ಬೈಕ್ ಕೊಂಡದ್ದು ಬಿಡಿ; 'ನಟರಾಜ ಸರ್ವಿಸ್' ಅರ್ಪಿಸಲಿರುವ ಪುನೀತ್
ಇತ್ತೀಚೆಗಷ್ಟೇ ಐಶಾರಾಮಿ ಬೈಕೊಂದನ್ನು ಕೊಂಡು ಸುದ್ದಿಯಲ್ಲಿದ್ದ ನಟ ಪುನೀತ್ ರಾಜಕುಮಾರ್ ಅವರ ಹೊಸ ಚಿತ್ರದ ಹೆಸರು 'ನಟರಾಜ ಸರ್ವಿಸ್'. ಈ

ಬೆಂಗಳೂರು: ಇತ್ತೀಚೆಗಷ್ಟೇ ಐಶಾರಾಮಿ ಬೈಕೊಂದನ್ನು ಕೊಂಡು ಸುದ್ದಿಯಲ್ಲಿದ್ದ ನಟ ಪುನೀತ್ ರಾಜಕುಮಾರ್ ಅವರು ಅರ್ಪಿಸಲಿರುವ ಹೊಸ ಚಿತ್ರದ ಹೆಸರು 'ನಟರಾಜ ಸರ್ವಿಸ್'. ಈ ಯೋಜನೆಗಾಗಿ ಜೊತೆಗೂಡಿರುವವರು ಎನ್ ಎಸ್ ರಾಜಕುಮಾರ್, ಪವನ್ ಒಡೆಯರ್ ಮತ್ತು ಪುನೀತ್.
ರಾಜಕುಮಾರ್ ಈ ಹಿಂದೆ ಪುನೀತ್ ಅವರ ಪೃಥ್ವಿ ಮತ್ತು ಮೈತ್ರಿ ಚಿತ್ರದ ನಿರ್ಮಾಪಕರು. ಪವನ್ ಒಡೆಯರ್, ಪುನೀತ್ ಅವರ 'ರಣವಿಕ್ರಮ' ನಿರ್ದೇಶಿಸಿದ್ದರು. ಈಗ ಈ ಚಿತ್ರೋದ್ಯಮತ್ರಯರು ಒಟ್ಟುಗೂಡಿ ಮ್ಯಾಜಿಕ್ ಮಾಡಲಿದ್ದಾರೆಯೇ? ಆದರೆ ನಾಯಕ ನಟ ನಟಿ ಹಾಗು ಉಳಿದ ಪಾತ್ರವರ್ಗದ ಶೋಧನೆ ನಡೆಯುತ್ತಿದೆ ಎನ್ನಲಾಗಿದೆ.
ಇದು ರೋಮ್ಯಾಂಟಿಕ್ ಹಾಸ್ಯ ಚಿತ್ರ ಎನ್ನಲಾಗಿದ್ದು, ಪಾತ್ರವರ್ಗವನ್ನು ಅಂತಿಮಗೊಳಿಸಲಾಗುತ್ತಿದೆ. ಪವನ್ ಒಡೆಯರ್ ಸಿನೆಮಾಗೆ ಚಿತ್ರಕತೆ ಬರೆದಿದ್ದು, ಸಿನೆಮಾದ ಎಳೆಯ ಗುಟ್ಟು ಬಿಚ್ಚಿಡದಂತೆ ಚಿತ್ರ ತಂಡ ತುಟಿ ಮುಚ್ಚಿದೆ.
ಪವನ್ ಅವರು ತಮ್ಮ 'ಜೆಸ್ಸಿ' ಚಲನಚಿತ್ರದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಈ ಸಿನೆಮಾ ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


