ಸಿನಿಮಾ ಸುದ್ದಿ

ತಲ್ವಾರ್ ಚಿತ್ರ ವಿಕ್ಷಿಸಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಆರುಷಿ ತಲ್ವಾರ್ ಹತ್ಯೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ತಯಾರಾಗಿರುವ ಚಿತ್ರ ತಲ್ವಾರ್ ನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವೀಕ್ಷಿಸಲಿದ್ದಾರೆ.

ತಲ್ವಾರ್ ಚಿತ್ರ ವಿಕ್ಷಿಸಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ
Published On :

ನವದೆಹಲಿ:ಆರುಷಿ ತಲ್ವಾರ್ ಹತ್ಯೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ತಯಾರಾಗಿರುವ ಚಿತ್ರ 'ತಲ್ವಾರ್' ನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವೀಕ್ಷಿಸಲಿದ್ದಾರೆ.
ರಾಷ್ಟ್ರಪತಿ ಭವನದ ಅಧಿಕಾರಿಗಳು ತಲ್ವಾರ್ ಚಿತ್ರ ನಿರ್ದೇಶಕಿ ಮೇಘನ ಗುಲ್ಜಾರ್ ಅವರನ್ನು ಸಂಪರ್ಕಿಸಿದ್ದು ರಾಷ್ಟ್ರಪತಿ ಭವನದಲ್ಲಿ ಅ.25 ಕ್ಕೆ ಸಿನಿಮಾ ಪ್ರದರ್ಶನ ಆಯೋಜಿಸುವಂತೆ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಘನಾ ಗುಲ್ಕಾರ್, ರಾಷ್ಟ್ರಪತಿಗೆ ಸಿನಿಮಾ ಪ್ರದರ್ಶನ ಆಯೋಜಿಸಲು ಆಹ್ವಾನ ಬಂದಿರುವುದು ಹೆಮ್ಮೆಯ ವಿಷಯ ಶೀಘ್ರವೇ ಪ್ರದರ್ಶನ ಆಯೋಜಿಸುವುದಾಗಿ ತಿಳಿಸಿದ್ದಾರೆ.
ಸಿನಿಮಾದ ಕಲಾವಿದರು, ಲೇಖಕ ವಿಶಾಲ್ ಭಾರದ್ವಾಜ್, ನಟ ಇರ್ಫಾನ್, ಕೊಂಕಣಾ ಸೇನ್ ಶರ್ಮಾ, ನೀರಜ್ ಕಬಿ ಹಾಗೂ ಶೌನಂ ಷಾ ರಾಷ್ಟ್ರಪತಿಯೊಂದಿಗೆ ಸಿನಿಮಾ ಪ್ರದರ್ಶನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.