ಅಂತಿಮ ಹಂತದಲ್ಲಿ ಕೋಟಿಗೊಬ್ಬ-೨ ಚಿತ್ರೀಕರಣ
ಸುದೀಪ್ ನಟನೆಯ ದ್ವಿಭಾಷಾ ಸಿನೆಮಾ ಕೋಟಿಗೊಬ್ಬ-೨ ಅಂತಿಮ ಹಂತದ ಚಿತ್ರೀಕರಣದಲ್ಲಿದೆ. ತಮಿಳಿನಲ್ಲಿ 'ಮುಂದಿಂಜ ಇವನ ಪುಡಿ' ಎಂದು ಕರೆಯಲಾಗಿದ್ದು ಮೇ ೨ ರಿಂದ ಕೊನೆಯ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ

ಬೆಂಗಳೂರು: ಸುದೀಪ್ ನಟನೆಯ ದ್ವಿಭಾಷಾ ಸಿನೆಮಾ ಕೋಟಿಗೊಬ್ಬ-೨ ಅಂತಿಮ ಹಂತದ ಚಿತ್ರೀಕರಣದಲ್ಲಿದೆ. ತಮಿಳಿನಲ್ಲಿ 'ಮುಂದಿಂಜ ಇವನ ಪುಡಿ' ಎಂದು ಕರೆಯಲಾಗಿದ್ದು ಮೇ ೨ ರಿಂದ ಕೊನೆಯ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಮುಂಬೈನ್ನು ಆಯ್ಕೆ ಮಾಡಲಾಗಿದೆ.
ಈ ಎರಡು ಹಾಡುಗಳಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶಿಸಲಿದ್ದಾರೆ.
ಮೊದಲ ಹಾಡಿಗಾಗಿ ವೈಭವಯುತ ಸೆಟ್ ಹಾಕಲಾಗುತ್ತಿದ್ದು, ಇದು ಸಿನೆಮಾದಲ್ಲಿ ಸುದೀಪ್ ಅವರ ಪರಿಚಯದ ಹಾಡಾಗಲಿದೆಯಂತೆ. ಮತ್ತೊಂದು ಹಾಡಿನಲ್ಲಿ ನಟಿ ನಿತ್ಯ ಮೆನನ್ ಭಾಗವಹಿಸಲಿದ್ದಾರಂತೆ.
ಹೆಚ್ಚು ವಿವರಗಳನ್ನು ನಿಡಲು ಇಚ್ಛಿಸದ ನಿರ್ಮಾಪಕ ಸೂರಪ್ಪ ಬಾಬು "ಈ ಸಿನೆಮಾ ಬಿಡುಗಡೆಯಾದ ಮೇಲೆ ಈ ಹಾಡುಗಳೇ ಎಲ್ಲ ಮಾತನಾಡಲಿವೆ. ಈ ಎರಡು ಹಾಡುಗಳ ಚಿತ್ರೀಕರಣ ಮುಗಿದ ನಂತರ ಇಡೀ ಚಿತ್ರೀಕರಣ ಸಂಪೂರ್ಣಗೊಂಡಂತೆ ಆಗ ನಾನು ಎರಡೂ ಭಾಷೆಗಳಲ್ಲಿ ಬಿಡುಗಡೆ ದಿನಾಂಕ ಘೋಷಿಸಲಿದ್ದೇನೆ" ಎಂದಿದ್ದಾರೆ.
ಜೊತೆಗೆ ಸಿನೆಮಾದ ಡಬ್ಬಿಂಗ್ ಪ್ರಕ್ರಿಯೆ ಕೂಡ ಜಾರಿಯಲ್ಲಿದೆ. ಮುಖೇಶ್ ತಿವಾರಿ, ಶರತ್ ಲೋಹಿತಾಶ್ವ, ನಸ್ಸೆರ್, ರವಿಶಂಕರ್ ಮತ್ತು ಚಿಕ್ಕಣ್ಣ ಕೂಡ ತಾರಾಗಣದಲ್ಲಿದ್ದಾರೆ. ಡಿ ಇಮಾಮ್ ಸಂಗೀತ ನೀಡಿದ್ದು, ರಾಜರಥಿನಂ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


