ದ ವಿಲನ್: ಮುಂದುವರೆದ ಶಿವಣ್ಣ-ಸುದೀಪ್ ಜೋಡಿಯ ಮೊದಲ ಚಿತ್ರ
ನಿರ್ದೇಶಕ-ನಟ ಪ್ರೇಮ್ ನಿರ್ದೇಶನದ 'ದ ವಿಲನ್' ಸಿನೆಮಾದ ಕಾರ್ಯಗಳು ಮುಂದುವರೆಯುತ್ತಿವೆ. ಹಾಡುಗಳು ರೆಕಾರ್ಡಿಂಗ್ ಮುಗಿಸಿರುವ ನಿರ್ದೇಶಕ ಈಗ ಸಿನೆಮಾ ಹಿರೋಗಳಾದ ಶಿವರಾಜ್ ಕುಮಾರ್

Published On :
ಬೆಂಗಳೂರು: ನಿರ್ದೇಶಕ-ನಟ ಪ್ರೇಮ್ ನಿರ್ದೇಶನದ 'ದ ವಿಲನ್' ಸಿನೆಮಾದ ಕಾರ್ಯಗಳು ಮುಂದುವರೆಯುತ್ತಿವೆ. ಹಾಡುಗಳು ರೆಕಾರ್ಡಿಂಗ್ ಮುಗಿಸಿರುವ ನಿರ್ದೇಶಕ ಈಗ ಸಿನೆಮಾ ಹಿರೋಗಳಾದ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಸ್ಕ್ರೀನ್ ಟೆಸ್ಟ್ ಗೆ ಮುಂದಾಗಿದ್ದಾರೆ.
ಇದಕ್ಕಾಗಿ ಇಂಗ್ಲೆಂಡಿನಿಂದ ಬಟ್ಟೆಬರೆ ಮತ್ತು ಮುಂಬೈನಿಂದ ವಿಗ್ ಗಳನ್ನು ತರಿಸಲಾಗಿದೆ. ವಿನ್ಯಾಸಗಾರ್ತಿ ಸಾನಿಯಾ ಸರ್ದಾರಿಯಾ ನಟರ ವಿನ್ಯಾಸ ಮಾಡುತ್ತಿದ್ದಾರೆ.
ಈ ಸ್ಕ್ರೀನ್ ಟೆಸ್ಟ್ ವೇಳೆಯಲ್ಲಿ, ಇದರ ತಯ್ಯಾರಿಯನ್ನು ಚಿತ್ರೀಕರಿಸಲು ಮುಂದಾಗಿರುವ ನಿರ್ದೇಶಕ ಶಿವರಾಜ್ ಕುಮಾರ್ ಅವರ ಸಂದರ್ಶನ ಕೂಡ ಮಾಡಲಿದ್ದಾರಂತೆ. ನಂತರ ಶಿವಣ್ಣ ಒಳಗೊಂಡಂತೆ ಟೀಸರ್ ಅನ್ನು ಪ್ರೇಮ್ ಬಿಡುಗಡೆ ಮಾಡಲಿದ್ದಾರಂತೆ.
ಸುದೀಪ್ ಅವರು 'ಹೆಬ್ಬುಲಿ' ಸಿನೆಮಾದ ಹಾಡೊಂದರ ನಾಲ್ಕು ದಿನಗಳ ಚಿತ್ರೀಕರಣ ಪೂರ್ಣಗೊಳಿಸಿದ ಮೇಲೆ ಸ್ಕ್ರೀನ್ ಟೆಸ್ಟ್ ಗೆ ಬರಲಿದ್ದಾರೆ. ಈ ತಡಕ್ಕೆ ಕಾರಣ, ಸುದೀಪ್ ಅವರಿಗೆ ಹೊಸ ಕೇಶ ವಿನ್ಯಾಸದ ಅವಶ್ಯಕತೆ ಇದೆ ಎನ್ನುತ್ತಾರೆ ಪ್ರೇಮ್ "ಸುದೀಪ್ ಅವರ ಸದ್ಯದ ಯೋಜನೆ ಸಂಪೂರ್ಣಗೊಳ್ಳುವವರೆಗು ಇದು ಕಷ್ಟ" ಎನ್ನುತ್ತಾರೆ.
"ಡಿಸೆಂಬರ್ ೨೬ ರಿಂದ ಅವರು ಚಿತ್ರೀಕರಣದಲ್ಲಿ (ಹೆಬ್ಬುಲಿ) ಪಾಲ್ಗೊಳ್ಳಲಿದ್ದಾರೆ ಎಂದು ನನಗೆ ತಿಳಿದುಬಂದಿದೆ. ತದನಂತರ ಅವರು ನಮ್ಮ ಸೆಟ್ ಸೇರಲಿದ್ದಾರೆ. ಇಬ್ಬರು ನಟರನ್ನು ಒಳಗೊಂಡ ಟೀಸರ್ ಡಿಸೆಂಬರ್ ೩೦ ಮತ್ತು ೩೧ರೆಂದು ಚಿತ್ರೀಕರಣಗೊಳ್ಳಲಿದೆ" ಎನ್ನುತ್ತಾರೆ ಪ್ರೇಮ್.
ಹೊಸವರ್ಷದ ಮೊದಲ ವಾರದಿಂದ ಸಿನೆಮಾ ಚಿತ್ರೀಕರಣಗೊಳ್ಳಲು ಸಜ್ಜಾಗಿದೆ ಎನ್ನುವ ನಿರ್ದೇಶಕ "ನಾನು ಜನವರಿಯಲ್ಲಿ ಪ್ರಾರಂಭಿಸಲು ಅರಸಿದ್ದೇನೆ. ಆದರೆ ನಟರ, ತಂತ್ರಜ್ಞರ ಸಮಯವನ್ನು ಹೊಂದಿಸಿಕೊಳ್ಳಬೇಕು" ಎನ್ನುತ್ತಾರೆ.
ಸಿ ಆರ್ ಮನೋಹರ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಕ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


