ಅಣ್ಣಮ್ಮನೆದುರು ಅಮೂಲ್ಯ ಸ್ಟೆಪ್ಪು
ಕವಿರಾಜ್ ನಿರ್ದೇಶನದ `ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಹಾಡುಗಳಿಗೆ ಈಗಾಗಲೇ ಕೇಳುಗರು ಪಿsದಾ ಆಗಿದ್ದಾರೆ. ಮೆಲೋಡಿ, ಮಾಸ್ ಡ್ಯಾನ್ಸ್, ಮದುವೆ ಹಾಡು...

ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಹಾಡುಗಳಿಗೆ ಈಗಾಗಲೇ ಕೇಳುಗರು ಪಿsದಾ ಆಗಿದ್ದಾರೆ. ಮೆಲೋಡಿ, ಮಾಸ್ ಡ್ಯಾನ್ಸ್, ಮದುವೆ ಹಾಡು ಸೇರಿದಂತೆ ಬೇರೆ ಬೇರೆ ರೀತಿಯ ಹಾಡುಗಳನ್ನು ಸೇರಿಸಿ ಪಕ್ಕಾ ಫ್ಯಾಮಿಲಿ ಪ್ಯಾಕ್ ಕೊಟ್ಟಿದ್ದಾರೆ. ಸೂರಜ್ ನಾಯಕನಾಗಿ, ತೂಗುದೀಪ ಪ್ರೋಡಕ್ಷನ್ ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅಮೂಲ್ಯ ನಾಯಕಿ. ಅಮೂಲ್ಯ ಹಾಕಿರುವ ಸ್ಟೆಪ್ಪೇ ಇಲ್ಲಿನ ಹೈಲೈಟ್ ಅನ್ನೋದು ಚಿತ್ರತಂಡದ ಮಾತು. ಹೊಸ ನಾಯಕ ಸೂರಜ್ ಜತೆಗೆ ತುಂಬಾ ಜೋಶ್ ಆಗಿಯೇ ಸ್ಟೆಪ್ ಹಾಕಿರುವ ಅಮೂಲ್ಯ, ಅಪ್ಪಟಗಲ್ಲಿ ಹುಡುಗಿಯಂತೆ ಹೆಜ್ಜೆ ಹಾಕಿದ್ದಾರಂತೆ. ಅದಕ್ಕೆ ಸಾಕ್ಷಿಯೇ ಈ ಫೋಟೋ. ತುಂಬಾ ಕಲರ್ ಫುಲ್ ಪೋಸ್ಟರ್‍ಗಳಿಂದಲೇ ಗಮನ ಸೆಳೆದಿರುವ ಈ ಚಿತ್ರದಲ್ಲಿ ಅಮೂಲ್ಯಳ ಡ್ಯಾನ್ಸ್ ಕೂಡ ಪಡ್ಡೆಗಳಿಗೆ ಮೆಚ್ಚುಗೆಯಾಗುತ್ತದೆಂಬ ನಂಬಿಕೆ ಚಿತ್ರತಂಡದ್ದು. ಹಾಗೆ ನೋಡಿದರೆ 'ಗಜಕೇಸರಿ' ಚಿತ್ರದ ನಂತರ ಕೊಂಚ ಮೈ ಚಳಿ ಬಿಟ್ಟು ಕ್ಯಾಮೆರಾ ಮುಂದೆ ನಿಲ್ಲುತ್ತಿರುವ ಅಮೂಲ್ಯರ ವರಸೆ ನೋಡಿ, 'ನಾವೇ ಸ್ಯಾಂಡಲ್‍ವುಡ್‍ನ ನಂ.1 ನಟಿಯರು' ಎಂದು ಬೀಗುತ್ತಿರುವವರಿಗೆ ಹೊಟ್ಟೆ ಉರಿಯಾಗಿದೆಯಂತೆ. ಹೀಗಾಗಿ ನಾನೂ ಅಮೂಲ್ ಬೇಬಿ ಅಲ್ಲ ಎನ್ನುವುದನ್ನು ಖಾತರಿಪಡಿಸುತ್ತಿರುವ ಅಮೂಲ್ಯ, ಸೌಂಡ್ ಮಾಡುವ ಡ್ಯಾನ್ಸ್ ಜತೆಗೆ ಒಂಚೂರು ಹಾಟ್ ಆಗಿಯೂ ಕಾಣಿಸಿಕೊಂಡಿದ್ದಾರಂತೆ. ಈ ಮೂಲಕ ಆ ದಿನಗಳ `ಚೆಲುವಿನ ಚಿತ್ತಾರೆ' ಈಗ ತುಂಬಾ ಬದಲಾಗಿದ್ದಾರೆ. ಇಡೀ ಚಿತ್ರದ ಹಾಡುಗಳಲ್ಲಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಜೋರಾಗಿಯೇ ಇವೆ. ಅದರಲ್ಲೂ ತೆಳು ನೈಟ್ ಡ್ರೆಸ್ ಅನ್ನು ಮೊಣಕಾಲಿನ ವರೆಗೂ ಎತ್ತಿ ಕಟ್ಟಿ ಡಾರ್ಕ್ ನೈಟ್‍ನಲ್ಲಿ ಅಮೂಲ್ಯ ಪಕ್ಕಾ ಅಣ್ಣಮ್ಮನ ಸ್ಟೆಪ್ಸ್ ಹಾಕಿ, ಹಾಡಿಗೆ ಜೋಶ್ ನೀಡಿದ್ದಾರಂತೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಅಣ್ಣಮ್ಮನ ಡ್ಯಾನ್ಸ್ ಎಂದಾಕ್ಷಣ ನೆನಪಾಗುವುದು ಬುಲೆಟ್ ಪ್ರಕಾಶ್. ತೆರೆ ಮೇಲೆ ಅಣ್ಣಮ್ಮನ ಕುಣಿತಕ್ಕೆ ಬುಲೆಟ್ ಸ್ಟಾರ್ ಇಮೇಜ್ ತಂದುಕೊಟ್ಟವರು. ಆದರೆ, ಅಮೂಲ್ಯ ಈ ಚಿತ್ರದಲ್ಲಿ ಬುಲೆಟ್ ಪ್ರಕಾಶ್ ಅವರನ್ನೂ ಮೀರಿಸುವಂತೆ ಕುಣಿದಿದ್ದಾರಂತೆ. ಕವಿರಾಜ್‍ರ ಸಾಹಿತ್ಯ, ವಿ. ಹರಿಕೃಷ್ಣ ಅವರ ಸಂಗೀತದ ಜತೆಗೆ ಅಮೂಲ್ಯ ಹೆಜ್ಜೆಯ ಸದ್ದು ಸ್ಪರ್ಧೆ ನೀಡುತ್ತವೆ ಎಂಬುದು ಚಿತ್ರತಂಡದ ಮಾತು. ಸದ್ಯ ಇದೇ ತಿಂಗಳು 8ಕ್ಕೆ `ಮದುವೆಯ ಮಮತೆಯ ಕರೆಯೋಲೆ' ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. 'ಈ ಚಿತ್ರದಲ್ಲಿ ಅಮೂಲ್ಯ ಅವರನ್ನು ಬೇರೆ ರೀತಿಯಲ್ಲೇ ತೋರಿಸಿದ್ದೇವೆ. ಇಲ್ಲಿವರೆಗೂ ನೋಡಿದ ಅಮೂಲ್ಯ ಬೇರೆ, ಈ ಚಿತ್ರದಲ್ಲಿ ನೋಡಿದ ಅಮೂಲ್ಯನೇ ಬೇರೆ. ಅವರ ಪಾತ್ರ ಗಂಡುಬೀರಿಯಂತೆ ಇದೆ. ಯಾವ ಹುಡುಗನಿಗೂ ಕಮ್ಮಿ ಇಲ್ಲದಂತೆ ಡ್ಯಾನ್ಸ್ ಮಾಡಿದ್ದಾರೆ' ಎನ್ನುತ್ತಾರೆ ನಿರ್ದೇಶಕ ಕವಿರಾಜ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


