ನಾಳೆ ರಾಕ್ಷಸಿ, ಊಜಾ ಮತ್ತು ವಂಶೋದ್ಧಾರಕ ತೆರೆಗೆ
ನಾಳೆ ಕನ್ನದ ಸಿನೆಮಾ ರಸಿಕರಿಗೆ ಮನರಂಜನೆ ಉಣಬಡಿಸಲು ಮೂರೂ ಸಿನೆಮಾಗಳು ಸಿದ್ಧವಾಗಿದೆ. ಅವಗಳಲ್ಲಿ ಎರಡು ಹಾರರ್ ಸಿನೆಮಾಗಳಾದರೆ ಒಂದು ನಟ ಆದಿತ್ಯ ಚಿಕ್ಕಣ್ಣ ನಿರ್ದೇಶನದಲ್ಲಿ

ಬೆಂಗಳೂರು: ನಾಳೆ ಕನ್ನದ ಸಿನೆಮಾ ರಸಿಕರಿಗೆ ಮನರಂಜನೆ ಉಣಬಡಿಸಲು ಮೂರೂ ಸಿನೆಮಾಗಳು ಸಿದ್ಧವಾಗಿದೆ. ಅವಗಳಲ್ಲಿ ಎರಡು ಹಾರರ್ ಸಿನೆಮಾಗಳಾದರೆ ಒಂದು ನಟ ಆದಿತ್ಯ ಚಿಕ್ಕಣ್ಣ ನಿರ್ದೇಶನದಲ್ಲಿ ವಿಜಯ ರಾಘವೇಂದ್ರ ನಟಿಸಿರುವ ಫ್ಯಾಮಿಲಿ ಸೆಂಟಿಮೆಂಟ್ ಸಿನೆಮಾ ವಂಶೋದ್ಧಾರಕ.
ರಾಕ್ಷಸಿ: ೨೦೧೪ರಲ್ಲಿ ಬಿಡುಗಡೆಯಾಗಿದ್ದ್ ಮಿಸ್ಕಿನ್ ನಿರ್ದೇಶನದ ತಮಿಳು ಸಿನೆಮಾ 'ಪಿಸಾಸು'ವಿನ ರಿಮೇಕ್. ಕಡಿಮೆ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದ ಈ ಸಿನೆಮ ಒಳ್ಳೆಯ ಯಶಸ್ಸು ಕಂಡಿತ್ತು. ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಅವರ ಶಿಷ್ಯ ಆಶ್ರಪ್ ಈ ಸಿನೆಮಾವನ್ನು ಕನ್ನಡದಲ್ಲಿ ನಿರ್ದೇಶಿಸಿದ್ದು ಸಿಂಧು ಲೋಕನಾಥ್ ಮುಖ್ಯಭೂಮಿಕೆಯಲ್ಲಿದ್ದಾರೆ.
ಊಜಾ: ಆತ್ಮ ಅಥವಾ ಸ್ಪಿರಿಟ್ ಎಂದು ಕರೆಯಲಾಗುವುದರ ಕಥೆ ಇಟ್ಟುಕೊಂಡು ನಿರ್ದೇಶಕ ರಾಜಕುಮಾರ್ ರೆಡ್ಡಿ ಅವರ ನಿರ್ದೇಶನ ಹಾರರ್ ಚಿತ್ರ ಇದು. ಶ್ರದ್ಧಾ ದಾಸ್, ಭರತ್, ಗಾಯಿತ್ರಿ ಮುಂತಾದ ಹೊಸ ಮುಖಗಳನ್ನು ಸಿನೆಮಾದಲ್ಲಿ ಪರಿಚಯಿಸುತ್ತಿದ್ದು, ಹಿರಿಯ ನಟ ಅವಿನಾಶ್ ಕೂಡ ನಟಿಸಿದ್ದಾರೆ.
ವಂಶೋದ್ಧಾರಕ: ಆದಿತ್ಯ ಚಿಕ್ಕಣ್ಣ ನಿರ್ದೇಶನದಲ್ಲಿ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ನಟಿಸಿರುವ ವಂಶೋದ್ಧಾರಕ ಕೌಟುಂಬಿಕ ಭಾವನಾತ್ಮಕ ಚಿತ್ರ. ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದರೆ, ಲಕ್ಷ್ಮಿ, ರಂಗಾಯಣ ರಘು, ಸಾಧು ಕೋಕಿಲಾ ಮುಂತಾದ ದೊಡ್ಡ ತಾರಾಗಣದ ಬಲವೇ ಇದೆ. ಸಂಗೀತ ವಿ ಮನೋಹರ್ ಅವರದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


