ಪೂಜಾಗಾಂಧಿ ಪ್ರೊಡಕ್ಷನ್ ನಲ್ಲಿ ಕನ್ನಡ ಚಿತ್ರ ನಿರ್ದೇಶಿಸಲಿದ್ದಾರೆ ಜೆಡಿ ಚಕ್ರವರ್ತಿ?
ಕನ್ನಡ ಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಲು ಪಣ ತೊಟ್ಟಿರುವ ಮಳೆ ಹುಡುಗಿ ಪೂಜಾ ಗಾಂಧಿ ತಮ್ಮದೇ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡುವ ...

ಬೆಂಗಳೂರು: ಕನ್ನಡ ಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಲು ಪಣ ತೊಟ್ಟಿರುವ ಮಳೆ ಹುಡುಗಿ ಪೂಜಾ ಗಾಂಧಿ ತಮ್ಮದೇ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುವ ಚಿತ್ರವನ್ನು ಬಹುಭಾಷಾ ನಿರ್ದೇಶಕ ಜೆಡಿ ಚಕ್ರವರ್ತಿ ಅವರಿಂದ ನಿರ್ದೇಶಿಸಲು ಪೂಜಾ ಉತ್ಸುಕರಾಗಿದ್ದಾರೆ. ಬೇರೊಂದು ಸಿನಿಮಾ ಶೂಟಿಂಗ್ ನಲ್ಲಿ ಸದ್ಯ ಬ್ಯುಸಿ ಇರುವ ಪೂಜಾ ಗಾಂಧಿ ತಮ್ಮ ಬಾಕಿ ಉಳಿದಿರುವ ಎಲ್ಲಾ ಪ್ರಾಜೆಕ್ಟ್ ಗಳನ್ನು ಮುಗಿಸಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಲಿದ್ದಾರೆ.
ರಾವಣಿ ಚಿತ್ರದಲ್ಲಿ ಜೆ.ಡಿ ಚಕ್ರವರ್ತಿ ಜೊತೆ ಪೂಜಾ ಅಭಿನಯಿಸುತ್ತಿದ್ದು ಶೀಘ್ರವೇ ಈ ಚಿತ್ರ ತೆರೆ ಕಾಣಲಿದೆ. ಪೂಜಾ ನಿರ್ಮಾಣ ಮಾಡುವ ಚಿತ್ರ ಆಕೆಯ ಸಿನಿಮಾ ಕೆರಿಯರ್ ನಲ್ಲೇ ಅತಿ ದೊಡ್ಡ ಬಜೆಟ್ ನ ಸಿನಿಮಾವಾಗಲಿದೆ. ಒಂದು ಹಾಡನ್ನು ಸುಮಾರು 37 ದಿನಗಳ ಕಾಲ ಚಿತ್ರೀಕರಿಸಲಿದ್ದಾರೆ.
ಮೇ 1ರಂದು ಜೆಡಿ ಚಕ್ರವರ್ತಿ ಬೆಂಗಳೂರಿಗೆ ಆಗಮಿಸಲಿದ್ದು, ಅಂದೇ ಚಿತ್ರ ನಿರ್ದೇಶನದ ಎಲ್ಲಾ ವಿವರಗಳನ್ನು ತಿಳಿಸಲಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಸಿನಿಮಾಗಲ್ಲೂ ಜೆ.ಡಿ ಚಕ್ರವರ್ತಿ ಕೆಲಸ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


