ಇಂದ್ರ ಲೋಕದಲ್ಲಿ ಸನ್ನಿ ಮೋಹ
ಕನ್ನಡದ ಮಟ್ಟಿಗೆ ಇಂದ್ರಜಿತ್ ಲಂಕೇಶ್ ಸ್ಟಾರ್ ನಿರ್ದೇಶಕ ಎಂದೇ ಹೆಸರಾದವರು. ಹಾಗಂತ ಅದು ತಾವೇ ಕರೆದುಕೊಂಡಿದ್ದಲ್ಲ. ಅವರ ಸಿನಿಮಾಗಳ ....

ಕನ್ನಡದ ಮಟ್ಟಿಗೆ ಇಂದ್ರಜಿತ್ ಲಂಕೇಶ್ ಸ್ಟಾರ್ ನಿರ್ದೇಶಕ ಎಂದೇ ಹೆಸರಾದವರು. ಹಾಗಂತ ಅದು ತಾವೇ ಕರೆದುಕೊಂಡಿದ್ದಲ್ಲ. ಅವರ ಸಿನಿಮಾಗಳ ಅಂದ, ಚಂದದ ಮೂಲಕ ಬಂದ ಬಿರುದು ಅದು. ತೆರೆಯಲ್ಲಿ ಹತ್ತಾರು ರೀತಿಯ ಕಲರ್ ಫುಲ್ ವೈಭೋಗವನ್ನೇ ಕಟ್ಟಿಕೊಡುವ ಕೈ ಚಳಕ ಅವರದ್ದು. ತುಂಟಾಟ, ಮೊನಲಿಸಾ. ಐಶ್ವರ್ಯ, ಲಂಕೇಶ್ ಪತ್ರಿಕೆ ಸೇರಿದಂತೆ ಅವರ ನಿರ್ದೇಶನದ ಚಿತ್ರಗಳೇ ಇದಕ್ಕೆ ಸಾಕ್ಷಿ. ಅವರ ಚಿತ್ರಗಳೆಂದರೆ ಒಂದು ರೀತಿಯ ವಿಶೇಷ ಇದ್ದೇ ಇರುತ್ತದೆ. ಒಂದು ರೀತಿಯ ಸಕಲೈಶ್ವರ್ಯವನ್ನು ಸಮ್ಮಿಳಿತಗೊಳಿಸುವ ದೃಶ್ಯ ಶ್ರೀಮಂತಿಕೆಯಿಂದ ಲವ್ ಯೂ ಅಲಿಯ ಕೂಡ ಹೊರತಾಗಿಲ್ಲ.
ಹಾಡುಗಳ ಮೆರವಣಿಗೆ
ಈ ಚಿತ್ರದ 5 ಹಾಡುಗಳನ್ನೂ ಕವಿರಾಜ್ ಬರೆದಿದ್ದು, ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಸಂಜು ವೆಡ್ಸ್ ಗೀತಾ ಚಿತ್ರದ ಮೂಲಕ ಹಿಟ್ ಆದ ಜೋಡಿ ಇದು. ಈಗ ಲವ್ ಯೂ ಅಲಿಯಾ ದಲ್ಲೂ ಅಂತದ್ದೇ ಕಮಾಲ್ ಮಾಡಲಿದೆಯಂತೆ. ಸಂಜೆ ವೇಳೆ ಎನ್ನುವ ಹಾಡು ಕೌಂಟ್ ಡೌನ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಲಕ್ಷಾಂತಕ ಹಿಟ್ಸ್ ಮತ್ತು ಲೈಕ್ ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


