ಬರ್ತ್ ಡೇ ಗರ್ಲ್ ರಚಿತಾ ರಾಮ್; ಮಂಗಳೂರಿನಲ್ಲಿ ಸಂಭ್ರಮಾಚರಣೆ
ಇಂದು ರಚಿತಾ ರಾಮ್ ಅವರ ಜನ್ಮ ದಿನ. ಈ ಯುವ ನಟಿ ತನ್ನ ಜನ್ಮ ದಿನಾಚರಣೆಗಳನ್ನು 'ರಥಾವರ' ಚಿತ್ರತಂಡದೊಂದಿಗೆ ಮಂಗಳೂರಿನಲ್ಲಿ ಆಚರಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಾಯಕನಟ ಶ್ರೀಮುರಳಿ ಕೂಡ

ಬೆಂಗಳೂರು: ಇಂದು ರಚಿತಾ ರಾಮ್ ಅವರ ಜನ್ಮ ದಿನ. ಈ ಯುವ ನಟಿ ತನ್ನ ಜನ್ಮ ದಿನಾಚರಣೆಗಳನ್ನು 'ರಥಾವರ' ಚಿತ್ರತಂಡದೊಂದಿಗೆ ಮಂಗಳೂರಿನಲ್ಲಿ ಆಚರಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಾಯಕನಟ ಶ್ರೀಮುರಳಿ ಕೂಡ ಜೊತೆಗಿರಲಿದ್ದಾರಂತೆ. "ಸಿನೆಮಾ ಸೆಟ್ ನಲ್ಲಿರುವುದೇ ಒಂದು ಸಂಭ್ರಮ. ನನಗೆ ಕೆಲಸ ಮಾಡಲು ಖುಷಿ. ಆದುದರಿಂದ ನನ್ನ ಜನ್ಮದಿನದದ ಸಂಭ್ರಮಾಚರಣೆಗಳನ್ನು ಕೆಲಸದ ಜೊತೆಗೇ ಮಾಡಿಕೊಳ್ಳುತ್ತೇನೆ" ಎನ್ನುತ್ತಾರೆ ರಚಿತ.
ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದಿದ್ದ ರಚಿತಾ, ದರ್ಶನ್ ಅವರ 'ಬುಲ್ ಬುಲ್' ನಲ್ಲಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು. ನಂತರ ದಿಲ್ 'ರಂಗೀಲಾ', 'ಅಂಬರೀಶ', 'ರನ್ನ'ದಲ್ಲೂ ಕಾಣಿಸಿಕೊಂಡಿದ್ದರು.
ಸದ್ಯಕ್ಕೆ ಎರಡು ಸಿನೆಮಾಗಳ ನಟನೆಯಲ್ಲಿ ಬ್ಯುಸಿಯಿರುವ ನಟಿ "ನಾನು ಸದ್ಯಕ್ಕೆ 'ರಥಾವರ' ಸಿನೆಮಾ ಸೆಟ್ ನಲ್ಲಿ ಇದ್ದೇನೆ ಹಾಗೆಯೇ ಜೊತೆಗೆ ಸರವಣನ್ ನಿರ್ದೇಶನದ 'ಚಕ್ರವ್ಯೂಹ'ದಲ್ಲಿ ಪುನೀತ್ ಜೊತೆಗೆ ನಟಿಸುತ್ತಿದ್ದೇನೆ. ಇನ್ನೊಂದು ತಿಂಗಳಲ್ಲಿ ಹಲವು ದಿನಗಳಿಂದ ತಡವಾಗಿರುವ 'ಭರ್ಜರಿ' ಪ್ರಾರಂಭವಾಗಲಿದೆ. ಸದ್ಯಕ್ಕೆ ನನ್ನಲ್ಲಿರುವ ಯೋಜನೆಗಳಲ್ಲಿ ಗಂಭಿರವಾಗಿ ತೊಡಗಿಸಿಕೊಂಡು, ಮುಂದೆ ಬರಲಿರುವ ಒಳ್ಳೆಯ ಯೋಜನೆಗಳ ಬಗ್ಗೆ ಚಿಂತಿಸುತ್ತಿದ್ದೇನೆ" ಎನ್ನುತ್ತಾರೆ ನಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


