'ಭಾಸ್ಕರ್ ದ ರಾಸ್ಕಲ್' ಸಿನೆಮಾದ ರಿಮೇಕ್ ನಲ್ಲಿ ರಜನಿ, ಸುಳ್ಳುಸುದ್ದಿಯಂತೆ!
ಮಲೇಶಿಯಾದಲ್ಲಿ 'ಕಬಾಲಿ' ಸಿನೆಮಾದ ಉಳಿದ ಚಿತ್ರೀಕರಣವನ್ನು ಮುಗಿಸಿ ಚೆನ್ನೈಗೆ ವಾಪಸ್ ಬಂದಿಳಿದಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟಿಸಿದ್ದರೆ

ಮಲೇಶಿಯಾದಲ್ಲಿ 'ಕಬಾಲಿ' ಸಿನೆಮಾದ ಉಳಿದ ಚಿತ್ರೀಕರಣವನ್ನು ಮುಗಿಸಿ ಚೆನ್ನೈಗೆ ವಾಪಸ್ ಬಂದಿಳಿದಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟಿಸಿದ್ದರೆ ಅದೇ ಸಮಯದಲ್ಲಿ ಅವರ ಮುಂದಿನ ಸಿನೆಮಾದ ಬಗ್ಗೆ ಕುತೂಹಲಕಾರಿ ವದಂತಿಗಳನ್ನು ಹುಟ್ಟುಹಾಕಿದೆ.
ಈ ವದಂತಿಗಳು ಏನೆಂದರೆ ಕಬಾಲಿ ಚಿತ್ರೀಕರಣದ ಒಟ್ಟೊಟ್ಟಿಗೇ ರಜನಿಕಾಂತ್ ಅವರು ಮಲಯಾಳಂ ಸಿನೆಮಾ 'ಭಾಸ್ಕರ್ ದ ರಾಸ್ಕಲ್' ಸಿನೆಮಾದ ರಿಮೇಕ್ ಶಂಕರ್ಸ್ ೨.೦ ಸಿನೆಮಾ ಚಿತ್ರೀಕರಣದಲ್ಲೂ ನಿರತರಾಗಿದ್ದಾರೆ ಎಂಬುದು.
ಸಿದ್ದಿಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರಜನಿ ಹಸಿರು ನಿಶಾನೆ ನೀಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.
ಆದರೆ ರಜನಿಕಾಂತ್ ಅವರ ಹತ್ತಿರದ ಮೂಲಗಳ ಪ್ರಕಾರ ಈ ವರದಿಯಲ್ಲಿ ಹುರುಳಿಲ್ಲವಂತೆ. ರಜನಿ ಈ ಯೋಜನೆಯ ಬಗ್ಗೆ ಯಾವುದೇ ರೀತಿಯ ಒಪ್ಪಿಗೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


