ಸಿನಿಮಾ ಸುದ್ದಿ

ಬಾಲಿವುಡ್ ಗೆ ಎಂಟ್ರಿ ಕೊಡಲು ಜಮೀರ್ ಅಹ್ಮದ್ ಪುತ್ರ ಕಸರತ್ತು!

ಚಾಮರಾಜ ಪೇಟೆ ಜೆಡಿಎಸ್ ಶಾಸಕ ಜಮೀರ್‌ ಅಹಮದ್‌ ಖಾನ್‌ ಪುತ್ರ ಜೈದ್‌ ಖಾನ್‌ ಬಾಲಿವುಡ್‌ ಮೂಲಕ ಎಂಟ್ರಿ ಕೊಡುವ ಸಿದ್ದತೆಯಲ್ಲಿದ್ದಾರೆ...

ಬಾಲಿವುಡ್ ಗೆ ಎಂಟ್ರಿ ಕೊಡಲು ಜಮೀರ್ ಅಹ್ಮದ್ ಪುತ್ರ ಕಸರತ್ತು!
ಜೈದ್ ಖಾನ್
Published On :

ರಾಜ್ಯದ ಪ್ರಮುಖ ರಾಜಕೀಯ ನಾಯಕರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಹೊಸದಲ್ಲ. ಜೆಡಿಎಸ್‌ ನಾಯಕರಾದ  ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌, ಚೆಲುವರಾಯಸ್ವಾಮಿ ಪುತ್ರ ಸಚಿನ್‌ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಸಿದ್ಧತೆ ನಡೆಸಿದ್ದಾರೆ. ಈಗ ಶಾಸಕ ಜಮೀರ್‌ಅಹಮದ್‌ ಖಾನ್‌ ಪುತ್ರನ ಸರದಿ.

ಚಾಮರಾಜ ಪೇಟೆ ಜೆಡಿಎಸ್ ಶಾಸಕ ಜಮೀರ್‌ ಅಹಮದ್‌ ಖಾನ್‌ ಪುತ್ರ ಜೈದ್‌ ಖಾನ್‌ ಬಾಲಿವುಡ್‌ ಮೂಲಕ ಎಂಟ್ರಿ ಕೊಡುವ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಸ್ಕ್ರೀನ್‌ ಟೆಸ್ಟ್‌ ಸಹ ಮುಗಿದಿದೆ. ರಾಂ ಗೋಪಾಲ್‌ವರ್ಮಾ ನಿರ್ದೇಶನದ ಚಿತ್ರದ ಮೂಲಕ ಪುತ್ರನನ್ನು ಬಾಲಿವುಡ್‌ ಪರಿಚಯಿಸಲು ಜಮೀರ್‌ ಅಹಮದ್‌ ಖಾನ್‌ ಮುಂದಾಗಿದ್ದಾರೆ.

ಪ್ರೀತಿ -ಪ್ರೇಮ, ಕೌಟುಂಬಿಕ ಸಂಬಂಧ, ಹಾಸ್ಯ ಕೇಂದ್ರೀಕೃತ ಕಥೆ ಹಿನ್ನೆಲೆಯ ಚಿತ್ರ ಮಾಡುವ ಬಗ್ಗೆ ಪ್ರಾರಂಭಿಕ ಚರ್ಚೆಗಳು ನಡೆದಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ ವೇಳೆಗೆ ಜೈದ್‌ ಖಾನ್‌ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ.

ಗೋವಾದಲ್ಲಿ "ಬ್ರ್ಯಾಂಡ್ಸ್‌' ಆಕಾಡೆಮಿ ವತಿಯಿಂದ ನಡೆಸಿದ ಬಾಲಿವುಡ್‌ಗೆ ಹೊಸಮುಖಗಳ ಶೋಧ ಸ್ಪರ್ಧೆ ಹಾಗೂ "ಐಕಾನ್‌ ಅವಾರ್ಡ್ಸ್ ಆಫ್ ದ ಇಯರ್‌ ಕಾರ್ಯಕ್ರಮದಲ್ಲಿ ಜೈದ್‌ಖಾನ್‌ "ಫ್ರೆಶ್‌ ಫೇಸ್‌ ಆಫ್ ದ ಇಯರ್‌ 2015' ಪ್ರಶಸ್ತಿ  ತನ್ನದಾಗಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಹಿಂದಿ ಚಲನಚಿತ್ರರಂಗದ ನಿರ್ದೇಶಕ-ನಿರ್ಮಾಪಕರು ಜೈದ್‌ ಖಾನ್‌ಗೆ ಆಫ‌ರ್‌ ಸಹ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಜೈದ್‌ ಖಾನ್‌ ಸಿನಿಮಾ ಮತ್ತು ಫ್ಯಾಶನ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಮುಂಬೈನಲ್ಲಿ ಫ್ಯಾಶನ್‌ ಶೋ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡಿದ್ದಾರೆ.

ದಿನಕ್ಕೆ ನಾಲ್ಕು ಗಂಟೆ ಜಿಮ್‌ನಲ್ಲೂ ಜೈದ್ ಖಾನ್‌ ಬೆವರು ಸುರಿಸುತ್ತಿದ್ದಾರೆ. ಮನೆಯಲ್ಲಿಯೇ ಅದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಾಹಸ ತರಬೇತಿಗಾಗಿ ಥಾಯ್ಲೆಂಡ್‌ಗೆ ಹೋಗಲಿದ್ದಾರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.