ಪ್ರೇಕ್ಷಕರಿಗೆ ಧನ್ಯವಾದ ಹೇಳಲು ನಟ ರಮೇಶ್ ವಿಶ್ವಪರ್ಯಟನೆ!
ಕನ್ನಡದ ಖ್ಯಾತ ನಟ-ನಿರ್ದೇಶಕ ತಮ್ಮ ನಟನೆಯ 100 ಚಿತ್ರ 'ಪುಷ್ಪಕ ವಿಮಾನ'ವನ್ನು ಮುಗಿಸಿದ್ದು, ಎಲ್ಲರಿಗೂ ಧನ್ಯವಾದ ಹೇಳಲು ಪ್ರವಾಸ ಕೈಗೊಳ್ಳಲಿದ್ದಾರೆ.

Published On :
ಬೆಂಗಳೂರು: ಕನ್ನಡದ ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ್ ತಮ್ಮ ನಟನೆಯ 100 ಚಿತ್ರ 'ಪುಷ್ಪಕ ವಿಮಾನ'ವನ್ನು ಮುಗಿಸಿದ್ದು, ಎಲ್ಲರಿಗೂ ಧನ್ಯವಾದ ಹೇಳಲು ಪ್ರವಾಸ ಕೈಗೊಳ್ಳಲಿದ್ದಾರೆ.
"ನಾನು ಕಳೆದ 30 ವರ್ಷಗಳಿಂದ ಪ್ರೇಕ್ಷಕರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದೇನೆ ಎಂದು ನಂಬಿದ್ದೇನೆ, ಈಗ ಅದನ್ನು ಹಿಂದಿರುಗಿಸಲು ಸಮಯ" ಎನ್ನುವ ರಮೇಶ್ ವಿಶ್ವ ಪ್ರವಾಸ ಕೈಗೊಳ್ಳಲಿದ್ದಾರೆ.
"ನಾನು, ಸೈಕಲ್ ಮತ್ತು ಪರದೆ" ಎನ್ನುತ್ತಾರೆ ನಟ. ಹಿನ್ನಲೆಯಲ್ಲಿ ಪರದೆ ಬಿಟ್ಟು ಅದರಲ್ಲಿ ಅವರ ಸಿನೆಮಾಗಳ ದೃಶ್ಯಗಳನ್ನು ಪ್ರದರ್ಶಿಸಲಿರುವ ನಟ ಸೈಕಲ್ ಏರಿ ವೇದಿಕೆಗೆ ಬರಲಿದ್ದಾರಂತೆ.
ಇದನ್ನು 'ಲೈಫ್ ಸೈಕಲ್' ಎಂದು ಕರೆದಿರುವ ರಮೇಶ್ "ಈ ಇಡೀ ಪ್ರದರ್ಶನ ನನ್ನ ಜೀವನ ಚಕ್ರದ ಬಗ್ಗೆ ಮಾತನಾಡಲಿದೆ. ನಾನು ಹೇಗೆ ನನ್ನ ಕುಟುಂಬ, ಹಣ ಮತ್ತು ಹೆಸರನ್ನು ಸಂಭಾಳಿಸಿದೆ ಎಂಬುದರ ಬಗ್ಗೆ. ಜೀವನ ಎಂದರೆ ಸಮತೋಲನ ಮಾಡುವುದು. ನೀವು ಅದನ್ನು ಕಳೆದುಕೊಂಡರೆ ಬಿದ್ದುಹೋಗುತ್ತೀರಿ. ಜೀವನವನ್ನು ಪ್ರತಿನಿಧಿಸಲು ಸೈಕಲ್ಲೇ ಉತ್ತಮ" ಎನ್ನುತ್ತಾರೆ.
ಅವರು ಮೊದಲು ನವೆಂಬರ್ 27 ಕ್ಕೆ ಲಂಡನ್ ನಲ್ಲಿ ಇಳಿಯಲಿದ್ದಾರಂತೆ. ನಂತರ ದುಬೈ, ಕೆನಡಾ, ವ್ಯಾಂಕೋವರ್, ಟೊರಾಂಟೊ, ಆಸ್ಟ್ರೇಲಿಯಾ ಮತ್ತು ಅಮೆರಿಕಾಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರಂತೆ.
"ನನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ, ನಿರ್ದೇಶನ ಮತ್ತು ನಟನೆಯ ಯೋಜನೆಗಳ ನಡುವೆ ಈ ಪ್ರವಾಸಗಳನ್ನು ಕೈಗೊಳ್ಳಲಿದ್ದೇನೆ" ಎನ್ನುತ್ತಾರೆ ನಟ.
ಈ ಮಧ್ಯೆ 'ಪುಷ್ಪಕ ವಿಮಾನ' ಸಿನೆಮಾದ ಆಡಿಯೋ ಸೆಪ್ಟೆಂಬರ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


