ಸಮಂತಾ ಸಿನಿಮಾ ಬಿಡ್ತಾಳಾ?
ಸದಾ ಸುದ್ದಿ ಮಾಡೋದು ಸಿನಿಮಾ ಮಂದಿಯ ಹಳೇ ಖಯಾಲಿ. ಹಾಗೆ ಸುದ್ದಿಯಲ್ಲಿರುವುದಕ್ಕೆ ಕೆಲವರು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ,...

ಸದಾ ಸುದ್ದಿ ಮಾಡೋದು ಸಿನಿಮಾ ಮಂದಿಯ ಹಳೇ ಖಯಾಲಿ. ಹಾಗೆ ಸುದ್ದಿಯಲ್ಲಿರುವುದಕ್ಕೆ ಕೆಲವರು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ, ಇನ್ನು ಕೆಲವರು ಪೇಜ್ 3 ಪಾರ್ಟಿಗಳಲ್ಲಿ, ಮಾಡೆಲಿಂಗ್‍ನಲ್ಲಿ ಸೊಂಟ ಬಳುಕಿಸುತ್ತಾರೆ. ಮತ್ತೆ ಕೆಲವರು ಆಗಾಗ ಹೊಸ ಬಾಂಬ್‍ನಂಥ ಹೇಳಿಕೆ ಸಿಡಿಸ್ತಾರೆ. ಕೆಲ ದಿನಗಳ ಹಿಂದೆ ನಟ ಸುದೀಪ್ ಚಿತ್ರರಂಗ ತೊರೆಯಲಿದ್ದಾರೆಂದು ಸುದ್ದಿಯಾಯಿತು. `ಕೋಟಿಗೊಬ್ಬ-2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಅವರ ಮೇಲೆ ಹೀಗೆ ಗಾಸಿಪ್ ಹುಟ್ಟಿಸಿದ್ದು ಯಾರು ಅಂತ ಗೊತ್ತಾಗಲೇ ಇಲ್ಲ! ಕೊನೆಗೆ ಈ ಸುದ್ದಿ ಮೂಲೆ ಸೇರಿತು. ಈಗ `ತೊರೆಯುವ' ಮಾತನ್ನು ರಿಯಲ್ಲಾಗಿ ಆಡಿದವಳು ಅದೇ ಸುದೀಪ್ ರನ್ನು ವಿಲನ್ ಆಗಿಸಿದ ಸಮಂತಾ!
ರಾಜಮೌಳಿ ನಿರ್ದೇಶನದ `ಈಗ' ಚಿತ್ರದಲ್ಲಿ ಸುದೀಪ್‍ನನ್ನು ಖಳನಾಯಕನನ್ನಾಗಿಸಿದ್ದು ಇದೇ ಸಮಂತಾ ಅಲ್ವೇ? ಈಗ ಈ ಬೆಡಗಿ ಚಿತ್ರರಂಗ ತೊರೆಯುತ್ತೇನೆ ಅಂತಿದ್ದಾಳೆ. ಹಾಗಂತ ನಟಿ ಸಮಂತಾ ಪ್ರಭು ಕೈಯಲ್ಲಿ ಸಿನಿಮಾಗಳಿಲ್ಲ ಎಂದೇನೂ ಇಲ್ಲ. ಕೈ ತುಂಬಾ
