ಸಿನಿಮಾ ಸುದ್ದಿ

ಕೃಷ್ಣನಿಗೆ ಒಲಿದ ಎರಡು ದೊಡ್ಡ ಸಿನೆಮಾಗಳು

'ಮದರಂಗಿ' ಖ್ಯಾತಿಯ ಆರು ಅಡಿ ೨ ಅಂಗುಲ ಉದ್ದದ ನಟ ಕೃಷ್ಣನಿಗೆ ಅದೃಷ್ಟ ಒಲಿದೆದೆ ಎನ್ನಬೇಕು. ತನ್ನ ಮುಂದಿನ ಚಿತ್ರ 'ಚಾರ್ಲಿ' ಬಿಡುಗಡೆಗೆ ಇನ್ನೂ ಕಾಯುತ್ತಿರುವಾಗಲೇ,

ಕೃಷ್ಣನಿಗೆ ಒಲಿದ ಎರಡು ದೊಡ್ಡ ಸಿನೆಮಾಗಳು
ನಟ ಪುನೀತ್ ರಾಜಕುಮಾರ್ ಮತ್ತು ನಟ ಕೃಷ್ಣ
Published On :

ಬೆಂಗಳೂರು: 'ಮದರಂಗಿ' ಖ್ಯಾತಿಯ ಆರು ಅಡಿ ೨ ಅಂಗುಲ ಉದ್ದದ ನಟ ಕೃಷ್ಣನಿಗೆ ಅದೃಷ್ಟ ಒಲಿದೆದೆ ಎನ್ನಬೇಕು. ತನ್ನ ಮುಂದಿನ ಚಿತ್ರ 'ಚಾರ್ಲಿ' ಬಿಡುಗಡೆಗೆ ಇನ್ನೂ ಕಾಯುತ್ತಿರುವಾಗಲೇ, ಹುಚ್ಚ, ಮುಂಬೈ ಮತ್ತು ಲೋಕಲ್ ಟ್ರೇನ್ ಸಿನೆಮಾಗಳು ಪಟ್ಟಿಯಲ್ಲಿವೆ. ಹುಚ್ಚ ಕೂಡ ಸಂಪೂರ್ಣವಾಗಿದ್ದು ಮತ್ತೆರಡು ಸಿನೆಮಾಗಳ ಚಿತ್ರೀಕರಣ ಪ್ರಾರಂಭವಾಗಬೇಕಿದೆ.

ಆದರೆ ನಟ ಎಚ್ಚರಿಕೆಯ ನಡೆಯನ್ನು ಇಡುತ್ತಿದ್ದಾರಂತೆ. ಬೇರೆಯವರು ನಾನು ಬಹಳ ನಿಧಾನವಾಗಿದ್ದೇನೆ ಎಂದು ತಿಳಿದರೂ ಕೂಡ ಅದೇ ಸರಿಯಾದ ಧೃಢ ಮಾರ್ಗ ಎನ್ನುತ್ತಾರೆ. "ನಾನು ಜಯಣ್ಣ ಮತ್ತು ಎಂ ಎನ್ ಕುಮಾರ್ ಅವರ ಎರಡು ದೊಡ್ಡ ಸಿನೆಮಾಗಳಿಗೆ ಸಹಿ ಮಾಡಿದ್ದೇನೆ. ಜಯಣ್ಣ ಅವರ ಸಿನೆಮಾವನ್ನು ನೃತ್ಯ ನಿರ್ದೇಶಕನಿಂದ ನಿರ್ದೇಶಕರಾದ ಮುರಳಿ ನಿರ್ದೇಶಿಸಲಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಒಪ್ಪಂದ ಆಗಿದ್ದು, ನವೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ" ಎನ್ನುತ್ತಾರೆ ಕೃಷ್ಣ.

ಎಂ ಎನ್ ಕುಮಾರ್ ಅವರ ಸಿನೆಮಾದ ಬಗ್ಗೆ ಮಾತನಾಡುವ ಕೃಷ್ಣ, ಚೊಚ್ಚಲ ನಿರ್ದೇಶಕ ಮಹಂತೇಶ್ ಸಿನೆಮಾ ನಿರ್ದೇಶಿಸಲಿದ್ದಾರಂತೆ. 'ಚಾರ್ಲಿ'ಯ ವಿತರಣೆಯನ್ನು ಕೂಡ ಎಂ ಎನ್ ಕುಮಾರ ವಹಿಸಿಕೊಂಡಿದ್ದು, ತಮ್ಮ ಮೊದಲ ಚಿತ್ರ ಮದರಂಗಿ ಕೂಡ ಅವರೇ ವಿತರಿಸಿದ್ದು ಎನ್ನುತ್ತಾರೆ.

ಅಲ್ಲದೆ ಪುನೀತ್ ರಾಜಕುಮಾರ್ ಅವರ 'ದೊಡ್ಮನೆ ಹುಡುಗ' ಸಿನೆಮಾದಲ್ಲೂ ಪುನೀತ್ ಅವರ ಸಹೋದರನಾಗಿ ಕೂಡ ನಟಿಸುತ್ತಿದ್ದಾರೆ. ತಾವೇ ಸ್ವತಹಃ ನಾಯಕನಟನಾಗಿದ್ದರೂ ತಮ್ಮ ಮಾರ್ಗದರ್ಶಿ ನಿರ್ದೇಶಕ ಸೂರಿ ಹೇಳಿದ್ದಕ್ಕೆ ಈ ಪಾತ್ರ ಒಪ್ಪಿಕೊಂಡಿರುವಾದಾಗಿ ತಿಳಿಸುತ್ತಾರೆ ಕೃಷ್ಣ. "ನಾನು ಪುನೀತ್ ಅವರ ದೊಡ್ಡ ಅಭಿಮಾನಿ. ಅವರ ಜಿಮ್ ನಲ್ಲೇ ನಾನು ವರ್ಕೌಟ್ ಮಾಡುವುದು. ಅಪ್ಪು ಸಿನೆಮಾ ಬಿಡುಗಡೆಯಾದಾಗ ಐದು ಬಾರಿ ನೋಡಿದ್ದೆ. ಅವರ ಫೈಟ್ ನನಗೆ ಬಹಳ ಇಷ್ಟ" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.