ಕೃತಿ ಕರಬಂಧ ಗುಣಮುಖ; 'ರಾಸ್ ರೀಬೂಟ್' ಗೆ ಡಬ್ಬಿಂಗ್ ಪ್ರಾರಂಭ
ಎರಡು ವಾರಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಕೃತಿ ಕರಬಂಧ ಈಗ ಗುಣಮುಖರಾಗಿದ್ದಾರೆ. ಅವರ ಬಾಲಿವುಡ್ ಪಾದಾರ್ಪಣೆ 'ರಾಸ್ ರಿಬೂಟ್' ಗೆ

Published On :
ಬೆಂಗಳೂರು: ಎರಡು ವಾರಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಕೃತಿ ಕರಬಂಧ ಈಗ ಗುಣಮುಖರಾಗಿದ್ದಾರೆ. ಅವರ ಬಾಲಿವುಡ್ ಪಾದಾರ್ಪಣೆ 'ರಾಸ್ ರಿಬೂಟ್' ಗೆ ಮುಂಬೈನಲ್ಲಿ ಇಂದಿನಿಂದ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೆ ಮೊದಲ ಬಾರಿಗೆ ನಟಿ ತಮ್ಮದೇ ಕಂಠದಲ್ಲಿ ಸಿನೆಮಾವೊಂದಕ್ಕೆ ಡಬ್ ಮಾಡುತ್ತಿರುವುದು. ವಿಕ್ರಂ ಭಟ್ ನಿರ್ದೇಶನದ, ಎಮ್ರಾನ್ ಹಶ್ಮಿ ನಿರ್ದೇಶನದ ಈ ಚಿತ್ರದ ಪ್ರಚಾರ ಹಾಡಿನ ಚಿತ್ರೀಕರಣದಲ್ಲಿಯೂ ಕೃತಿ ಭಾಗವಹಿಸಲಿದ್ದಾರೆ. ಈ ಸಿನೆಮಾ ವಿಶ್ವದಾದ್ಯಂತ ಸೆಪ್ಟೆಂಬರ್ 16 ಕ್ಕೆ ಬಿಡುಗಡೆಯಾಗಲಿದೆ.
ಹಾಗೆಯೇ ನಟಿ ಅವರ ತಮಿಳು ಸಿನೆಮಾ 'ಬ್ರೂಸ್ ಲಿ' ಸಿನೆಮಾದ ಹಾಡಿನ ಚಿತ್ರೀಕರಣದಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ. ಇದನ್ನು ಪ್ರಶಾಂತ್ ಪಂಡಿತ್ ರಾಜ್ ನಿರ್ದೇಶಿಸುತ್ತಿದ್ದು ಮುಖ್ಯ ಪಾತ್ರದಲ್ಲಿ ಜಿ ವಿ ಪ್ರಕಾಶ್ ನಟಿಸಿದ್ದಾರೆ.
ನಂತರ ಅವರು ಕನ್ನಡಕ್ಕೆ ಹಿಂದಿರುಗಿ ದುನಿಯಾ ವಿಜಯ್ ನಟನೆಯ 'ಮಾಸ್ತಿ ಗುಡಿ' ಸೆಟ್ ಗೆ ಸೆಪ್ಟೆಂಬರ್ ನಲ್ಲಿ ಸೇರಿಕೊಳ್ಳಲಿದ್ದಾರೆ. ನಾಗಶೇಖರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣವನ್ನು ಕೃತಿ ಗಾಯಗೊಂಡಿದ್ದರಿಂದ ಮುಂದೂಡಲಾಗಿತ್ತು.
ಮಾಸ್ತಿ ಗುಡಿ ಸಿನೆಮಾದಲ್ಲಿ ದುನಿಯಾ ವಿಜಯ್ ಜೊತೆಗೆ ಅಮೂಲ್ಯ ಕೂಡ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


