ಹೃತಿಕ್ ಬೆಂಬಲಕ್ಕೆ ನಿಂತ ಕಂಗನಾ ಮಾಜಿ ಗೆಳೆಯ
ಕಂಗನಾ ಹಾಗೂ ಹೃತಿಕ್ ನಡುವಿನ ಜಗ್ಗಜಗ್ಗಾಟದ ಜಗಳ ತಾರಕ್ಕೇರಿದ್ದು, ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಇಬ್ಬರ ನಡುವಿನ ಫೋಟೋ ಕುರಿತಂತೆ ಇದೀಗ ಕಂಗನಾ ಮಾಜಿ ಗೆಳೆಯ...

ನವದೆಹಲಿ: ಕಂಗನಾ ಹಾಗೂ ಹೃತಿಕ್ ನಡುವಿನ ಜಗ್ಗಜಗ್ಗಾಟದ ಜಗಳ ತಾರಕ್ಕೇರಿದ್ದು, ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಇಬ್ಬರ ನಡುವಿನ ಫೋಟೋ ಕುರಿತಂತೆ ಇದೀಗ ಕಂಗನಾ ಮಾಜಿ ಗೆಳೆಯ ಅಧ್ಯಾಯನ್ ಸುಮನ್ ಅವರು ಹೃತಿಕ್ ಬೆಂಬಲಕ್ಕೆ ನಿಂತಿದ್ದಾರೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದಲ್ಲಿ ಮಾತನಾಡಿರುವ ಅವರು, ಫೋಟೋಶಾಪ್ ಮೂಲಕ ಫೋಟೋವನ್ನು ತಯಾರು ಮಾಡಲಾಗಿದೆ. ಫೋಟೋ ಕುರಿತಂತೆ ತಪ್ಪಾಗಿ ಕಥೆಯನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ಹೃತಿಕ್ಕ ಬಗ್ಗೆ ಯೋಚಿಸಿದರೆ ಪಾಪ ಎನಿಸುತ್ತದೆ. ಹೃತಿಕ್ ಹಾಗೂ ಅವರ ಕುಟುಂಬದ ಬಗ್ಗೆ ಕರುಣೆ ಹುಟ್ಟುತ್ತಿದೆ. ಪ್ರಕರಣದಿಂದ ಅವರಿಗಾಗುತ್ತಿರುವ ನೋವು ಅರ್ಥವಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಹೃತಿಕ್ ಎಲ್ಲಾ ರೀತಿಯಲ್ಲಿ ಸರಿಯಾಗಿದ್ದಾನೆ, ಕಂಗನಾದೆ ಎಲ್ಲಾ ತಪ್ಪಿದೆ ಎಂದು ಹೇಳುವುದಿಲ್ಲ. ಆದರೆ, ಹೃತಿಕ್ ಪರವಾಗಿ ಯಾರಾದರೂ ಮಾತನಾಡಬೇಕು ಎಂದೆನಿಸುತ್ತಿದೆ.
ಹೃತಿಕ್ ಗೆ ಕಂಗನಾಳ ಬಗ್ಗೆ ಯಾವುದೇ ಭಾವನೆ ಇರಲಿಲ್ಲ. ಆದರೆ, ಕಂಗನಾಗೆ ಹೃತಿಕ್ ಎಂದರೆ ಇಷ್ಟವಿತ್ತು. ಕೈಟ್ಸ್ ಚಿತ್ರದ ಚಿತ್ರೀಕರಣಕ್ಕೆಂದು ಕಂಗನಾ ಲಾಸ್ ವೇಗಾಸ್ ಹೋಗಿದ್ದಳು. ಚಿತ್ರೀಕರಣ ಮುಗಿಸಿ ಬಂದಾಗಿನಿಂದಲೂ ಕಂಗನಾಗೆ ಹೃತಿಕ್ ನನ್ನು ಇಷ್ಟಪಡುತ್ತಿದ್ದಳು.
