ಸಿನಿಮಾ ಸುದ್ದಿ

ಉಪೇಂದ್ರ ಜೊತೆ ನಟನೆ ಎಂದರೆ ಸಿನಿಮಾ ವಿಶ್ವವಿದ್ಯಾಲಯ ಸೇರಿದಂತೆ: ರಚಿತಾ ರಾಮ್

ಉಪೇಂದ್ರ ಅವರೊಂದಿಗೆ ನಟಿಸುತ್ತಿರುವುದು ಸಿನಿಮಾ ವಿಶ್ವವಿದ್ಯಾಲಯ ಸೇರಿದಂತಾಗಿದೆ ಎಂದಿದ್ದಾರೆ ರಚಿತಾ ರಾಮ್.

ಉಪೇಂದ್ರ ಜೊತೆ ನಟನೆ ಎಂದರೆ ಸಿನಿಮಾ ವಿಶ್ವವಿದ್ಯಾಲಯ ಸೇರಿದಂತೆ: ರಚಿತಾ ರಾಮ್
ಉಪೇಂದ್ರ- ರಚಿತಾ ರಾಮ್
Published On :
ಕಿರುತೆರೆ ದಾರಾವಾಹಿಯಲ್ಲಿ ನಟಿಸುತ್ತಿದ್ದ ರಚಿತಾ ರಾಮ್, ಬೆಳ್ಳಿ ತೆರೆಯಲ್ಲಿ ಅಭಿನಯಿಸಲು ಪ್ರಾರಂಭಿಸಿದ ನಂತರ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ರಮೇಶ್ ಅರವಿಂದ್, ಗಣೇಶ್, ಧೃವ ಸರ್ಜಾ ಸೇರಿದಂತೆ ಬೆಳ್ಳಿತೆರೆಯ ಬಹುತೇಕ ಸ್ಟಾರ್ ಗಳೊಂದಿಗೆ ನಟಿಸಿದ್ದಾರೆ. ಈಗ ಉಪೇಂದ್ರ ಅವರೊಂದಿಗೂ ಸಹ ನಟಿಸುತ್ತಿದ್ದಾರೆ. 
ಕೆ.ಮಾದೇಶ್ ನಿರ್ದೇಶನದ ಸಿನಿಮಾಗೆ ಡಿ.12 ರಂದು ಮಹೂರ್ತ ನೆರವೇರಿದ್ದು, ಉಪೇಂದ್ರ ಅವರೊಂದಿಗೆ ನಟಿಸಲು ರಚಿತಾ ರಾಮ್ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿರುವ ರಚಿತಾ ರಾಮ್, ಸ್ಟಾರ್ ನಟರೊಂದಿಗೇ ನಟಿಸಬೇಕೆಂಬುದು ನನ್ನ ಉದ್ದೇಶವಾಗಿರಲಿಲ್ಲ. ಪಾತ್ರಗಳಿಗೆ ನಾನು ಸರಿ ಹೊಂದುತ್ತಿದ್ದೆ. ಆದ್ದರಿಂದ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶಗಳು ಸಿಕ್ಕಿದ್ದವು. ದೇವರ ದಯೆಯಿಂದ ಎಲ್ಲಾವೂ ಉತ್ತಮವಾದ ಸಿನಿಮಾಗಳೇ ಆಗಿದ್ದವು. ನನ್ನ ಮುಂದಿನ ಚಿತ್ರದ ಪಾತ್ರ ಸವಾಲಿನ ಪಾತ್ರವಾಗಿದೆ ಎಂದು ರಚಿತಾ ರಾಮ್ ಹೇಳಿದ್ದಾರೆ.  
ಪ್ರತಿಯೊಬ್ಬ ಸ್ಟಾರ್ ನಟರೊಂದಿಗೆ ನಟಿಸುವಾಗಲು ಹೊಸತನ್ನು ಕಲಿಯುವ ಅವಕಾಶ ಇರುತ್ತಿತ್ತು. ಆದರೆ ಉಪೇಂದ್ರ ಅವರೊಂದಿಗೆ ನಟಿಸುತ್ತಿರುವುದು ಸಿನಿಮಾ ವಿಶ್ವವಿದ್ಯಾಲಯ ಸೇರಿದಂತಾಗಿದೆ ಎಂದಿದ್ದಾರೆ ರಚಿತಾ ರಾಮ್.  ದರ್ಶನ್, ಸುದೀಪ್, ಪುನೀನ್, ಗಣೇಶ್ ಅವರೊಂದಿಗೆ ನಟಿಸಿದಾಗ ಸಿನಿಮಾ ಕುರಿತಾದ ತಾಂತ್ರಿಕ ಜ್ಞಾನ ಹೆಚ್ಚುತ್ತಿತ್ತು. ಈಗ ಉಪೇಂದ್ರ ಅವರೊಂದಿಗೆ ನಟಿಸುತ್ತಿದ್ದು, ಸಿನಿಮಾದ ಬಗ್ಗೆ ಮತ್ತಷ್ಟು ಕಲಿಯಬಹುದಾಗಿದೆ, ನನಗೆ ಅವರು ವಿಶ್ವವಿದ್ಯಾನಿಲಯ ಇದ್ದಂತೆ ಎಂದು ರಚಿತಾ ರಾಮ್ ಹೇಳಿದ್ದಾರೆ. ವಿಜಯಲಕ್ಷ್ಮಿ ಅರಸ್ ನಿರ್ಮಾಣದ ಸಿನಿಮಾ ಚಿತ್ರೀಕರಣ ಡಿಸೆಂಬರ್ ಅಂತ್ಯದಿಂದ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.