ಸಿನಿಮಾ ಸುದ್ದಿ

ಬರಲಿದೆ ರಜನಿಕಾಂತ್ 'ರೋಬೋಟ್-೨'; ನಾಯಕಿಯಾಗಿ ಏಮಿ ಜಾಕ್ಸನ್

ಏಮಿ ಜಾಕ್ಸನ್ ಅವರು ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಮೊದಲ ಚಿತ್ರ ಶಂಕರ್ ಅವರ 'ಐ'. ಈಗ ತಾತ್ಕಾಲಿಕವಾಗಿ ಹೆಸರಿಡಲಾಗಿರುವ

ಬರಲಿದೆ ರಜನಿಕಾಂತ್ 'ರೋಬೋಟ್-೨'; ನಾಯಕಿಯಾಗಿ ಏಮಿ ಜಾಕ್ಸನ್
ನಟಿ ಏಮಿ ಜಾಕ್ಸನ್
Published On :

ಮುಂಬೈ: ಏಮಿ ಜಾಕ್ಸನ್ ಅವರು ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಮೊದಲ ಚಿತ್ರ ಶಂಕರ್ ಅವರ 'ಐ'. ಈಗ ತಾತ್ಕಾಲಿಕವಾಗಿ ಹೆಸರಿಡಲಾಗಿರುವ 'ರೋಬೋಟ್-೨' ನಲ್ಲಿ ಮತ್ತೆ ಶಂಕರ್ ಅವರ ತಂಡವನ್ನು ಸೇರಲಿದ್ದಾರೆ. ಚಿತ್ರದಲ್ಲಿ ನಾಯಕನಟನಾಗಿ ರಜನಿಕಾಂತ್ ನಟಿಸಲಿದ್ದಾರೆ.

ಶಂಕರ್ ಅವರೇ ನಿರ್ದೇಶಿಸಿದ್ದ 'ರೋಬೋಟ್' ಸಿನೆಮಾದಲ್ಲಿ ರಜನಿಕಾಂತ್ ಮತ್ತು ಐಶ್ವರ್ಯ ರೈ ಬಚ್ಚನ್ ನಟಿಸಿದ್ದರು. ವೈಜ್ಞಾನಿಕ-ಕಾಲ್ಪನಿಕ ಚಲನಚಿತ್ರವಾದ ಇದು ಯಶಸ್ಸು ಗಳಿಸಿತ್ತು.

ಮೂಲಗಳ ಪ್ರಕಾರ ಸಿನೆಮಾದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದ್ದು ಏಮಿ ಜಾಕ್ಸನ್ ಅವರು ತಮ್ಮ ಪಾತ್ರಕ್ಕೆ ಸಿದ್ಧತೆ ಪ್ರಾರಂಭಿಸಿದ್ದಾರೆ. ಏಮಿ ಸದ್ಯಕ್ಕೆ ಅಕ್ಷಯ್ ಕುಮಾರ್ ಅವರ ಜೊತೆ ನಟಿಸಿದ್ದ 'ಸಿಂಗ್ ಇಸ್ ಬ್ಲಿಂಗ್' ಸಿನೆಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರಂತೆ.

'ರೋಬೋಟ್-೨'ರ ಚಿತ್ರೀಕರಣ ೨೦೧೬ರಲ್ಲಿ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.