ಸಿನಿಮಾ ಸುದ್ದಿ

ದೇವರವ್ನೆ ಪ್ರಿಯಾಮಣಿ ಹಾಡು ಕೇಳಿ!

ದೇವರವ್ನೆ ಪ್ರಿಯಾಮಣಿ ಹಾಡು ಕೇಳಿ!
ಪ್ರಿಯಾಮಣಿ
Published On :

ಸ್ಟಾರ್ ನಟರು ತಮ್ಮ ಸಿನಿಮಾಗಳ ಹೊರತಾಗಿಯೂ ಇತರೆ ನಟರ ಚಿತ್ರಗಳಲ್ಲಿ ಹಾಡುವುದು ಟ್ರೆಂಡ್ ಆಗಿದೆ. ಈ ಪರಂಪರೆಗೆ ಈಗ ನಟಿಯರೂ ಸೇರಿಕೊಳ್ಳುತ್ತಿದ್ದಾರೆ. ಪುನೀತ್ ರಾಜ್‍ ಕುಮಾರ್ ಅಭಿನಯಿಸಿರುವ `ಚಕ್ರವ್ಯೂಹ'ದಲ್ಲಿ ಕಾಜಲ್ ಅಗರವಾಲ್ ಒಂದು ಹಾಡಿಗೆ ದನಿಯಾದ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟಿ ಹಾಡಿಗೆ ಕೊರಳು ನೀಡಿದ್ದಾರೆ.

ಹೌದು, ಬಹುಭಾಷಾ ನಟಿ ಪ್ರಿಯಾಮಣಿ ಈಗ ಸಿಂಗರ್ ಕೂಡ! ಪ್ರಿಯಾಮಣಿ ಹಾಡಿರುವುದು ಅಕುಲ್ ಬಾಲಾಜಿ ಅಭಿನಯದ ಚಿತ್ರಕ್ಕೆ. ಅಂದಹಾಗೆ ಈ ಚಿತ್ರದ ಹೆಸರು `ದೇವರವ್ನೆ ಬಿಡು ಗುರು' ಎನ್ನುವುದು. ರಾಜೇಶ್ ರಾಮ್ ನಾಥ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹಾಡುಗಳಲ್ಲಿ ಒಂದು ಹಾಡಿಗೆ ಪ್ರಿಯಾಮಣಿ ಕಂಠ ನೀಡಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಪ್ರಿಯಾಮಣಿ ಹಾಡುಗಾರ್ತಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ.

ಸಂಗೀತ ನಿರ್ದೇಶಕ ರಾಜೇಶ್ ರಾಮ್ ನಾಥ್ ಅವರ ಸ್ಟುಡಿಯೋದಲ್ಲಿ ಸದರಿ ಹಾಡಿನ ರೆಕಾರ್ಡಿಂಗ್ ನಡೆದಿದೆ. ಮೈಸೂರಿನ ಪ್ರಥಮ್ ಎಂಬವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇವರಿಗೆ ಇದೇ ಮೊದಲ ನಿರ್ದೇಶನದ ಚಿತ್ರ. ವಿಶೇಷ ಅಂದರೆ ಇದೇ ಚಿತ್ರದಲ್ಲಿ ಅಕುಲ್ ಬಾಲಾಜಿ ಹಾಗೂ ಪುನೀತ್ ರಾಜ್‍ಕುಮಾರ್ ಕೂಡ ಒಂದೇ ಹಾಡಿಗೆ ಧ್ವನಿಯಾಗಿರುವುದು! ಇಷಾ ರಂಗನಾಥ್ ಈ ಚಿತ್ರದ ನಾಯಕಿ. ಇವರಿಗೂ ಇದು ಮೊದಲ ಕನಸು ನನಸಾಗುತ್ತಿರುವ ಪ್ರಯತ್ನ. ಅಲ್ಲದೆ ಪತ್ರಕರ್ತ ರವಿ ಬೆಳಗೆರೆ ಅವರೂ ಈ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.