ಸಿನಿಮಾ ಸುದ್ದಿ

ಉತ್ಸಾಹದ ಉತ್ತುಂಗದಲ್ಲಿ 'ಕಿರಿಕ್ ಪಾರ್ಟಿ'ಯ 'ಕಿಡ್ಡೊ'

ಬಹುನಿರೀಕ್ಷಿತ ಚಿತ್ರ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ನೂತನ ನಟಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದೆ. ೧೯ ವರ್ಷದ ಸಂಯುಕ್ತ ಹೆಗಡೆ, ಸಿನೆಮಾ ಸೆಟ್ ನಲ್ಲಿ 'ಕಿಡ್ಡೊ'(ಮಗು) ಎಂದೇ ಪರಿಚಿತರು.

ಉತ್ಸಾಹದ ಉತ್ತುಂಗದಲ್ಲಿ 'ಕಿರಿಕ್ ಪಾರ್ಟಿ'ಯ 'ಕಿಡ್ಡೊ'
ಸಂಯುಕ್ತ ಹೆಗಡೆ
Published On :
ಬೆಂಗಳೂರು: ಬಹುನಿರೀಕ್ಷಿತ ಚಿತ್ರ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ನೂತನ ನಟಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದೆ. ೧೯ ವರ್ಷದ ಸಂಯುಕ್ತ ಹೆಗಡೆ, ಸಿನೆಮಾ ಸೆಟ್ ನಲ್ಲಿ 'ಕಿಡ್ಡೊ'(ಮಗು) ಎಂದೇ ಪರಿಚಿತರು. ನಟ ರಕ್ಷಿತ್ ಶೆಟ್ಟಿ ಈ ಹೆಸರು ನೀಡಿದ್ದು, ಚೊಚ್ಚಲ ನಟಿ ಅತಿ ಉತ್ಸಾಹದಿಂದ ಸಿನೆಮಾ ಬಿಡುಗಡೆಗೆ ಕಾಯುತ್ತಿದ್ದಾರೆ. 
ಹೊಸಬಳಿಗೆ ಇಷ್ಟು ದೊಡ್ಡ ಸಿನೆಮಾ ಸಿಕ್ಕಿರಿವುದು ಅದೃಷ್ಟ ಎನ್ನುವ ಸಂಯುಕ್ತ "ಚಿತ್ರರಂಗಕ್ಕೆ ಬರುತ್ತೇನೆ ಎಂದು ನಾನು ಊಹಿಸಿರಲಿಲ್ಲ. ನನ್ನ ನೃತ್ಯ ವೃತ್ತಿ ಜೀವನದ ಬಗ್ಗೆ ನಾನು ಗಮನ ಹರಿಸಿದ್ದೆ. ಆದುದರಿಂದ ಈ ಸಿನೆಮಾದಲ್ಲಿ ನಟಿಸಲು ಅವಕಾಶ ಬಂದಾಗ, ನಾನು ನಟಿಸುತ್ತಿದ್ದೇನೆ ಎಂದು ನಂಬಲಿಕ್ಕೇ ಸಾಧ್ಯವಾಗಲಿಲ್ಲ. ಅದು ಏಕೆಂದರೆ ನಾನು ಸಾಮಾನ್ಯವಾಗಿ ಪಕ್ಕದ ಮನೆಯ ಹುಡುಗಿಯ ನೋಟ ಹೊಂದಿರುವವಳು. ನಾನು ಮಾಡೆಲಿಂಗ್ ಲೋಕದಲ್ಲೂ ಇಲ್ಲ, ಅಥವಾ ನನ್ನ ಫೋಟೋ ಕ್ಲಿಕ್ಕಿಸಿಕೊಳ್ಳುವ ಹುಚ್ಚು ನನಗಿಲ್ಲ. ನಾನು ಆಯ್ಕೆಯಾದಾಗ ನನಗೆ ನಿಜಕ್ಕೂ ಅತೀವ ಅಚ್ಚರಿಯಾಗಿತ್ತು. ತಂಡ ನನ್ನಲ್ಲಿ ಭರವಸೆ ತುಂಬಿ, ಈಗ ನಟಿಸುವಂತೆ ಮಾಡಿದೆ" ಎನ್ನುತ್ತಾರೆ. ಈ ಸಿನೆಮಾ ಬಗ್ಗೆ ಹೆಚ್ಚು ಕುತೂಹಲ ಇರುವುದರಿಂದ ಒಂದು ರೀತಿಯ ಭಯವು ಇದೆ ಎಂದು ಒಪ್ಪಿಕೊಳ್ಳುತ್ತಾರೆ ನಟಿ. 
ಆಡಿಷನ್ ಮೂಲಕ ಆಯ್ಕೆಯಾದ ನಟಿ ಸಂಯುಕ್ತ, ಭರತನಾಟ್ಯ, ಜಾಜ್ ಮತ್ತು ಇತರ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದವರು. ಈ ತರಬೇತಿ ತೆರೆಯ ಮೇಲೆ ಭಾವನೆಗಳನ್ನು ಪರಿಣಾಮಕಾರಿಯಾಗಿ ಮೂಡಿಸಲು ಸಾಧ್ಯವಾಗಿದೆ ಎನ್ನುವ ನಟಿ "ನೃತ್ಯ ಕೂಡ ನಟನೆಯ ಒಂದು ಪ್ರಕಾರ ಎಂದು ನನಗೆ ನಾನೇ ಹೇಳಿಕೊಂಡೆ ಮತ್ತು ಅದು ನಟಿಸುವುದನ್ನು ಸುಲಭಗೊಳಿಸಿತು. ಈ ಸಿನೆಮಾದಲ್ಲಿ ನೃತ್ಯಕ್ಕೆ ಅಷ್ಟು ಅವಕಾಶವಿಲ್ಲ, ಅದು ಸ್ವಲ್ಪ ಕಷ್ಟವಾಗಿತ್ತು. ಆದರೆ ಸೆಟ್ ನಲ್ಲಿ ಸಂಗೀತ ಕೇಳುವ ಮೂಲಕ ಈ ತೊಂದರೆಯನ್ನು ನಿವಾರಿಸಿಕೊಂಡೆ" ಎನ್ನುತ್ತಾರೆ ಸಂಯುಕ್ತ. 
ಮೊದಲಿಗೆ ಸಿನೆಮಾ ಬಗ್ಗೆ ಅಂತಹ ಹುಚ್ಚೇನು ಇರಲಿಲ್ಲ ಎಂದು ತಿಳಿಸುವ ನಟಿ "ನಿಜ ಹೇಳಬೇಕೆಂದರೆ ನಾನು ಸಿನೆಮಾಗಳ ದೊಡ್ಡ ಅಭಿಮಾನಿಯೇನಲ್ಲ. ಅವುಗಳಲ್ಲಿ ಸಾಮಾನ್ಯ ಜ್ಞಾನ ಇಲ್ಲ, ಸುಮ್ಮನೆ ಆಕ್ಷನ್, ರೋಮ್ಯಾನ್ಸ್ ಮತ್ತು ಭಾವೋದ್ವೇಗಗಳನ್ನು ತುಂಬಿರುತ್ತಾರೆ ಮತ್ತು ಅದನ್ನು ನನಗೆ ಮೆಚ್ಚಲು ಅಸಾಧ್ಯ ಎಂದು ನಂಬಿದ್ದವಳು. ಆದರೆ 'ಲೂಸಿಯಾ' ಮತ್ತು 'ಉಳಿದವರು ಕಂಡಂತೆ' ಬಿಡುಗಡೆಯಾದ ಮೇಲೆ ನನ್ನ ಅಭಿಪ್ರಾಯ ಬದಲಾಯಿತು" ಎನ್ನುವ ಸಂಯುಕ್ತ "ನಾನೀಗ ಅಂತಹ ಒಂದು ಚಿತ್ರತಂಡದ ಭಾಗ" ಎನ್ನುತ್ತಾರೆ. 
ರಶ್ಮಿಕಾ ಮಂದಣ್ಣ ಜೊತೆಗೆ ತೆರೆಯನ್ನು ಹಂಚಿಕೊಂಡಿರುವ ನಟಿ ಸಂಯುಕ್ತ ಇದು 'ಆರೋಗ್ಯಕರ ಸ್ಪರ್ಧೆ' ಎಂದು ಬಣ್ಣಿಸುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.