ಸಿನಿಮಾ ಸುದ್ದಿ

ಭರ್ಜರಿ ಅಡಚಣೆ ಮುಕ್ತ; ಚಿತ್ರೀಕರಣ ಪ್ರಾರಂಭ

'ಬಹದ್ದೂರ್' ಸಿನೆಮಾ ಮೂಲಕ ನಿರ್ದೇಶನಕ್ಕಿಳಿದ ಚೇತನ್ ಕುಮಾರ್ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದ ನಂತರ ಮತ್ತೆ ಉತ್ಸುಕರಾಗಿದ್ದಾರೆ. ಏಪ್ರಿಲ್ ನಲ್ಲಿ

ಭರ್ಜರಿ ಅಡಚಣೆ ಮುಕ್ತ; ಚಿತ್ರೀಕರಣ ಪ್ರಾರಂಭ
ಭರ್ಜರಿ ಸಿನೆಮಾದಲ್ಲಿ ಧೃವ ಸರ್ಜಾ ಮತ್ತು ತಾರಾ
Published On :

ಬೆಂಗಳೂರು: 'ಬಹದ್ದೂರ್' ಸಿನೆಮಾ ಮೂಲಕ ನಿರ್ದೇಶನಕ್ಕಿಳಿದ ಚೇತನ್ ಕುಮಾರ್ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದ ನಂತರ ಮತ್ತೆ ಉತ್ಸುಕರಾಗಿದ್ದಾರೆ. ಏಪ್ರಿಲ್ ನಲ್ಲಿ ಆರ್ ಎಸ್ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣವಾಗಬೇಕಿದ್ದ 'ಭರ್ಜರಿ' ಹಲವಾರು ಕಾರಣಗಳಿಂದ ತಡವಾಗಿತ್ತು. ಆದರೆ ಈಗ ಎಲ್ಲ ಅಡಚಣೆಗಳು ನಿವಾರಣೆಯಾಗಿದ್ದು ನವೆಂಬರ್ ೨೦ ರಿಂದ ಚಿತ್ರೀಕರಣ ಪ್ರಾರಂಭವಾಗಿದೆ.

ಭರ್ಜರಿಯಾ ವಿಶಿಷ್ಟತೆ ಎಂದರೆ ಇದು ನಾಯಕಿಯ(ರಚಿತಾ ರಾಮ್) ಕೆನ್ನೆಗುಳಿಯ ಸುತ್ತ ಕಥೆ ಸುತ್ತಲಿದೆಯಂತೆ. "ಭಾರತೀಯ ಸಿನೆಮಾರಂಗದಲ್ಲಿ ಈ ರೀತಿಯ ಪ್ರಯತ್ನ ಇದೇ ಮೊದಲು ಎನ್ನುವ ಅವರು, ಸಿನೆಮಾದ ಮೊದಾಲಾರ್ಧದಲ್ಲಿ ನಗರ ಪ್ರದೇಶಗಳ ಬಗ್ಗೆ ಅತ್ಯುತ್ತಮ ಚಿತ್ರೀಕರಣ ಇರುತ್ತದೆ" ಎನ್ನುತ್ತಾರೆ ಚೇತನ್.

ಚಕ್ರವ್ಯೂಹದ ಚಿತ್ರೀಕರಣ ಮುಗಿಸಿರುವ ರಚಿತಾ ರಾಮ್ ಈಗ ಧೃವ ಸರ್ಜಾ, ತಾರಾ, ಸುಚೇಂದ್ರ ಪ್ರಸಾದ್. ಸಾಧು ಕೋಕಿಲಾ, ಜೈ ಜಗದೀಶ್ ಮುಂತಾದವರ ಜೊತೆ ಚಿತ್ರತಂಡ ಸೇರಲಿದ್ದಾರಂತೆ.

ಬಹದ್ದೂರ್ ನಲ್ಲಿ ಧೃವ್ ಅವರು ತೋರಿಸಿದ ಮಾಂತ್ರಿಕತೆ ಇಲ್ಲಿ ಮರುಕಳಿಸಲಿದೆ ಎಂಬ ಭರವಸೆ ತೋರುತ್ತಾರೆ ಚೇತನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.