ಒಂದು ದಿನ ಕಂಗನಾಳ ಮೊಬೈಲ್ ನ್ನು ನೋಡಿದಾಗ ಹೃತಿಕ್ ಮೊಬೈಲ್ ನಿಂದ 60-70 ಸಂದೇಶಗಳು ಬಂದಿರುವುದನ್ನು ನೋಡಿದೆ. ಈ ವೇಳೆ ಕಂಗನಾಳನ್ನು ಕೇಳಿದಾಗ ಸಾಮಾನ್ಯ ಸಂದೇಶಗಳಷ್ಟೇ ಬೇರೇನು ಅಲ್ಲ ಎಂದಿದ್ದಳು. ಇದನ್ನು ನಾನು ನಂಬಿದ್ದೆ. ಯಾಕೆಂದರೆ ಹೃತಿಕ್ ಹಾಗೂ ಕಂಗನಾ ಇಬ್ಬರೂ ಎಲ್ಲಿಯಾದರೂ ಜೊತೆಗೆ ಸೇರಿದ್ದಾಗ, ಹೃತಿಕ್ ಕಂಗನಾಳಿಂದ ಅಂತರ ಕಾಪಾಡುತ್ತಿದ್ದ. ಹೃತಿಕ್ ಗೆ ಕಂಗನಾಳ ಬಗ್ಗೆ ಯಾವುದೇ ಭಾವನೆಗಳಿರಲಿಲ್ಲ. ಹೀಗಾಗಿ ಕಂಗನಾ ಹತಾಶೆಯಲ್ಲಿದ್ದಳು ಎಂದು ಹೇಳಿದ್ದಾರೆ.
ಕಳೆದ 1 ವರ್ಷದಿಂದಲೂ ಹೃತಿಕ್ ರೋಷನ್ ಮತ್ತು ಕಂಗನಾ ಮಧ್ಯೆ ಸಂಬಂಧವಿದೆ ಎಂಬ ವದಂತಿಗಳು ಹರಿದಾಡುತ್ತಿದೆ. ಇದನ್ನು ಎಲ್ಲರೂ ನಿಜವೆಂದೇ ನಂಬಿದ್ದರು. ಆದರೆ ಇಬ್ಬರೂ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲೂ ಗಾಸಿಪ್ ಹಬ್ಬಿರಲಿಲ್ಲ. ಆದರೆ, ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ಹೃತಿಕ್ ತಮ್ಮ ಮಾಜಿ ಪ್ರಿಯಕರ ಎಂದು ಹೇಳುವ ಮೂಲಕ ಬಾಂಬ್ ವೊಂದನ್ನು ಸಿಡಿಸಿದ್ದರು. ಇಲ್ಲಿಂದ ಇಬ್ಬರ ಮಧ್ಯೆ ವಿವಾದವೊಂದು ಆರಂಭವಾಗಿತ್ತು.
ಒಂದು ಕಡೆ ಹೃತಿಕ್ ಪರ ವಕೀಲರು ಕಂಗನಾ ಅವರದ್ದು ಒನ್ ವೇ ಲವ್ ಆಗಿದ್ದು ಕಂಗನಾ ಹೃತಿಕ್ ಅವರನ್ನು ಹಿಂಬಾಲಿಸುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಕಂಗನಾ ಪರ ವಕೀಲರು, ಹೃತಿಕ್ ಅವರೇ ಕಂಗನಾಳ ಇಮೇಲ್ ನ್ನು ಹ್ಯಾಕ್ ಮಾಡಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ಇದರಂತೆ ಹೃತಿಕ್ ಕೂಡ ತಾವು ಹೇಳುತ್ತಿರುವುದು ಸತ್ಯ ಎನ್ನುತ್ತಿದ್ದರೆ, ಕಂಗನಾ ಕೂಡ ತಾವು ಹೇಳುತ್ತಿರುವುದು ಸತ್ಯ ಎನ್ನುತ್ತಿದ್ದಾರೆ.
ಈ ಎಲ್ಲಾ ಆರೋಪ ಹಾಗೂ ಪ್ರತ್ಯಾರೋಪಗಳ ನಡುವೆ ಇತ್ತೀಚೆಗಷ್ಟೇ ಇಬ್ಬರ ನಡುವಿನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು. ಅಲ್ಲದೆ, ಫೋಟೋ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


