ಅಪ್ಪನಿಂದ ಎಂದಿಗೂ ಪಾಕೆಟ್ ಮನಿ ಪಡೆದಿಲ್ಲ: ದೀಪಿಕಾ ಪಡುಕೋಣೆ
ಬಾಲಿವುಡ್ ನಲ್ಲಿ ಅತೀಹೆಚ್ಚು ವೇತನ ಪಡೆಯುವ ನಟಿಯರ ಸಾಲಿನಲ್ಲಿರುವ, ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಬೆಡಗಿ ಜನಪ್ರಿಯ ನಟಿ ದೀಪಿಕಾಗೆಗೆ ಹಣಕಾಸಿನ ವ್ಯವಹಾರವೇ ಗೊತ್ತಿಲ್ಲವೆಂದರೆ ನಂಬಲಾಗುತ್ತದೆಯೇ. ಹೌದು ನಂಬಲೇಬೇಕೆಂದು ದೀಪಿಕಾ ಹೇಳುತ್ತಾರೆ...

ಬಾಲಿವುಡ್ ನಲ್ಲಿ ಅತೀಹೆಚ್ಚು ವೇತನ ಪಡೆಯುವ ನಟಿಯರ ಸಾಲಿನಲ್ಲಿರುವ, ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಬೆಡಗಿ ಜನಪ್ರಿಯ ನಟಿ ದೀಪಿಕಾಗೆಗೆ ಹಣಕಾಸಿನ ವ್ಯವಹಾರವೇ ಗೊತ್ತಿಲ್ಲವೆಂದರೆ ನಂಬಲಾಗುತ್ತದೆಯೇ. ಹೌದು ನಂಬಲೇಬೇಕೆಂದು ದೀಪಿಕಾ ಹೇಳುತ್ತಾರೆ.
ನನಗೆ ಹಣಕಾಸಿನ ವ್ಯವಹಾರ ನೋಡಿಕೊಳ್ಳಲು ಬರುವುದಿಲ್ಲ. ಹೀಗಾಗಿ ಇದರ ಜವಾಬ್ದಾರಿಯನ್ನು ನನ್ನ ತಂದೆಗೆ ಹಾಗೂ ಅಣ್ಣನಾದ ಮಾಜಿ ಬ್ಯಾಡ್ಮಿಂಟನ್ ಪ್ರಕಾಶ್ ಪಡುಕೋಣೆ ಅವರಿಗೆ ನೀಡಿದ್ದೇನೆ ಎಂದು ದೀಪಿಕಾ ಹೇಳಿಕೊಂಡಿದ್ದಾಳೆ.
ಮುಂಬೈನಲ್ಲಿ ಆಯೋಜಿಸಿದ್ದ ಖಾಸಗಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾನು ಮೊದಲು ಸಂಪಾದಿಸಿದ ಹಣದ ಬಗ್ಗೆಯೂ ನನಗೆ ನೆನಪಿಲ್ಲ. ಈ ವರೆಗೂ ನಾನು ಎಷ್ಟು ಹಣವನ್ನು ಸಂಪಾದಿಸಿದ್ದೇನೆಂಬುದು ನನಗೇ ತಿಳಿದಿಲ್ಲ. ನಾನು ಸಂಪಾದಿಸಿದ ಹಣವನ್ನು ಹೇಗೆ ಮತ್ತು ಎಲ್ಲಿ ಹೂಡಿಕೆ ಮಾಡಿಬೇಕೆಂಬ ಬಗ್ಗೆ ತಿಳಿದಿಲ್ಲ. ಹಾಗಾಗಿ ಹಣಕಾಸಿನ ಎಲ್ಲಾ ವ್ಯವಹಾರವನ್ನು ನನ್ನ ತಂದೆಯೇ ನೋಡಿಕೊಳ್ಳುತ್ತಾರೆ. ಇದಲ್ಲದೆ ನನಗೆ ತಂತ್ರಜ್ಞಾನದ ಬಗ್ಗೆಯೂ ಅಷ್ಟಾಗಿ ಗೊತ್ತಿಲ್ಲ. ಇಂದಿಗೂ ಆಪ್ಸ್ ಗಳೆಂದರೇನು ಎಂಬುದು ನನಗೆ ಸಂಪೂರ್ಣವಾಗಿ ಗೊತ್ತಿಲ್ಲ. ಕೇವಲ ಫೋಟೋ ತೆಗೆಯುವುದು ಮತ್ತು ಅವುಗಳನ್ನು ಪ್ರಿಂಟ್ ಕೊಡುವುದು ಮತ್ತೆ ಅವುಗಳನ್ನು ಅಲ್ಬಂನಲ್ಲಿಡುವುದಷ್ಟೇ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ತನ್ನ ಬಾಲ್ಯದ ನೆನಪುಗಳ ಬಗ್ಗೆ ಮಾತನಾಡಿರುವ ಅವರು, ನಾನು ಚಿಕ್ಕವಳಿದ್ದಾಗಿನಿಂದಲೂ ಅಪ್ಪ ನ ಬಳಿ ಪಾಕೆಟ್ ಮನಿ ಪಡೆದೇ ಇಲ್ಲ. ಹಣಕಾಸಿನ ವ್ಯವಹಾರವೆಂದರೆ ನನಗೆ ಅರ್ಥವಾಗುವುದಿಲ್ಲ. ಹೀಗಾಗಿ ಹಣಕಾಸಿನ ವ್ಯವಹಾರ ಹಾಗೂ ನಾನು ತುಂಬಾನೇ ದೂರ. ಹಣಕಾಸಿನ ವ್ಯವಹಾರವನ್ನೆಲ್ಲಾ ಅಪ್ಪ ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


