ಸಿನಿಮಾ ಸುದ್ದಿ

2.0 ಚಿತ್ರದ ಚಿತ್ರೀಕರಣ ವೇಳೆ ಗಾಯಗೊಂಡ ಸೂಪರ್ ಸ್ಟಾರ್ ರಜನಿಕಾಂತ್

ರಜನಿಕಾಂತ್ ಅವರ ಮುಂದಿನ ಬಹು ನಿರೀಕ್ಷಿತ ತಮಿಳು ವೈಜ್ಞಾನಿಕ ರೋಮಾಂಚಕ-ಸಾಹಸ ಚಿತ್ರ 2.0ನ...

2.0 ಚಿತ್ರದ ಚಿತ್ರೀಕರಣ ವೇಳೆ ಗಾಯಗೊಂಡ ಸೂಪರ್ ಸ್ಟಾರ್ ರಜನಿಕಾಂತ್
ರಜನಿಕಾಂತ್ (ಸಂಗ್ರಹ ಚಿತ್ರ)
Published On :
ರಜನಿಕಾಂತ್ ಅವರ ಮುಂದಿನ ಬಹು ನಿರೀಕ್ಷಿತ ತಮಿಳು ವೈಜ್ಞಾನಿಕ ರೋಮಾಂಚಕ-ಸಾಹಸ ಚಿತ್ರ 2.0ನ ಚಿತ್ರೀಕರಣ ಚೆನ್ನೈಯಲ್ಲಿ ನಡೆಯುತ್ತಿದ್ದ ವೇಳೆ ಅವರ ಮೊಳಕಾಲಿಗೆ ಗಾಯವಾಗಿದೆ.ನಿನ್ನೆ ಸಂಜೆ ಘ ಘಟನೆ ನಡೆದಿದೆ.
ಚಿತ್ರದ ಪ್ರಮುಖ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಜನಿಕಾಂತ್ ಅವರ ಮೊಣಕಾಲಿಗೆ ಪೆಟ್ಟಾಗಿದೆ. ಅವರನ್ನು ಚೆಟ್ಟಿನಾಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಅವರು ಮನೆಗೆ ಹೋದರು ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಇದೀಗ ರಜನಿಕಾಂತ್ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಜನಿಕಾಂತ್ ಅವರ ಮ್ಯಾನೆಜರ್ ರಿಯಾಜ್ ಕೆ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ರಜನಿಕಾಂತ್ ಅವರು ಕೆರವಾನ್ ನಿಂದ ಹೊರಬಂದು ಜನರೆಡೆಗೆ ಕೈಬೀಸಿ ನಂತರ ಕಾರನ್ನು ಹತ್ತುವುದನ್ನು ಕಾಣಬಹುದು.
ಶಂಕರ್ ನಿರ್ದೇಶಿಸುತ್ತಿರುವ 400 ಕೋಟಿ ರೂಪಾಯಿ ಬಜೆಟ್ ನ ಚಿತ್ರ 2.0 ಆಗಿದ್ದು ಇದರಲ್ಲಿ ಅಕ್ಷಯ್ ಕುಮಾರ್, ಆಮಿ ಜಾಕ್ಸನ್, ಸುಧಾಂಶು ಪಾಂಡೆ ಮತ್ತು ಆದಿಲ್ ಹುಸೇನ್ ಮುಖ್ಯ ಪಾತ್ರದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.