ಸಿನಿಮಾ ಸುದ್ದಿ

ನಾಳೆ ನಟ ಪ್ರಜ್ವಲ್ ದೇವರಾಜ್‌ಗೆ ಕಂಕಣ ಭಾಗ್ಯ

ಸ್ಯಾಂಡಲ್ವುಡ್ ನಟ ಪ್ರಜ್ವಲ್ ದೇವರಾಜ್‌ಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರೊಂದಿಗೆ ನಾಳೆ ಬೆಳಗ್ಗೆ 10.30ಕ್ಕೆ ಧನುರ್ ಲಗ್ನದಲ್ಲಿ...

ನಾಳೆ ನಟ ಪ್ರಜ್ವಲ್ ದೇವರಾಜ್‌ಗೆ ಕಂಕಣ ಭಾಗ್ಯ
ಪ್ರಜ್ವಲ್ ದೇವರಾಜ್ ಕುಟುಂಬ
Published On :
ಬೆಂಗಳೂರು: ಸ್ಯಾಂಡಲ್ವುಡ್ ನಟ ಪ್ರಜ್ವಲ್ ದೇವರಾಜ್‌ಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರೊಂದಿಗೆ ನಾಳೆ ಬೆಳಗ್ಗೆ 10.30ಕ್ಕೆ ಧನುರ್ ಲಗ್ನದಲ್ಲಿ ಅರಮನೆ ಮೈದಾನದಲ್ಲಿ ವಿವಾಹವಾಗುತ್ತಿದ್ದಾರೆ. 
ಒಗ್ಗಲಿಗ ಹಾಗೂ ಅಯ್ಯರ್ ಪದ್ಧತಿಯಂತೆ ಮದುವೆ ಶಾಸ್ತ್ರ ನೆರವೇರಲಿದ್ದು, ಗಣ್ಯರ ಸಮ್ಮುಖದಲ್ಲಿ ಪ್ರಜ್ವಲ್ ರಾಗಿಣಿ ಚಂದ್ರನ್ ರನ್ನು ಕೈ ಹಿಡಿಯಲಿದ್ದಾರೆ.
ಡೈನಾಮಿಕ್ ಸ್ಟಾರ್ ದೇವರಾಜ್ ಮನೆಯಲ್ಲಿ ಇಂದು ವಿವಾಹ ಪೂರ್ವ ಶಾಸ್ತ್ರಗಳು ವರ ಪೂಜಾ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಪ್ರಜ್ವಲ್ ದೇವರಾಜ್ ರ ಮೈಗೆಲ್ಲಾ ಹರಿಶಿಣ ಹಚ್ಚಿ ಸ್ನಾನ ಮಾಡಿಸಿ, ಮಧುಮಗನಿಗೆ ಮುತ್ತೈದೆಯರು ಆರತಿ ಬೆಳಗಿ ಆಶೀರ್ವದಿಸಿದರು. ಇದೇ ವೇಳೆ ಬಂದ ಮುತ್ತೈದೆಯರಿಗೆ ಬಳೆ ತೊಡಿಸುವ ಕಾರ್ಯ ನಡೆಯಿತು.
Story image
ರಮಾ ಮತ್ತು ಚಂದ್ರನ್ ಬಾಲು ಅವರ ಜೇಷ್ಠ ಪುತ್ರಿಯಾಗಿರುವ ರಾಗಿಣಿ ಚಂದ್ರನ್, ಪ್ರಜ್ವಲ್‌ಗೆ ಬಾಲ್ಯದ ಗೆಳತಿಯಾಗಿದ್ದು ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈಗ ಇಬ್ಬರು ವಿವಾಹವಾಗುವ ಮೂಲಕ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ.
ಡೈನಾಮಿಕ್ ಸ್ಟಾರ್ ದೇವರಾಜ್ ಕುಟುಂಬ ಹಾಗೂ ಚಂದ್ರನ್ ಬಾಲು ಅವರ ಕುಟುಂಬ ಇವರಿಬ್ಬರ ವಿವಾಹಕ್ಕೆ ಒಪ್ಪಿಗೆ ನೀಡಿ ಸಂಭ್ರಮದಿಂದ ವಿವಾಹ ನೆರವೇರಿಸುತ್ತಿದ್ದಾರೆ. ರಾಗಿಣಿ ಚಂದ್ರನ್ ಮಾಡೆಲ್  ಹಾಗೂ ಪ್ರತಿಭಾವಂತ ನೃತ್ಯಗಾರ್ತಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಸಹ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರ ವಿವಾಹ ಮಹೋತ್ಸವಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು, ಗಣ್ಯರು, ರಾಜಕಾರಣಿಗಳು ಸೇರಿದಂತೆ ತಮಿಳು, ತೆಲಗು ಚಿತ್ರರಂಗದ ನಟ-ನಟಿಯರೂ ಸಹ ಆಗಮಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.