ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ 'ಸೂಪರ್ ಮಿನಿಟ್' ಶನಿವಾರದಿಂದ ಸ್ಟಾರ್ಟ್; ಏನು ಈ ಬಾರಿಯ ಸ್ಪೆಷಲ್?

ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ "ಸೂಪರ್‌ ಮಿನಿಟ್‌'ನ ಎರಡನೆಯ ಸೀಸನ್‌ ಶನಿವಾರದಿಂದ ಆರಂಭವಾಗುತ್ತಿದೆ...

ಗೋಲ್ಡನ್ ಸ್ಟಾರ್ ಗಣೇಶ್ 'ಸೂಪರ್ ಮಿನಿಟ್' ಶನಿವಾರದಿಂದ ಸ್ಟಾರ್ಟ್; ಏನು ಈ ಬಾರಿಯ ಸ್ಪೆಷಲ್?
ಗಣೇಶ್
Published On :

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ "ಸೂಪರ್‌ ಮಿನಿಟ್‌'ನ ಎರಡನೆಯ ಸೀಸನ್‌  ಶನಿವಾರದಿಂದ ಆರಂಭವಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.00ರಿಂದ 10.30ರವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಈ ಬಾರಿ ಸಾರ್ವಜನಿಕರು ಭಾಗವಹಿಸುತ್ತಿರುವುದು. ಪ್ರತಿ ಎಪಿಸೋಡಿಗೂ ಬೇರೆ ಬೇರೆ ವೃತ್ತಿಯ ಏಳು ಸ್ಪರ್ಧಿಗಳು ಪರಸ್ಪರ ಆಡುತ್ತಾರೆ. ಆ ನಂತರ ಕೊನೆಯ ಹಂತದಲ್ಲಿ ಸೆಲೆಬ್ರಿಟಿಯೊಬ್ಬರ ಜೊತೆಗೆ ಸೆಣೆಸಾಡಲಿದ್ದಾರಂತೆ.

ಸ್ಪರ್ಧಿಗೆ ತುಂಬಾ ಹಣದ ಅವಶ್ಯಕತೆ ಇದೆ ಎಂದನಿಸಿದರೆ, ಆಗ ಅವರನ್ನು ಕರೆಸಿಕೊಳ್ಳಲಾಗುತ್ತದಂತೆ. ಈ ಬಾರಿ ಬೇರೆ ಬೇರೆ ವೃತ್ತಿಯಲ್ಲಿ ಇರುವವರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗುತ್ತದಂತೆ. ಈ ಬಾರಿ ಕಾಲೇಜು ಹುಡುಗಿಯರು, ರಾಜಕಾರಣಿಗಳು, ಪತ್ರಕರ್ತರು ... ಹೀಗೆ ಬೇರೆಬೇರೆ ವೃತ್ತಿಯಲ್ಲಿರುವವರನ್ನು ಆಯ್ಕೆ ಮಾಡಲಾಗುತ್ತದಂತೆ.

ಕಳೆದ ಬಾರಿಯೇ ಪಬ್ಲಿಕ್‌ ಸೀಸನ್‌ ಮಾಡಬೇಕು ಎಂಬ ಯೋಚನೆ ಇತ್ತಂತೆ. ಅಷ್ಟೇ ಅಲ್ಲ, ಸೆಲೆಬ್ರಿಟಿಗಳ ಹತ್ತಿರ ದುಡ್ಡಿರುವುದರಿಂದ, ಅವರನ್ನೇ ಮತ್ತೆ ಏಕೆ ಬೆಳಸಬೇಕು ಎಂಬ ಪ್ರಶ್ನೆಯೂ ಹಲವರಿಗೆ ಬಂದಿತ್ತಂತೆ. ಆದರೆ, ಕಾರ್ಯಕ್ರಮವನ್ನು ಜನಪ್ರಿಯ ಮಾಡಬೇಕು ಮತ್ತು ಆಟಗಳನ್ನು ಪರಿಚಯಿಸುವುದಕ್ಕೆ  ಸೆಲೆಬ್ರಿಟಿಗಳಿಂದ ಕಳೆದ ಬಾರಿ ಆಡಿಸಲಾಗಿತ್ತಂತೆ. ಈಗ ಕಾರ್ಯಕ್ರಮ ಮತ್ತು ಅದರಲ್ಲಿನ ಆಟಗಳು ಜನಪ್ರಿಯವಾಗಿರುವುದರಿಂದ ಸಾಮಾನ್ಯ ಜನರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.