ಸಿನಿಮಾ ಸುದ್ದಿ

ಬ್ಯೂಟಿಫುಲ್ ಮನಸ್ಸುಗಳ ಫೋಟೋ ಶೂಟ್

'ಲೂಸಿಯಾ' ಜೋಡಿಯನ್ನು ಮತ್ತೆ ಒಟ್ಟಿಗೆ ತಂದಿರುವ ನಿರ್ದೇಶಕ ಜಯತೀರ್ಥ ಚಿತ್ರೀಕರಣದ ಜೊತೆಜೊತೆಗೇ ಥೀಮ್ ಫೋಟೋ ಶೂಟ್ ಮಾಡಿ ಮುಗಿಸಿದ್ದಾರೆ. 'ಬ್ಯೂಟಿಫುಲ್ ಮನಸುಗಳು'

ಬ್ಯೂಟಿಫುಲ್ ಮನಸ್ಸುಗಳ ಫೋಟೋ ಶೂಟ್
'ಬ್ಯೂಟಿಫುಲ್ ಮನಸುಗಳು' ಚಿತ್ರದಲ್ಲಿ ಶೃತಿ ಹರಿಹರನ್ ಮತ್ತು ನೀನಾಸಮ್ ಸತೀಶ್
Published On :

ಬೆಂಗಳೂರು: 'ಲೂಸಿಯಾ' ಜೋಡಿಯನ್ನು ಮತ್ತೆ ಒಟ್ಟಿಗೆ ತಂದಿರುವ ನಿರ್ದೇಶಕ ಜಯತೀರ್ಥ ಚಿತ್ರೀಕರಣದ ಜೊತೆಜೊತೆಗೇ ಥೀಮ್ ಫೋಟೋ ಶೂಟ್ ಮಾಡಿ ಮುಗಿಸಿದ್ದಾರೆ. 'ಬ್ಯೂಟಿಫುಲ್ ಮನಸುಗಳು' ಚಿತ್ರದಲ್ಲಿ ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಶೃತಿ ಹರಿಹರನ್ ಮತ್ತು ನೀನಾಸಮ್ ಸತೀಶ್ ಈ ಥೀಮ್ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ.

ಈ ಫೋಟೋ ಶೂಟ್ ಕಥೆಗೆ ಹೊಂದಾಣಿಕೆಯಾಗುತ್ತದಂತೆ, "ಕಥೆಯಲ್ಲಿ ಐದು ಎಳೆಗಳಿವೆ -- ಮೊದಲನೆಯದು ಬೋಟಿ-ಟೀ. ನಾಯಕ, ಬಾರ್ ಮಾಲೀಕನ ಮಗ, ಪೂಜಾರಿ ಮಗಳನ್ನು ಭೇಟಿ ಮಾಡುತ್ತಾನೆ. ಅವರ ಪ್ರೀತಿ ಎಷ್ಟು ಸರಳವಾಗಿರುತ್ತದೆಂದರೆ, ಅವರ ಮೊದಲ ರೊಮ್ಯಾಂಟಿಕ್ ಮಾತುಕತೆ ನಡೆಯುವುದೆಲ್ಲವೂ ಟೀ ಕುಡಿಯುವಾಗ. ಅದನ್ನು ಈ ಚಿತ್ರದಲ್ಲಿ ಸೆರೆಹಿಡಿದಿದ್ದೇವೆ" ಎಂದು ವಿವರಿಸುತ್ತಾರೆ ಜಯತೀರ್ಥ.

ನೀರು ಗುಳ್ಳೆಗಳು, ಮಳೆ, ಸಿಡಿಲು, ನಡಿಗೆ ಇತರ ಥೀಮ್ ಗಳಂತೆ. "ಆಯಾಯ ಚಿತ್ರೀಕರಣ ನಡೆಯುವಾಗ ಚಿತ್ರಗಳನ್ನು ಬಿಡುಗಡೆ ಮಾಡಲಿದ್ದೇವೆ" ಎನ್ನುತ್ತಾರೆ ನಿರ್ದೇಶಕ.

ಎರಡನೇ ಹಂತದ ಚಿತ್ರೀಕರಣ ಏಪ್ರಿಲ್ ೨೧ರಿಂದ ಪ್ರಾರಂಭವಾಗಲಿದೆಯಂತೆ. ಬಿಜೆ ಭರತ್ ಸಂಗೀತ ಒದಗಿಸುತ್ತಿದ್ದು, ಕಿರಣ್ ಹಂಪಾಪುರ ಸಿನೆಮ್ಯಾಟೋಗ್ರಾಫರ್. "ಮೇ ಅಂತ್ಯಕ್ಕೆ ಚಿತ್ರೀಕರಣ ಮುಗಿಸುತ್ತೇವೆ" ಎನ್ನುತ್ತಾರೆ ನಿರ್ದೇಶಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.