ಸಿನಿಮಾ ಸುದ್ದಿ

ಪಾಪ್ ಸ್ಟಾರ್ ಗಳು ಜನಪ್ರಿಯವಾಗುವುದು ಇಂದು ಅತಿ ಸುಲಭ: ಮಡೋನ್ನಾ

ಸಾಮಾಜಿಕ ಅಂತರ್ಜಾಲದಿಂದ ಪಾಪ್ ಸ್ಟಾರ್ ಗಳಿಗೆ ಜನಪ್ರಿಯವಾಗುವದು ಇಂದು ಅತಿ ಸುಲಭ ಎಂದಿದ್ದಾರೆ ಗಾಯಕಿ ಮಡೋನ್ನಾ.

ಪಾಪ್ ಸ್ಟಾರ್ ಗಳು ಜನಪ್ರಿಯವಾಗುವುದು ಇಂದು ಅತಿ ಸುಲಭ: ಮಡೋನ್ನಾ
ಗಾಯಕಿ ಮಡೋನ್ನಾ
Published On :
ಲಾಸೆಂಜಲಿಸ್: ಸಾಮಾಜಿಕ ಅಂತರ್ಜಾಲದಿಂದ ಪಾಪ್ ಸ್ಟಾರ್ ಗಳಿಗೆ ಜನಪ್ರಿಯವಾಗುವದು ಇಂದು ಅತಿ ಸುಲಭ ಎಂದಿದ್ದಾರೆ ಗಾಯಕಿ ಮಡೋನ್ನಾ. 
"ಸಾಮಾಜಿಕ ಅಂತರ್ಜಾಲ ಬರುವುದಕ್ಕೆ ಮುಂಚಿತವಾಗಿಯೇ ನಾನು ಜನಪ್ರಿಯವಾಗಿದ್ದೆ, ಆದುದರಿಂದ ಜನಪ್ರಿಯತೆ ನನಗೆ ಹೊರೆಯಲ್ಲ. ಜನಪ್ರಿಯತೆ ನನ್ನ ಕೆಲಸದಿಂದ ಬಂದದ್ದು, ಅದು ಕೂಡ ಸಾಮಾಜಿಕ ಜಾಲತಾಣಗಳು ಬರುವ ಎರಡು ದಶಕಗಳ ಹಿಂದೆಯೇ" ಎಂದು ಅವರು ಹೇಳಿದ್ದಾರೆ. 
"ನನಗೆ ಈಗ ಹೊರೆಯೆನಿಸುವ ವಿಷಯವೆಂದರೆ, ಜನ ಕೆಲಸ ಮಾಡುವುದರ ಬದಲು,  ಕಲಾವಿದನಾಗುವ ಬದಲು ಜನಪ್ರಿಯತೆಯತ್ತ ಗುರಿ ನೆಡುತ್ತಿರುವುದು. ಈಗ ಜನಪ್ರಿಯನಾಗುವದು ಅತಿ ಸುಲಭ. ಕಷ್ಟ ಏನೆಂದರೆ ಕಲಾವಿದನಾಗಿ ಸೃಷ್ಟಿಸಿಕೊಳ್ಳುವುದು, ಬೆಳೆಯುವುದು ಮತ್ತು ಜನಪ್ರಿಯತೆಯಿಂದ ಗುರಿ ಕಳೆದುಕೊಳ್ಳದೆ ಇರುವುದು" ಎಂದು ಕೂಡ ಮಡೋನ್ನಾ ಹೇಳಿದ್ದಾರೆ. 
'ಪಾಪ್ ಕಲಾವಿದೆ' ಎನ್ನುವುದಕ್ಕಿಂತಲೂ ತನ್ನನ್ನು ಕಲಾವಿದೆ ಎಂದು ಕರೆದುಕೊಳ್ಳಲಿಚ್ಛಿಸುವ 58 ವರ್ಷದ ಗಾಯಕಿ ತನ್ನ ಕೆಲಸ ಎಂದಿಗೂ ಕ್ರಾಂತಿಕಾರಿಯಾಗಿರುತ್ತಿತ್ತು ಎಂದು ಕೂಡ ಹೇಳಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. 
"ನಾನು ನನ್ನನ್ನು ಪಾಪ್ ಗಾಯಕಿ ಎಂದು ಕರೆದುಕೊಳ್ಳುವುದಕ್ಕಿಂತಲೂ ಕಲಾವಿದೆ ಎಂದು ಹೇಳಿಕೊಳ್ಳುತ್ತೇನೆ. ಮತ್ತು ನಮ್ಮ ಕೆಲಸವನ್ನು ಕ್ರಾಂತಿಕಾರಿಯಾಗಿ ಮಾಡುವುದು ನಮ್ಮ ಹೊಣೆ. ಇದು ನಮ್ಮ ಜವಾಬ್ದಾರಿ, ಕರ್ತವ್ಯ ಮತ್ತು ಆದ್ಯತೆ" ಎಂದು ಮಡೋನ್ನಾ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.