ನಾನು ಬದುಕಿದ್ದೇನೆ ಮತ್ತು ಚೆನ್ನಾಗಿದ್ದೇನೆ: ಅದಾ ಶರ್ಮಾ
ತೆಲುಗಿನ ಹಾರ್ಟ್ ಅಟ್ಯಾಕ್ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಯವಾದ ಉದಯೋನ್ಮುಖ ನಟಿ ಅದಾಶರ್ಮಾ ನಾನು ಬದುಕ್ಕಿದ್ದೇನೆ. ಅಪಘಾತದಲ್ಲಿ ಸತ್ತಿಲ್ಲ ಎಂದು ಟ್ವೀಟ್...

ಹೈದರಾಬಾದ್: ತೆಲುಗಿನ ಹಾರ್ಟ್ ಅಟ್ಯಾಕ್ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಯವಾದ ಉದಯೋನ್ಮುಖ ನಟಿ ಅದಾಶರ್ಮಾ ನಾನು ಬದುಕ್ಕಿದ್ದೇನೆ. ಅಪಘಾತದಲ್ಲಿ ಸತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ನಟಿ ಅದಾಶರ್ಮಾ ಅವರಿಗೆ ಬಸ್ ವೊಂದು ಡಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ ಎಂದು ಊಹಾಪೋಹಗಳು ಟಾಲಿವುಡ್ ನಾದ್ಯಂತ ಹಬ್ಬಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮೈಕ್ರೋಬ್ಲಾಗಿಂಗ್ ಸೋಷಿಯಲ್ ನೆಟವರ್ಕ್ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿರುವ ನಟಿ ಅದಾ ಶರ್ಮಾ, ನಾನು ಚೆನ್ನಾಗಿಯೇ ಇದ್ದೇನೆ. ನನಗಾವ ಅಪಘಾತವೂ ಆಗಿಲ್ಲ ಎಂದು ಹೇಳುವ ಮೂಲಕ ಇತ್ತೀಚಿನ ಚಿತ್ರೀಕರಣದಲ್ಲಿ ಬಸ್ಸೊಂದು ತಮಗೆ ಡಿಕ್ಕಿ ಹೊಡೆದಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ.
ಆದರೆ ಹೈದರಾಬಾದಿನಲ್ಲಿ ಅತಿಯಾದ ತಾಪಮಾನದ ಹಿನ್ನೆಲೆಯಲ್ಲಿ ತನಗೆ ವಿಪರೀತ ಜ್ವರ ಬಂದಿದೆ ಹೀಗಾಗಿ ಚಿತ್ರೀಕರಣದಿಂದ ದೂರವುಳಿದಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ‘ಮಂಗಳವಾರ ನಾನು ಬೈಕ್ನಲ್ಲಿ ಸಾಗುವ ಚಿತ್ರೀಕರಣ ಇತ್ತು. ನಾನು ಚೆನ್ನಾಗಿಯೇ ದ್ದೇನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾನು ಜೀವಂತವಾಗಿದ್ದೇನೆ. ವದಂತಿಗಳು ಹರಡುವುದು ಬೇಡ ಎಂದು ತತ್ ಕ್ಷಣವೇ ಟ್ವೀಟ್ ಮಾಡುತ್ತಿದ್ದೇನೆ. ಯಾವ ಬಸ್ಸೂ ನನಗೆ ಡಿಕ್ಕಿ ಹೊಡೆದಿಲ್ಲ’ ಎಂದು ಅದಾ ಟ್ವೀಟ್ ಮಾಡಿದ್ದಾರೆ.
"ಹಸೀ ತೊ ಫಸೀ", "1920" ಚಿತ್ರಗಳ ಪಾತ್ರಗಳಿಂದಾಗಿ ಜನಪ್ರಿಯರಾಗಿರುವ ಬಾಲಿವುಡ್ ನಟಿ ಅದಾ ಶರ್ಮಾ, ಪೂರಿ ಜಗನ್ನಾಥ್ ನಿರ್ದೇಶನದ ಹಾರ್ಟ್ ಅಟ್ಯಾಕ್ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಪರಿಚಯವಾದರು. ಬಳಿಕ ಅಲ್ಲು ಅರ್ಜುನ್ ಅವರ ಸನ್ ಆಫ್ ಸತ್ಯಮೂರ್ತಿ ಮತ್ತು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ರಣ ವಿಕ್ರಮ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದರು. ಅದಾ ಅವರ ಮುಂಬರುವ ಚಿತ್ರಗಳಲ್ಲಿ ತೆಲುಗು ರೊಮ್ಯಾಂಟಿಕ್ ಚಿತ್ರಗಳಾದ ‘ಕ್ಷನಮ್ ಮತ್ತು ‘ಗರಂ’ ಸೇರಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


