ಹಿರಿಯ ಪಂಚಭಾಷಾ ನಟಿ ಜ್ಯೋತಿಲಕ್ಷ್ಮಿ ವಿಧಿವಶ
ಅನಾರೋಗ್ಯದಿಂದ ಬಳಲುತ್ತಿದ್ದ ಪಂಚಭಾಷಾ ನಟಿ ಜ್ಯೋತಿಲಕ್ಷ್ಮಿ ಅವರು ವಿಧಿವಶರಾಗಿದ್ದಾರೆ...

ಚೆನ್ನೈ: ಅನಾರೋಗ್ಯದಿಂದ ಬಳಲುತ್ತಿದ್ದ ಪಂಚಭಾಷಾ ನಟಿ ಜ್ಯೋತಿಲಕ್ಷ್ಮಿ ಅವರು ವಿಧಿವಶರಾಗಿದ್ದಾರೆ.
63 ವರ್ಷದ ಜ್ಯೋತಿಲಕ್ಷ್ಮಿ ಅವರು ಇಂದು ಬೆಳಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಜ್ಯೋತಿಲಕ್ಷ್ಮಿ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ, ತೆಲುಗು, ಹಿಂದಿ, ತಮಿಳು ಚಿತ್ರಗಳಲ್ಲಿ ನೂರಾರು ಐಟಂ ಹಾಡುಗಳಿಗೆ ಕುಣಿದಿದ್ದರು. ಕನ್ನಡದಲ್ಲಿ ಕುಳ್ಳ ಏಜೆಂಟ್ 000, ಬೆಂಗಳೂರು ಮೇಲೆ, ಪ್ರತಿಧ್ವನಿ, ಚೆಲ್ಲಿದ ರಕ್ತ, ರಕ್ತ ಕಣ್ಣೀರು, ವಿಜಯದಶಮಿ ಚಿತ್ರಗಳಲ್ಲಿ ಜ್ಯೋತಿಲಕ್ಷ್ಮಿ ನಟಿಸಿದ್ದರು.
ಜ್ಯೋತಿಲಕ್ಷ್ಮಿ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಇಂದು ಸಂಜೆ ಜ್ಯೋತಿಲಕ್ಷ್ಮಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


