ಸಿನಿಮಾ ಸುದ್ದಿ

ಅತಿ ಹೆಚ್ಚು ಟ್ವೀಟ್ ದಾಖಲೆ ಮುರಿದ ಡಿಕ್ಯಾಪ್ರಿಯೋ ಆಸ್ಕರ್ ವಿಜೇತ ಸುದ್ದಿ

ಹಾಲಿವುಡ್ ನಟ ಲಿಯನಾರ್ಡೋ ಡಿಕ್ಯಾಪ್ರಿಯೋ, 'ದ ರೆವೆನ್ಯಾಂಟ್' ಸಿನೆಮಾದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಸುದ್ದಿ ನಿಮಿಷಕ್ಕೆ ೪,೪೦,೦೦೦ ಟ್ವೀಟ್ ಗಳನ್ನು ಸಂಪಾದಿಸಿದೆ

ಅತಿ ಹೆಚ್ಚು ಟ್ವೀಟ್ ದಾಖಲೆ ಮುರಿದ ಡಿಕ್ಯಾಪ್ರಿಯೋ ಆಸ್ಕರ್ ವಿಜೇತ ಸುದ್ದಿ
ಆಸ್ಕರ್ ಪ್ರಶಸ್ತಿ ಗೆದ್ದ ಲಿಯನಾರ್ಡೋ ಡಿಕ್ಯಾಪ್ರಿಯೋ
Published On :

ಲಾಸೇಂಜಲೀಸ್: ಹಾಲಿವುಡ್ ನಟ ಲಿಯನಾರ್ಡೋ ಡಿಕ್ಯಾಪ್ರಿಯೋ, 'ದ ರೆವೆನ್ಯಾಂಟ್' ಸಿನೆಮಾದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಸುದ್ದಿ ನಿಮಿಷಕ್ಕೆ ೪,೪೦,೦೦೦ ಟ್ವೀಟ್ ಗಳನ್ನು ಸಂಪಾದಿಸಿದೆ. ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದ ನೇರ ಪ್ರಸಾರದ ವೇಳೆಯಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಲಾದ ಸಂದರ್ಭ ಇದು ಎನ್ನಲಾಗಿದೆ.

ಡಿಕ್ಯಾಪ್ರಿಯೋ ತಮ್ಮ ಚೊಚ್ಚಲ ಆಸ್ಕರ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಮಾಡಲಾದ ಟ್ವೀಟ್ ಗಳ ಸಂಖ್ಯೆ, ೨೦೧೪ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಟಿ ಎಲ್ಲೆನ್ ಡಿಜನರೆಸ್ ಇತರ ತಾರೆಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಬರೆಯಲಾಗಿದ್ದ ನಿಮಿಷಕ್ಕೆ ೨,೫೫,೦೦೦ ಟ್ವೀಟ್ ದಾಖಲೆಯನ್ನು ಅಳಿಸಿ ಹಾಕಿದೆ.

೮೮ನೆಯ ಆಸ್ಕರ್ ಸಮಾರಂಭದ ಎರಡನೆಯ ಹಾಗೂ ಮೂರನೆಯ ಸ್ಥಾನದಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಿದ ಸಂದರ್ಭಗಳೆಂದರೆ, 'ಸ್ಪಾಟ್ಲೈಟ್' ಅತ್ಯುತ್ತಮ ಸಿನೆಮಾ ಮತ್ತು 'ಮ್ಯಾಡ್ ಮ್ಯಾಕ್ಸ್ ಫ್ಯುರಿ' ಆರನೇ ಆಸ್ಕರ್ ಪ್ರಶಸ್ತಿ ಪಡೆದ ಕ್ಷಣಗಳು ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ ವಿಶ್ವ ವಿಖ್ಯಾತ ಡಾಲ್ಬಿ ಚಿತ್ರಮಂದಿರದಲ್ಲಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.