ಸಿನಿಮಾ ಸುದ್ದಿ

ಶಿವರಾಜಕುಮಾರ್ ಮಗಳ ಮದುವೆ ಆಗಸ್ಟ್ ೩೧ಕ್ಕೆ

ಕನ್ನಡದ ಮೇರು ನಟ ಶಿವರಾಜ್ ಕುಮಾರ ಅವರ ಪುತ್ರಿ ವೃತ್ತಿಪರ ಡಾಕ್ಟರ್ ನಿರುಪಮಾ, ಡಾಕ್ಟರ್ ದಿಲೀಪ್ ಅವರನ್ನು ಆಗಸ್ಟ್ ೩೧ರಂದು ವರಿಸಲಿದ್ದಾರೆ.

ಶಿವರಾಜಕುಮಾರ್ ಮಗಳ ಮದುವೆ ಆಗಸ್ಟ್ ೩೧ಕ್ಕೆ
ನಿಶ್ಚಿತಾರ್ಥ ಸಮಾರಂಭದಲ್ಲಿ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ, ಮಗಳು ನಿರುಪಮಾ ಭಾವಿ ಅಳಿಯ ದಿಲೀಪ್
Published On :

ಬೆಂಗಳೂರು: ಕನ್ನಡದ ಮೇರು ನಟ ಶಿವರಾಜ್ ