ರನ್ ಆಂಟನಿಗೆ ಪುನೀತ್ ಧ್ವನಿ
ಇತ್ತೀಚೆಗೆ ತಮ್ಮ ಸಹೋದರ ಶಿವರಾಜ್ ಕುಮಾರ್ ಅವರ ಚಿತ್ರಕ್ಕೆ ಹಾಡಿದ್ದ ಪುನೀತ್ ರಾಜ್ ಕುಮಾರ್ ಇದೀಗ ತಮ್ಮ ಮತ್ತೊಬ್ಬ...

ಇತ್ತೀಚೆಗೆ ತಮ್ಮ ಸಹೋದರ ಶಿವರಾಜ್ ಕುಮಾರ್ ಅವರ ಚಿತ್ರಕ್ಕೆ ಹಾಡಿದ್ದ ಪುನೀತ್ ರಾಜ್ ಕುಮಾರ್ ಇದೀಗ ತಮ್ಮ ಮತ್ತೊಬ್ಬ ಅಣ್ಣನ ಮಗ ವಿನಯ್ ರಾಜ್ ಕುಮಾರ್ ಅಭಿನಯದ ಚಿತ್ರ ರನ್ ಆಂಟನಿಯಲ್ಲಿ ಹಾಡಲಿದ್ದಾರೆ.
ಚಿತ್ರದಲ್ಲಿನ ಜನಕು..ಜನಕು..ಮಂಡೋಲೆ ಹಾಡಿನ ಚಿತ್ರೀಕರಣ ಕಳೆದ ವಾರ ನಡೆದಿತ್ತು. ಇದು ಚಿತ್ರದ ಮೊದಲ ಹಾಡಾಗಿದೆ. ಯುವಕರ ನಡುವಿನ ಸಂಬಂಧದ ಕುರಿತಾಗಿ ಈ ಹಾಡಿನಲ್ಲಿ ವರ್ಣಿಸಲಾಗಿದೆ. ಚಿತ್ರದಲ್ಲಿ ವಿನಯ್ ಅವರದ್ದು ಕ್ಯಾಥೊಲಿಕ್ ಪಾತ್ರವಾಗಿದ್ದು, ವರ್ಣಚಿತ್ರ ಹಾಡನ್ನು ಚರ್ಚ್ ಪಕ್ಕದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮುರಳಿ ಮಾಸ್ಟರ್ ಇದಕ್ಕೆ ಕೊರಿಯೋಗ್ರಫಿ ಮಾಡಿದ್ದು, ನಾಗೇಂದ್ರ ಅರಸ್ ರವರು ಸಾಹಿತ್ಯ ಬರೆದಿದ್ದಾರೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಘು ಶಾಸ್ತ್ರಿ.
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ವಿದೇಶದಲ್ಲಿ ಚಿತ್ರೀಕರಣದ ಬಗ್ಗೆ ನಿರ್ದೇಶಕರು ಇನ್ನೂ ನಿರ್ಧರಿಸಿಲ್ಲವಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಅವುಗಳನ್ನು ನಗರದಲ್ಲಿಯೇ ಚಿತ್ರೀಕರಣ ಮಾಡಲಿದ್ದೇವೆ. 5ನೇ ಹಾಡಿಗೆ ವಿದೇಶಕ್ಕೆ ಹೋಗಬೇಕೆ, ಬೇಡವೇ ಎಂಬ ಬಗ್ಗೆ ತೀರ್ಮಾನಿಸುತ್ತೇವೆ. ಚಿತ್ರದ ಕಥೆ ಬೆಂಗಳೂರಿನಲ್ಲಿ ನಡೆಯುತ್ತದೆ. ಹಾಗಾಗಿ ವಿದೇಶಿ ಸ್ಥಳಗಳ ಅಗತ್ಯವಿಲ್ಲ ಎಂದು ನಿರ್ದೇಶಕರು ಹೇಳುತ್ತಾರೆ.
ಚಿತ್ರದ ಮೊದಲ ಹಂತದ ಚಿತ್ರೀಕರಣ ಜನವರಿ 18ಕ್ಕೆ ಮುಗಿಯುತ್ತದೆ.ಎರಡನೇ ಹಂತ ಫೆಬ್ರುವರಿಗೆ ಮುಗಿಸುವ ಯೋಜನೆ ನಮ್ಮದು. ಇದುವರೆಗೆ ಎಲ್ಲಾ ನಾವಂದುಕೊಂಡಂತೆ ನಡೆಯುತ್ತಿದೆ. ನಿಜವಾಗಿ ಹೇಳಬೇಕೆಂದರೆ ನಾವು ಹೆಚ್ಚಿನ ಶಾಟ್ ತೆಗೆಯುತ್ತಿದ್ದೇವೆ. ಈಗ ಚಿತ್ರದ ನಾಯಕ-ನಾಯಕಿಯರಾದ ವಿನಯ್ ಮತ್ತು ಸುಷ್ಮಾರ ನಟನೆಯ ಚಿತ್ರೀಕರಣ ಮಾಡುತ್ತಿದ್ದೇವೆ. ಮತ್ತೊಬ್ಬ ನಾಯಕಿ ರುಕ್ಸಾರ್ ಸದ್ಯದಲ್ಲಿಯೇ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


