ಶಿವಣ್ಣನ ಸಿನಿಮಾಗೂ ಥಿಯೇಟರ್ ಸಮಸ್ಯೆನಾ..?
ಸ್ಯಾಂಡಲ್ ವುಡ್ ಚಿತ್ರಮಂದಿರ ಸಮಸ್ಯೆ ತುಂಬಾ ಹಳೆಯದ್ದೇ ಆದರೂ ನಟ ಶಿವರಾಜ್ ಕುಮಾರ್ ಅವರಂತ ಹಿರಿಯ ನಟರ ಚಿತ್ರಗಳಿಗೂ ಚಿತ್ರಮಂದಿರ ಸಮಸ್ಯೆ ಉದ್ಭವಿಸುತ್ತದೆಯೇ ಎಂಬುದು ಪ್ರಶ್ನೆ..

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರಮಂದಿರ ಸಮಸ್ಯೆ ತುಂಬಾ ಹಳೆಯದ್ದೇ ಆದರೂ ನಟ ಶಿವರಾಜ್ ಕುಮಾರ್ ಅವರಂತ ಹಿರಿಯ ನಟರ ಚಿತ್ರಗಳಿಗೂ ಚಿತ್ರಮಂದಿರ ಸಮಸ್ಯೆ ಉದ್ಭವಿಸುತ್ತದೆಯೇ ಎಂಬುದು ಪ್ರಶ್ನೆ..
ಗಾಂಧಿನಗರದಲ್ಲಿ ಒಂದು ಮಾತಿದೆ. ಚಿತ್ರ ತಯಾರಿಸುವುದು ಅಷ್ಟೇ ಅಲ್ಲ, ಅದನ್ನು ಬಿಡುಗಡೆ ಮಾಡುವುದೂ ಕೂಡ ಅದಕ್ಕಿಂತ ದೊಡ್ಡ ಕಷ್ಟ ಎಂದು. ನಮ್ಮ ಸ್ಯಾಂಡಲ್ ವುಡ್ ಚಿತ್ರಮಂದಿರಗಳ ಸಮಸ್ಯೆ ಎಷ್ಟರಮಟ್ಟಿಗೆ ಬೇರೂರಿದೆ ಎಂದರೆ ಖ್ಯಾತನಾಮರೂ ಕೂಡ ಅದರಿಂದ ಹೊರತಾಗಿಲ್ಲ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅದರಲ್ಲೂ ರಾಜ್ ಕುಮಾರ್ ಕುಟುಂಬದ ಶಿವರಾಜ್ ಕುಮಾರ್ ಗೆ ಚಿತ್ರಮಂದಿರ ಸಮಸ್ಯೆ ಎದುರಾಗಿರುವುದು ಚಿತ್ರೋಧ್ಯೋಮದ ಸಮಸ್ಯೆಗೆ ಹಿಡಿದಿರುವ ಕನ್ನಡಿಯಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ವಾರಕ್ಕೆ ಸರಾಸರಿ 6-8 ಹೊಸ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಪರಭಾಷಾ ಚಿತ್ರಗಳ ಹಾವಳಿ ನಡುವೆಯೇ ಕನ್ನಡಕ್ಕೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು ಸಾಹಸದ ಕೆಲಸವೇ ಸರಿ. ಇಂತಹ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಅವರೂ ಕೂಡ ಥಿಯೇಟರ್ ಸಮಸ್ಯೆ ಎದುರಿಸಿದ್ದು, ಚಿತ್ರರಂಗದ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ.
"ನಮ್ಮ ಚಿತ್ರಗಳಿಗೂ ಥಿಯೇಟರ್ ಸಮಸ್ಯೆಯಿದೆ. ನಮಗೆ ಪ್ರಾಬ್ಲಮ್ ಆದಾಗ ಯಾರು ಕೇಳಲು ಬರಲ್ಲ. ಹಾಗಂತಾ ಥಿಯೇಟರ್ ಸಮಸ್ಯೆಯಿದೆ ಅಂತಾ ಹೇಳುತ್ತಾ ಕುಳಿತುಕೊಳ್ಳುವುದಿಲ್ಲ ಸಿನಿಮಾ ರಿಲೀಸ್ ಆಗಿಯೇ ಆಗುತ್ತದೆ ಎಂದು ನಟ ಶಿವರಾಜ್ ಕುಮಾರ್ ಕಿಡಿಕಾರಿದ್ದಾರೆ.
ನಟ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ ಶಿವಲಿಂಗ ತೆರೆಗೆ ಸಿದ್ಧವಾಗಿದ್ದು, ಚಿತ್ರವನ್ನು ನಿರ್ದೇಶಕ ಪಿ.ವಾಸ್ ಅವರು ನಿರ್ದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


