ವಿಜಯ ರಾಘವೇಂದ್ರ

ಥ್ರಿಲ್ಲರ್ 'FIR 6to6' ಚಿತ್ರದಲ್ಲಿ ವಿಜಯ ರಾಘವೇಂದ್ರ: ಸಂಪೂರ್ಣವಾಗಿ ರಾತ್ರಿಯಲ್ಲೇ ಚಿತ್ರೀಕರಣ
2024 ರಲ್ಲಿ ಕೇಸ್ ಆಫ್ ಕೊಂಡಾಣ ಮತ್ತು ಗ್ರೇ ಗೇಮ್ಸ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ವಿಜಯ ರಾಘವೇಂದ್ರ ಇದೀಗ ಎಫ್‌ಐಆರ್ 6 to 6 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಆಡಿಯೋ ಮತ್ತು ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.

ಚಿರನಿದ್ರೆಗೆ ಜಾರಿದ ಸ್ಪಂದನ: ಪತಿ ವಿಜಯ್ ರಾಘವೇಂದ್ರ, ಕುಟುಂಬಸ್ಥರು, ರಾಜಕಾರಣಿಗಳು, ಕಲಾವಿದರಿಂದ ಅಶ್ರುತರ್ಪಣ
ಸ್ಯಾಂಡಲ್ವುಡ್ ನಟ ವಿಜಯರಾಘವೇಂದ್ರ (Vijay Raghavendea) ಪತ್ನಿ ಸ್ಪಂದನಾ ವಿಜಯರಾಘವೇಂದ್ರ (Spandana Vijay Raghavendra ) ಅವರ ಮೃತದೇಹದ ಅಂತಿಮ ದರ್ಶನ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಅವರ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ಸಾಗುತ್ತಿದೆ.

ನಾಳೆ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಕ್ರಿಯೆ: ಮಲ್ಲೇಶ್ವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಥಾಲ್ಯಾಂಡ್ ಪ್ರವಾಸ ಹೋಗಿದ್ದ ವೇಳೆ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಹರಿಶ್ಚಂದ್ರ ಘಾಟ್ನಲ್ಲಿ ನಾಳೆ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ಸ್ಪಂದನಾ ಮೃತದೇಹ ಇಂದು ಮಧ್ಯಾಹ್ನ ಹಸ್ತಾಂತರ, ರಾತ್ರಿ ಬೆಂಗಳೂರಿಗೆ ಪಾರ್ಥಿವ ಶರೀರ
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಗೆ ಪ್ರವಾಸ ತೆರಳಿದ್ದ ವೇಳೆ ಹೃದಯಾಘಾತದಿಂದ ಹಠಾತ್ ನಿಧನರಾದ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹದ ಹಸ್ತಾಂತರ ಪ್ರಕ್ರಿಯೆ ಇಂದು ಮಧ್ಯಾಹ್ನವಾಗಲಿದೆ ಎಂದು ಅವರ ಕುಟುಂಬಸ್ಥರಿಂದ ಮಾಹಿತಿ ಸಿಕ್ಕಿದೆ.

ಏಕವ್ಯಕ್ತಿ ನಟನೆಯ ರಾಘು ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಪಾತ್ರವೇ ಪ್ರಮುಖ ತಿರುಳು: ಆನಂದ್ ರಾಜ್
ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿರುವ ಆನಂದ್ ರಾಜ್ ಅವರು ತಮ್ಮ ಮೊದಲ ಚಿತ್ರ ರಾಘು ಸಿನಿಮಾದಲ್ಲಿ ಪ್ರಭಾವಶಾಲಿ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ನಟಿಸಿದ್ದು, ಈ ಚಿತ್ರವು ನಟ ಮತ್ತು ನಿರ್ದೇಶಕ ಇಬ್ಬರಿಗೂ ಸಾಕಷ್ಟು ಪ್ರಯೋಗಾತ್ಮಕ ಚಿತ್ರವಾಗಿದೆ.

ವಿಜಯ ರಾಘವೇಂದ್ರ, ಹರ್ಷಿಕಾ ಪೂಣಚ್ಚ ನಟನೆಯ ‘ಕಾಸಿನಸರ‘ ಸಿನಿಮಾ ಮಾರ್ಚ್ 3ಕ್ಕೆ ಬಿಡುಗಡೆ
ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಹೊಸ ಸಿನಿಮಾ ‘ಕಾಸಿನಸರ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಆನಂದ್ ರಾಜ್ ನಿರ್ದೇಶನದ 'ರಾಘು' ಚಿತ್ರದಲ್ಲಿ ಸೋಲೋ ಆಕ್ಟಿಂಗ್ ಮಾಡಲಿದ್ದಾರೆ ವಿಜಯ ರಾಘವೇಂದ್ರ
ಚಿನ್ನಾರಿ ಮುತ್ತ ಎಂದೇ ಖ್ಯಾತರಾಗಿರುವ ವಿಜಯ ರಾಘವೇಂದ್ರ ಅವರು ತಮ್ಮ ಮುಂಬರುವ ಚಿತ್ರದ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ರಾಘು ಎಂಬ ಶೀರ್ಷಿಕೆಯ ಹೊಸ ಯುಗದ ಥ್ರಿಲ್ಲರ್ ಕಥಾವಸ್ತುವನ್ನು ಎಂ. ಆನಂದ್ ರಾಜ್ ಮೊದಲ ಬಾರಿಗೆ ನಿರ್ದೇಶಿಸಿದ್ದು, ವಿಜಯ ರಾಘವೇಂದ್ರ ಅವರು ಸೋಲೋ ಆಕ್ಟಿಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಮರೀಚಿ'ಗಾಗಿ ಜೊತೆಯಾಗುತ್ತಿದ್ದಾರೆ ವಿಜಯ್ ರಾಘವೇಂದ್ರ ಮತ್ತು ಸೋನು ಗೌಡ!
ನಟ ವಿಜಯರಾಘವೇಂದ್ರ ಥ್ರಿಲ್ಲರ್ ಸಿನಿಮಾಗಳತ್ತ ವಾಲುತ್ತಿದ್ದಾರೆ. ಸೀತಾರಾಮ್ ಬಿನೋಯ್, ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿರುವ ವಿಜಯ್ ರಾಘವೇಂದ್ರ ಮತ್ತೊಂದು ಸೈಕಲಾಜಿಕಲ್ ಸಿನಿಮಾಗೆ ಸಹಿ ಮಾಡಿದ್ದಾರೆ.

'ಕೇಸ್ ಆಫ್ ಕೊಂಡನಾ' ಚಿತ್ರಕ್ಕಾಗಿ ಮತ್ತೆ ಒಂದಾದ ದೇವಿಪ್ರಸಾದ್ ಶೆಟ್ಟಿ ಮತ್ತು ವಿಜಯ್ ರಾಘವೇಂದ್ರ!
ವಿಜಯ್ ರಾಘವೇಂದ್ರ ನಟನೆಯ 50ಸಿನಿಮಾ ಸೀತಾರಾಮ್ ಬೆನೊಯ್ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದ ದೇವಿ ಪ್ರಸಾದ್ ಶೆಟ್ಟಿ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.

