'ಕಲ್ಪಾನ'ಗೆ ಹುರಿಗೊಳ್ಳುತ್ತಿರುವ ಉಪೇಂದ್ರ
ರಾಘವ ಲಾರೆನ್ಸ್ ಅವರ ಕಾಂಚನ ಸಿನೆಮಾ ಸರಣಿ ತಮಿಳು ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿ ಮನಗೆದ್ದಿದ್ದು ಈಗ ಇತಿಹಾಸ. ಇದರಿಂದ ಸ್ಫೂರ್ತಿಗೊಂಡು ಕನ್ನಡ ನಟ ಉಪೇಂದ್ರ

ಬೆಂಗಳೂರು: ರಾಘವ ಲಾರೆನ್ಸ್ ಅವರ ಕಾಂಚನ ಸಿನೆಮಾ ಸರಣಿ ತಮಿಳು ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿ ಮನಗೆದ್ದಿದ್ದು ಈಗ ಇತಿಹಾಸ. ಇದರಿಂದ ಸ್ಫೂರ್ತಿಗೊಂಡು ಕನ್ನಡ ನಟ ಉಪೇಂದ್ರ ಅದಕ್ಕೆ ತಮ್ಮದೇ ಆದ ಹೊಳಹುಗಳನ್ನು ಸೇರಿಸುತ್ತಿದ್ದಾರೆ.
ಕಲ್ಪನಾ -೨ ತಮಿಳಿನ ಕಾಂಚನ೨ ರಿಮೇಕ್. ಲಾರೆನ್ಸ್ ಅವರ ಮೂಲಕ್ಕಿಂತಲೂ ವಿಭಿನ್ನವಾಗಿ ಮಾಡುವುದು ನಿರ್ದೇಶಕ ಆರ್ ಅನಂತ ರಾಜು ಅವರಿಗೆ ಸವಾಲಂತೆ. "ಲಾರೆನ್ಸ್ ಅವರಿಗೆ ದೊಡ್ಡ ನಟರನ್ನು ನಿಭಾಯಿಸುವ ಕಷ್ಟವಿರಲಿಲ್ಲ. ಅವರು ಪಾತ್ರದ ಜೊತೆ ಸಾಮಾನ್ಯವಾಗಿ ಆಟವಾಡಿದರು. ಇಲ್ಲಿ ಉಪೇಂದ್ರ ಇರುವುದರಿಂದ ಸನ್ನಿವೇಶ ಬದಲಾಗಿದೆ" ಎನ್ನುತ್ತಾರೆ.
ಉಪೇಂದ್ರ ಅವರ ಇಮೇಜ್ ಮತ್ತು ಪಾತ್ರವನ್ನು ಸರಿದೂಗಿಸುವುದು ಪ್ರಮುಖ ಸವಾಲು ಎನ್ನುವ ನಿರ್ದೇಶಕ "ಉಳಿತ ಪಾತ್ರವರ್ಗದ ಪರಿಕಲ್ಪನೆ ಅದೇ ಆಗಿರುತ್ತದೆ" ಎನ್ನುತ್ತಾರೆ. ದ್ವಿತೀಯಾರ್ಧದ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವುದಾಗಿ ತಿಳಿಸುವ ಅನಂತ "ಮೂಲದಲ್ಲಿ ಒಂದೇ ದಿನದಲ್ಲಿ ನಡೆಯುವ ಹಲವಾರು ಘಟನೆಗಳನ್ನು ತೋರಿಸಿದ್ದಾರೆ. ಇಲ್ಲಿ ನಮ್ಮ ಪ್ರೇಕ್ಷಕರಿಗೆ ಅದು ಕರಗತವಾಗುವುದು ಸ್ವಲ ಕಷ್ಟ. ಇಲ್ಲಿ ಕ್ರಮಬದ್ಧವಾಗಿ ಸ್ಪಷ್ಟತೆಯನ್ನು ಕೋರುತ್ತಾರೆ. ಹಾಗೆಯೇ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ" ಎನ್ನುತ್ತಾರೆ.
ಪ್ರಿಯಾಮಣಿ ನಾಯಕನಟಿಯಾಗಿದ್ದು ಉಪೇಂದ್ರ ಎದುರು ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಪ್ರಕಾಶ್ ಹೆಬ್ಗೋಡು ಖಳನಾಯಕ. ಪೆಟ್ರೋಲ್ ಪ್ರಸನ್ನ ಮತ್ತು ವಿಕ್ಟರಿ ವಾಸು ತಾರಾಗಣದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


