ನನ್ನು ೪೦ ಘಂಟೆಗಳಲ್ಲಿ ೪೦೦೦೦

ಬೆಂಗಳೂರು: ನಟ ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ' ಸಿನೆಮಾಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಶನಿವಾರವಷ್ಟೇ ಬಿಡುಗಡೆಯಾಗಿರುವ ಟ್ರೇಲರ್ ನನ್ನು ೪೦ ಘಂಟೆಗಳಲ್ಲಿ ೪೦೦೦೦ ಸಾವಿರ ಬಾರಿ ವೀಕ್ಷಿಸಲಾಗಿದೆ. ಅಲ್ಲದೆ ಚಿತ್ರರಂಗದ ಮಂದಿಯೂ ಟ್ರೇಲರ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ನಟ ನಿರ್ದೇಶಕ ರಕ್ಷಿತ್ ಶೆಟ್ಟಿ, ರಂಗಿತರಂಗ ಅನೂಪ್ ಭಂಡಾರಿ, ನಟ ನಿರುಪ್ ಭಂಡಾರಿ, ನಟಿ ಶೃತಿ ಹರಿಹರನ್ ಮತ್ತು ಸಂಯುಕ್ತ ಹೊರನಾಡ್ ಪ್ರಶಂಸೆಯ ಮಳೆಗೆರೆದಿದ್ದಾರೆ.
ಇತ್ತೀಚೆಗೆ ತಾವು ನೋಡಿದ ಟ್ರೇಲರ್ ಗಲ್ಲಿ ಇದು ಏಕೆ ಅದ್ಭುತ ಎಂದು ಅನುಪ್ ಭಂಡಾರಿ ಎರಡು ಪುಟಗಳಷ್ಟು ಬರೆದಿರುವುದು ವಿಶೇಷ. ಸಿನೆಮಾದಲ್ಲಿ ಯುವಿನ ಪರ್ತಿವ ಅವರ ತಂದೆಯ ಪಾತ್ರ ನಿರ್ವಹಿಸಿರುವ ರಮೇಶ್ ಅರವಿಂದ್ ಟ್ರೇಲರ್ ಬಗ್ಗೆ ಬಂದಿರುವ ಅಭಿಪ್ರಾಯಗಳಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ಟ್ರೇಲರ್ ನೋಡಿ ಬಹಳಷ್ಟು ಯುವ ನಟರ ನನಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಚಿತ್ರರಂಗದ ಮುಂದಿನ ಹೆಜ್ಜೆ ಎಂದು ಕೂಡ ಹೇಳಿದ್ದಾರೆ. ನನ್ನ ನಿರ್ದೇಶನದ 'ಉತ್ತಮ ವಿಲನ್' ಸಿನೆಮಾದ ಟ್ರೇಲರ್ ಬಿಡುಗಡೆಯ ವೇಳೆಯಲ್ಲೂ ಇದೇ ಅನುಭವವಾಗಿತ್ತು" ಎನ್ನುತ್ತಾರೆ.
ಎಸ್ ರವೀಂದ್ರನಾಥ್ ಸಿನೆಮಾದ ನಿರ್ದೇಶಕ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