ಅವಕಾಶಗಳಿವೆ. ಅಕ್ಕಿನೇನಿ ನಾಗರ್ಜುನಾ ಪುತ್ರ ನಾಗಚೈತನ್ಯ ನಟಿಸಿದ `ಏನ್ ಮಾಯಾ ಚೇಸೆವೆ' ಚಿತ್ರದ ಮೂಲಕ ಟಾಲಿವುಡ್‍ಗೆ ಬಂದ ಈ ಭಾಮಾ ಸೋಲು- ಗೆಲುವು ಎರಡನ್ನೂ ಕಂಡವಳು. ಮಹೇಶ್‍ಬಾಬು, ಪವನ್ ಕಲ್ಯಾಣ್ ಜ್ಯೂ. ಎನ್‍ಟಿಆರ್, ಅಲ್ಲೂ ಅರ್ಜುನ್ ಹೀಗೆ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿರುವ, ನಟ ವಿಜಯ್ ಜತೆ `ಕತ್ತಿ' ಸಿನಿಮಾ ಮೂಲಕ ಕಾಣಿಸಿಕೊಂಡು ತಮಿಳಿನಲ್ಲೂ ದೊಡ್ಡ ಮಟ್ಟದ ಖಾತೆ ತೆರೆದವಳೂ ಸಮಂತಾ. ಎರಡೂ ಭಾಷೆಗಳಲ್ಲಿ ಅತ್ಯಂತ ಬ್ಯುಸಿ ನಟಿ. ಕೈಯಲ್ಲಿ 7ಕ್ಕೂ ಹೆಚ್ಚು ಸಿನಿಮಾಗಳಿವೆ. ಅಂದಹಾಗೆ, ಸಮಂತಾ ಹೋಟೆಲ್ ವ್ಯವಹಾರಕ್ಕೂ ಕೈಹಾಕಿದ್ದಾಳೆ. ವೆಡ್ಡಿಂಗ್ ಈವೆಂಟ್ ಮ್ಯಾನೇಜ್‍ಮೆಂಟನ್ನೂ ಮುನ್ನಡೆಸುತ್ತಿದ್ದಾಳೆ. ಇಷ್ಟೆಲ್ಲ ಬ್ಯುಸಿ ಇರುವ ಸಮಂತಾ, ಚಿತ್ರರಂಗ ಬಿಡ್ತೀನಿ ಅಂತಿರೋದ್ಯಾಕೆ? ಕೈ ತುಂಬಾ ಸಿನಿಮಾಗಳಿದ್ರೂ ಬೇರೆ ನಟಿಯರಂತೆ ಸಮಂತಾ ಸುದ್ದಿಯಾಗ್ತಿಲ್ಲ. ತೆಲುಗು, ತಮಿಳು ಚಿತ್ರೋದ್ಯಮದಲ್ಲಿ ನಟಿಯರು ಸದಾ ಸುದ್ದಿಯಲ್ಲಿರ ಬೇಕು. ಇಲ್ಲದಿದ್ದರೆ ಬೇಡಿಕೆಯ ನಟಿಯಾದರೂ ಬೇಡವಾಗುತ್ತಾಳೆಂಬುದು ಅಲ್ಲಿನವರ ನಂಬಿಕೆ. ಪಾಪ ಸಮಂತಾ ಇದಕ್ಕೆ ಅಪವಾದ. ಇದ್ದಕ್ಕಿದಂತೆ `ನನಗೆ ಬಣ್ಣದ ಪರದೆ ಬೇಡವಾಗಿದೆ' ಎನ್ನುವ ಧಾಟಿಯಲ್ಲಿ ಸ್ಟೇಟ್‍ಮೆಂಟ್ ಕೊಟ್ಟಿದ್ದಾಳೆ. ಈಕೆಯ ಹೇಳಿಕೆ ದೊಡ್ಡ ಸುದ್ದಿ ಆಗುತ್ತಿದ್ದಂತೆ ಸ್ವತಃ ಸಮಂತಾ ಹೇಳಿಕೆಯನ್ನು ಬದಲಿಸಿಕೊಂಡಳು. `ನನ್ನನ್ನು ಶೋ ಪೀಸ್‍ನಂತೆ ತೋರಿಸಿದರೆ ನಾನು ನಟಿಸೋ ದಿಲ್ಲ. ಒಂದು ವೇಳೆ ಅಂಥ ಸಿನಿಮಾಗಳೇ ಹೆಚ್ಚಾದರೆ ನಟಿಸುವುದಕ್ಕಿಂತ ಚಿತ್ರರಂಗ ಬಿಡು ವುದೇ ಲೇಸು' ಎಂದಿದ್ದಾರೆ. ಅಂದರೆ, ಸಿನಿಮಾಗಳಲ್ಲಿ ನಾಯಕನಷ್ಟೇ ಮಹತ್ವ ಕೊಡಬೇಕೆಂಬುದು ಸಮಂತಾ ವಾದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


