ಸಿನಿಮಾ ಸುದ್ದಿ

ಸಲಿಂಗ ಪ್ರೇಮದ ಶಾಕ್!

ಅತ್ತ ಜೇಮ್ಸ್ ಬಾಂಡ್‍ಗೆ ಕತ್ತರಿ ಬಿದ್ದಿದೆ. ಆದರೆ ಕಿರುತೆರೆ ಮತ್ತು ಹಿರಿತೆರೆ ಮಾತ್ರ ಎದೆಗುಂದಿಲ್ಲ. ಸಲಿಂಗ ಪ್ರೇಮದ ಕಥಾವಸ್ತುವಿರುವ ಚಿತ್ರ, ಕಿರುಚಿತ್ರಗಳನ್ನು ಮಾಡಿ...

ಸಲಿಂಗ ಪ್ರೇಮದ ಶಾಕ್!
ಅಫೇರ್ ಚಿತ್ರದ ಸ್ಟಿಲ್
Published On :

ಅತ್ತ ಜೇಮ್ಸ್ ಬಾಂಡ್‍ಗೆ ಕತ್ತರಿ ಬಿದ್ದಿದೆ. ಆದರೆ ಕಿರುತೆರೆ ಮತ್ತು ಹಿರಿತೆರೆ ಮಾತ್ರ ಎದೆಗುಂದಿಲ್ಲ. ಸಲಿಂಗ ಪ್ರೇಮದ ಕಥಾವಸ್ತುವಿರುವ ಚಿತ್ರ, ಕಿರುಚಿತ್ರಗಳನ್ನು ಮಾಡಿ ಬಿಸಿಬಿಸಿ ಗಾಳಿ ಹರಡುತ್ತಿವೆ.

ಕಳೆದ ವಾರ ಎಂಟಿವಿ ಕಿರುತೆರೆಯಲ್ಲೇ ಮೊದಲ ಬಾರಿಗೆ ಲೆಸ್ಬಿಯನ್ ಕಥಾವಸ್ತುವಿರುವ ಕಿರುಚಿತ್ರವನ್ನು 'ಬಿಗ್ ಎಫ್' ಸರಣಿಯಲ್ಲಿ ಪ್ರಸಾರ ಮಾಡಿತು. 'ಐ ಕಿಸ್ಡ್ ಎ ಗರ್ಲ್' ಈ ಕಂತು ಸದ್ದೇ ಇಲ್ಲದೇ ಪ್ರಸಾರವಾಗಿ ಸುದ್ದಿ ಮಾಡಿದೆ. ಯೂಟ್ಯೂಬ್‍ನಲ್ಲೂ ಲಭ್ಯವಿರುವ ಈ ವಿಡಿಯೋವನ್ನು ಈಗಾಗಲೇ 8.74 ಲಕ್ಷ ಬಾರಿ ವೀಕ್ಷಣೆಗೆ ಒಳಗಾಗಿದೆ. ಇದೇ ಹೊತ್ತಿಗೆ ದಕ್ಷಿಣ ಭಾರತದಲ್ಲಿ ಸಿನಿಮಾವೊಂದು ಸಣ್ಣ ಕಂಪನವನ್ನು ಹುಟ್ಟುಹಾಕಿದೆ.

ಶ್ರೀರಂಜನ್ ನಿರ್ದೇಶನದಲ್ಲಿ ಲೆಸ್ಬಿಯನ್ ಕಥಾವಸ್ತವಿರುವ 'ಅಫೇರ್' ಹೆಸರಿನ ಚಿತ್ರ ಸಿದ್ಧವಾಗಿದೆ. ರಾಮ್ ಗೋಪಾಲ್ ವರ್ಮಾ ಜತೆ ಕೆಲಸ ಮಾಡಿರುವ ತುಮ್ಮಲಪಲ್ಲಿ ರಾಮಸತ್ಯನಾರಾಯಣ ಈ ಚಿತ್ರದ ನಿರ್ಮಾಪಕ. ಆಂಧ್ರದ ಸೆನ್ಸಾರ್ ಬೋರ್ಡ್ ಈ ಚಿತ್ರಕ್ಕೆ ಸರ್ಟಿಫಿಕೇಟ್ ನೀಡುವುದಕ್ಕೆ ಹಿಂದೇಟು ಹಾಕಿರುವುದು ಚಿತ್ರತಂಡಕ್ಕೆ ಬೇಸರ ಉಂಟು ಮಾಡಿದೆ.

ಅತ್ತ ಕಿರುತೆರೆಯಲ್ಲಿ ಇಂಥ ಕಥಾವಸ್ತುವಿನ ಚಿತ್ರಕ್ಕೆ ಅವಕಾಶವಿರುವಾಗ ಚಿತ್ರ ಬಿಡುಗಡೆಗೆ ಯಾಕೆ ತಡೆ ಎಂದು ಪ್ರಶ್ನೆ ಹುಟ್ಟು ಹಾಕಿದೆ ಸೆನ್ಸಾರ್ ಮಂಡಳಿಯ ನಡೆ ಹೀಗಾಗಿ ರಂಜನ್ ಯೂಟ್ಯೂಬ್‍ನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರಂತೆ. ಈಗ ಸೆನ್ಸಾರ್ ಬೋರ್ಡ್ ಏನು ಮಾಡುತ್ತದೆ ಎಂಬುದು ಕುತೂಹಲದ ಸಂಗತಿ. ಆದರೆ ಹೊಸ ತಲೆಮಾರಿನ ನಿರ್ದೇಶಕರು, ಇನ್ನೂ ಮಡಿವಂತಿಕೆ ಇರುವ ಚಿತ್ರರಂಗದಲ್ಲಿ ಇಂಥ ಕಥಾವಸ್ತುವಿನ ಚಿತ್ರನಿರ್ಮಿಸಿರುವುದು ಬೆರಗು ಹುಟ್ಟಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.