'ರೋಗ್' ಮೂಲಕ ೧೨ ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ ಪೂರಿ ಜಗನ್ನಾಥ್
ನಿರ್ಮಾಪಕ ಸಿ ಆರ್ ಮನೋಹರ್ ಅವರಿಗೆ ಡಿಸೆಂಬರ್ ವಿಶೇಷ ತಿಂಗಳು, ಏಕೆಂದರೆ ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಇದೆ ತಿಂಗಳಲ್ಲಿ ಬೀಳುತ್ತದೆ. ಆದುದರಿಂದ ಅವರ ಸೋದರಳಿಯ

Published On :
ಬೆಂಗಳೂರು: ನಿರ್ಮಾಪಕ ಸಿ ಆರ್ ಮನೋಹರ್ ಅವರಿಗೆ ಡಿಸೆಂಬರ್ ವಿಶೇಷ ತಿಂಗಳು, ಏಕೆಂದರೆ ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಇದೆ ತಿಂಗಳಲ್ಲಿ ಬೀಳುತ್ತದೆ. ಆದುದರಿಂದ ಅವರ ಸೋದರಳಿಯ ಇಶಾನ್ ಅವರನ್ನು ಕನ್ನಡಕ್ಕೆ ಪರಿಚಯಿಸಲು ಇದೇ ತಿಂಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ಇಶಾನ್ ಅವರಿಗೆ ಅದ್ದೂರಿ ಓಪನಿಂಗ್ ದೊರಕಿಸಲು ಅವರು ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರನ್ನು ನಿರ್ದೇಶನಕ್ಕೆ ಕರೆತಂದಿದ್ದಾರೆ. ಸಿನೆಮಾ ಶೀರ್ಷಿಕೆ 'ರೋಗ್'.
ನಿರ್ಮಾಪಕ ಎಲ್ಲವನ್ನು ಈಗಾಗಲೇ ಯೋಜಿಸಿದ್ದು, ಈ ಸಿನೆಮಾದ ಟೀಸರ್ ಹೈದರಾಬಾದಿನ ಪಂಚಾತಾರ ಹೋಟೆಲ್ ನಲ್ಲಿ ಡಿಸೆಂಬರ್ ೧೨ ಕ್ಕೆ ಬಿಡುಗಡೆಯಾಗಲಿದೆ. ಇದರ ನಂತರ ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಿನೆಮಾ ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯಂತೆ.
"ರೋಗ್ ಸಿನೆಮಾದ ಮೂಲಕ ಪೂರಿ ಜಗನ್ನಾಥ್ ೧೨ ವರ್ಷಗಳ ನಂತರ ಕನ್ನಡಕ್ಕೆ ಹಿಂದಿರುಗಿದ್ದಾರೆ. ಅವರು ಕನ್ನಡ ನಟನನ್ನು ಪರಿಚಯಿಸುತ್ತಿರುವುದಕ್ಕೆ ನಿರ್ಮಾಪಕ ಬಹಳ ಉತ್ಸಾಹದಿಂದಿದ್ದಾರೆ" ಎನ್ನುತ್ತವೆ ಮೂಲಗಳು.
ಇದಕ್ಕೂ ಮೊದಲು ಪೂರಿ ಜಗನ್ನಾಥ್ ೨೦೦೧ ರಲ್ಲಿ ಶಿವರಾಜ್ ಕುಮಾರ್ ಅವರ 'ಯುವರಾಜ' ನಿರ್ದೇಶಿಸಿದ್ದರು. ನಂತರ ಪುನೀತ್ ರಾಜಕುಮಾರ್ ಅವರ 'ಅಪ್ಪು' ಸಿನೆಮಾವನ್ನು ೨೦೦೨ ನಿರ್ದೇಶಿಸದ್ದು, ಆ ಸಿನೆಮಾ ಭಾರಿ ಯಶಸ್ಸು ಕಂಡು ಪುನೀತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದ ನಾಯಕನಟನಾಗಿ ಪರಿಚಯಿಸಿತ್ತು.
'ರೋಗ್' ತ್ರಿಭಾಷಾ ಚಲನಚಿತ್ರವಾಗಿದ್ದು, ಇದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬರುತ್ತಿದೆ. ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಮತ್ತು ಬ್ಯಾಂಗ್ಕಾಕ್ ನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಠಾಕುರ್ ಅನೂಪ್ ಸಿಂಗ್ ಖಳನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ.
ಸುನಿಲ್ ಕಶ್ಯಪ್ ಸಿನೆಮಾಗೆ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


