ಸಿನಿಮಾ ಸುದ್ದಿ

ನಾನು ಬ್ರೆಟ್ ಲೀ ಅಭಿಮಾನಿಯಾಗಿರಲಿಲ್ಲ: ತನ್ನಿಸ್ತಾ; ಲೀ ನಟನೆಯ ಸಿನೆಮಾ ಬಿಡುಗಡೆಗೆ ಸಿದ್ಧ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರಿಗೆ ವಿಶ್ವದಾದ್ಯಂತ ಅಸಂಖ್ಯಾತ ಹೆಂಗಳೆಯರು ಅಭಿಮಾನಿಗಳಿರಬಹುದು ಆದರೆ ನಟಿ ತನ್ನಿಸ್ತಾ ಚಟರ್ಜಿ ಅವರು ನಾನು ಸಹನಟ ಬ್ರೆಟ್ ಲೀ

ನಾನು ಬ್ರೆಟ್ ಲೀ ಅಭಿಮಾನಿಯಾಗಿರಲಿಲ್ಲ: ತನ್ನಿಸ್ತಾ; ಲೀ ನಟನೆಯ ಸಿನೆಮಾ ಬಿಡುಗಡೆಗೆ ಸಿದ್ಧ
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ - ನಟಿ ತನ್ನಿಸ್ತಾ ಚಟರ್ಜಿ
Published On :
ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರಿಗೆ ವಿಶ್ವದಾದ್ಯಂತ ಅಸಂಖ್ಯಾತ ಹೆಂಗಳೆಯರು ಅಭಿಮಾನಿಗಳಿರಬಹುದು ಆದರೆ ನಟಿ ತನ್ನಿಸ್ತಾ ಚಟರ್ಜಿ ಅವರು ನಾನು ಸಹನಟ ಬ್ರೆಟ್ ಲೀ ಅವರ ಅಭಿಮಾನಿಯಾಗಿರಲಿಲ್ಲ ಎಂದಿದ್ದಾರೆ. 
ಇಂಗ್ಲಿಷ್ ಬಾಷೆಯ 'ಅನ್ಇಂಡಿಯನ್' ಎಂಬ ರೊಮ್ಯಾಂಟಿಕ್ ದ್ರಾಮಾ ಸಿನೆಮಾದಲ್ಲಿ ತನ್ನಿಸ್ತಾ ಬ್ರೆಟ್ ಲೀ ಜೊತೆಗೆ ನಟಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಬೌಲರ್ ಗೆ ಇದು ಚೊಚ್ಚಲ ಚಲನಚಿತ್ರ. 
"ನಾನು ಮೊದಲ ಬಾರಿಗೆ ಈ ಸಿನೆಮಾದ ತಾರಾಗಣದ ಬಗ್ಗೆ ಕೇಳಿದಾಗ ಅವರು(ಬ್ರೆಟ್ ಲೀ) ಆಸ್ಟ್ರೇಲಿಯಾ ನಟನಿರಬೇಕು ಎಂದುಕೊಂಡಿದ್ದೆ. ಅವರು ಮಾಜಿ ಕ್ರಿಕೆಟಿಗೆ ಬ್ರೆಟ್ ಲೀ ಎಂದು ತಿಳಿದಾಗ ಆಶ್ಚರ್ಯವಾಯಿತು" ಎನ್ನುತ್ತಾರೆ ತನ್ನಿಸ್ತಾ.
"ಅದು (ಭೇಟಿ) ಬಹಳ ಸ್ವಾಬಾವಿಕವಾಗಿತ್ತು ಮತ್ತು ನಮ್ಮ ಗೆಳೆತನ ಸರಾಗವಾಗಿತ್ತು. ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದು ಅದ್ಬುತ ಸಮಯ. ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ನಡೆಸುವಾಗ ಒಳ್ಳೆಯ ಸಮಯ ಕಳೆದೆವು. ಅವರು ಹಾಸ್ಯಮಯ ಪ್ರವೃತ್ತಿಯ ಅದ್ಭುತ ವ್ಯಕ್ತಿ" ಎಂದು ಕೂಡ ನಟಿ ಹೇಳುತ್ತಾರೆ. 
ನಾನು ಕ್ರಿಕೆಟ್ ಅಷ್ಟು ನೋಡುವುದಿಲ್ಲವಾದ್ದರಿಂದ ನಾನು ಲೀ ಅವರ ಅಭಿಮಾನಿಯಾಗಿರಲಿಲ್ಲ ಎನ್ನುತ್ತಾರೆ 'ಆಂಗ್ರಿ ಇಂಡಿಯನ್ ಗಾಡೆಸ್' ನಟಿ. "ನಮ್ಮಿಬ್ಬರ ನಡುವೆ ಕೆಮಿಸ್ಟ್ರಿ ಅತ್ಯುತ್ತಮವಾಗಿ ಮೂಡಿದೆ ಏಕೆಂದರೆ ನಾನು ಕ್ರಿಕೆಟ್ ಹೆಚ್ಚು ನೋಡುವುದಿಲ್ಲ. ಒಂದೇ ವೇಳೆ ನಾನು ಅವರ ಅಭಿಮಾನಿಯಾಗಿದ್ದು, ಅಚ್ಚರಿ ಉಳಿದುಬಿಟ್ಟಿದ್ದರೆ ಕಷ್ಟವಾಗುತ್ತಿತ್ತು. ನಾನು ಅವರನ್ನು ಜಾಹೀರಾತುಗಳಲ್ಲಿ ನೋಡಿದ್ದೆ. ನಾವು ಗೆಳೆಯರಾದೆವು ನಂತರ ಎಲ್ಲವು ಸುಸೂತ್ರವಾಗಿತ್ತು" ಎನ್ನುತ್ತಾರೆ ತನ್ನಿಸ್ತಾ.
ಅನುಪಮಾ ಶರ್ಮಾ ನಿರ್ದೇಶನದ 'ಅನ್ಇಂಡಿಯನ್' ಆಗಸ್ಟ್ 19 ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.