ಹಿಂದಿಯಲ್ಲಿ ಬರೆದ ಸ್ಕ್ರಿಪ್ಟ್ ಕನ್ನಡದಲ್ಲಿ 'ಮಿಂಚಾಗಿ ನೀನು ಬರಲು'
ಚೊಚ್ಚಲ ನಿರ್ದೇಶಕ ರಣದೀಪ್ ಶಾಂತಾರಾಮ್ ಮಹಾದಿಕ್ ಅವರಿಗೆ ನಿರ್ದೇಶಕ ರಾಜಕುಮಾರ್ ಸಂತೋಷಿ ಅವರ ಜೊತೆ ಸಹ ನಿರ್ದೇಶನ ಮಾಡಿರುವ ೨೦ ವರ್ಷದ

ಬೆಂಗಳೂರು: ಚೊಚ್ಚಲ ನಿರ್ದೇಶಕ ರಣದೀಪ್ ಶಾಂತಾರಾಮ್ ಮಹಾದಿಕ್ ಅವರಿಗೆ ನಿರ್ದೇಶಕ ರಾಜಕುಮಾರ್ ಸಂತೋಷಿ ಅವರ ಜೊತೆ ಸಹ ನಿರ್ದೇಶನ ಮಾಡಿರುವ ೨೦ ವರ್ಷದ ಅನುಭವವಿದೆ. ಅವರ ಮೊದಲ ಅರಕೆಯಂತೆ ಹಿಂದಿಯಲ್ಲಿ ಸಿನೆಮಾ ಮಾಡಬೇಕೆಂದಿದ್ದರೂ ವಿಧಿ ಅವರನ್ನು ಕನ್ನಡ ಚಿತ್ರೋದ್ಯಮಕ್ಕೆ ತಂದೊಡ್ಡಿದೆ. ಇದರ ಫಲವೇ 'ಮಿಂಚಾಗಿ ನೀನು ಬರಲು'.
"ನಾನು ಸ್ಕ್ರಿಪ್ಟ್ ಹಿಂದಿಯಲ್ಲಿ ಬರೆದಿದ್ದೆ ಆದರ ಅದಕ್ಕೆ ಸರಿಯಾದ ನಟರು ಸಿಗಲಿಲ್ಲ. ನನಗೆ ಹೊರಬರ ಜೊತೆ ಕೆಲಸ ಮಾಡಲು ಇಷ್ಟವಿರಲಿಲ್ಲ. ಆದುದರಿಂದ ಬಾಲಿವುಡ್ ನಲ್ಲಿ ಸಿನೆಮ್ಯಾಟೋಗ್ರಾಫರ್ ಆಗಿರುವ ಮೈಸೂರಿನ ಮಹೇಶ್ ತಲಕಾಡು ಅವರೊಂದಿಗೆ ಮಾತನಾಡಿದಾಗ ಅವರು ಕನ್ನಡದಲ್ಲಿ ಪ್ರಯತ್ನಿಸುವಂತೆ ಹೇಳಿದರು. ಅದರ ಫಲವಾಗಿ ಇಲ್ಲಿ ದಿಗಂತ್ ಮತ್ತು ಕೃತಿ ಕರಬಂಧ ಅವರೊಂದಿಗೆ ಸಿನೆಮಾ ಮಾಡಿದ್ದೇನೆ. ಬಿಡುಗಡೆಗೆ ಸಿದ್ಧವಾಗಿದೆ" ಎನ್ನುತ್ತಾರೆ ರಣದೀಪ್.
ಈ ಸಿನೆಮಾ ನಿರ್ಮಿಸಲು ಮೂವರು ತಂತ್ರಜ್ಞರು ಒಟ್ಟಾಗಿದ್ದಾರೆ. ನಿರ್ದೇಶಕ ರಣದೀಪ್, ಸಿನೆಮ್ಯಾಟೋಗ್ರಾಫರ್ ಮಹೇಶ್ ತಲಕಾಡು ಜೊತೆಗೆ ಬಾಲಿವುಡ್ ನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ದುಡಿದಿರುವ ಮಹೇಶ್ ಜೈಸ್ವಾಲ್ ಕೂಡ ಈ ಸಿನೆಮಾಗೆ ಹೂಡಿಕೆ ಮಾಡಿದ್ದಾರೆ. ಆಗಸ್ಟ್ ೨೦೧೩ರಿಂದಲೇ ಈ ಸಿನೆಮಾ ಸುದ್ದಿಯಲ್ಲಿದ್ದರು, ತಡವಾಗಿದ್ದರಿಂದ ವಿಚಲಿತನಾಗಲಿಲ್ಲ ಎನ್ನುವ ರಣದೀಪ್ "ದಿಗಂತ್ ಅವರಿಗೆ ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದ್ದರೆ ಬಗ್ಗೆ ಅವರು ತಿಳಿಸಿದ್ದರು. ಇದಕ್ಕೆ ನಾನು ಸಿದ್ಧನಿದ್ದೆ" ಎನ್ನುತ್ತಾರೆ.
ವಿ ಹರಿಕೃಷ್ಣ ಸಂಗೀತ ನೀಡಿದ್ದು ಕನ್ನಡ ಚಿತ್ರೋದ್ಯಮದ ಸಹಕಾರವನ್ನು ರಣದೀಪ್ ನೆನೆಯುತ್ತಾರೆ. ವಿತರಣೆಗೆ ನೆರವಾಗಿರುವ ಜಯ್ಯಣ್ಣ-ಭೋಗೇಂದ್ರ ಅವರ ಸಹಾಯವನ್ನು ಸ್ಮರಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


