'ವೇಲೆಯಿಲ್ಲ ಪಟ್ಟಾದರಿ' ರಿಮೇಕ್ ನಲ್ಲಿ ಅಮಲಾ ಪೌಲ್?
ನಂದಕಿಶೋರ್ ನಿರ್ದೇಶನದ, ಮನೋರಂಜನ್ ಅವರ ಎರಡನೇ ಸಿನೆಮಾ 'ವೇಲೆಯಿಲ್ಲ ಪಟ್ಟಾದರಿ' (ವಿಐಪಿ) ಸಿನೆಮಾದ ಕನ್ನಡ ರಿಮೇಕ್ ಚಿತ್ರೀಕರಣ ಸೆಪ್ಟೆಂಬರ್ ನಿಂದ ಪ್ರಾರಂಭವಾಗಲಿದೆ.

Published On :
ಬೆಂಗಳೂರು: ನಂದಕಿಶೋರ್ ನಿರ್ದೇಶನದ, ಮನೋರಂಜನ್ ಅವರ ಎರಡನೇ ಸಿನೆಮಾ 'ವೇಲೆಯಿಲ್ಲ ಪಟ್ಟಾದರಿ' (ವಿಐಪಿ) ಸಿನೆಮಾದ ಕನ್ನಡ ರಿಮೇಕ್ ಚಿತ್ರೀಕರಣ ಸೆಪ್ಟೆಂಬರ್ ನಿಂದ ಪ್ರಾರಂಭವಾಗಲಿದೆ. ರಾಕ್ ಲೈನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನೆಮಾಗೆ ನಾಯಕನಟಿಯ ಶೋಧದಲ್ಲಿತ್ತು ಚಿತ್ರತಂಡ. ಈಗ ಮೂಲಗಳ ಪ್ರಕಾರ ಅಮಲಾ ಪೌಲ್ ನಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮೂಲ ತಮಿಳಿನಲ್ಲಿ ಅವರು ಧನುಷ್ ಎದುರಿಗೆ ನಟಿಸಿದ್ದರಿಂದ ರಿಮೇಕ್ ನಲ್ಲಿಯೂ ಅವರೇ ಸೂಕ್ತ ಎನ್ನುತ್ತವೆ ಮೂಲಗಳು.
ಸದ್ಯಕ್ಕೆ ಎಸ್ ಕೃಷ್ಣ ಅವರ ನಿರ್ದೇಶನದ ಸುದೀಪ್ ಅವರ 'ಹೆಬ್ಬುಲಿ' ಸಿನಿಮಾದಲ್ಲಿಯೂ ಅಮಲಾ ನಟಿಸುತ್ತಿರುವುದು ವಿಶೇಷ.
"ಅವರು ಒಪ್ಪಿದರೆ ಮತ್ತು ಅವರ ಸಮಯ ಲಭ್ಯವಿದ್ದರೆ ವಿಐಪಿ ರಿಮೇಕ್ ಗೆ ಅಮಲಾ ಅವರಿಗೆ ಅವಕಾಶ ನೀಡಲು ನಿರ್ಮಾಪಕರು ಉತ್ಸುಕರಾಗಿದ್ದಾರೆ. ಅವರನ್ನು ಕೇಳಿಕೊಳ್ಳುವುದು ನಿಶ್ಚಿತ, ಆದರೆ ಅವರ ಒಪ್ಪಿಗೆ ಬಗ್ಗೆ ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ" ಎನ್ನುತ್ತವೆ ಮೂಲಗಳು.
ಹಾಗೆಯೇ ಮನೋರಂಜನ್ ಅವರ ತಂದೆ ತಾಯಿ ಪಾತ್ರಕ್ಕಾಗಿ ಖ್ಯಾತ ನಟರಾ ಶೋಧನೆಯಲ್ಲಿದೆ ಚಿತ್ರತಂಡ. ತಂದೆ ಪಾತ್ರಕ್ಕಾಗಿ ಮನೋರಂಜನ್ ಅವರ ತಂದೆ ರವಿಚಂದ್ರನ್ ಅವರು ಕೂಡ ಪಟ್ಟಿಯಲ್ಲಿದ್ದು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


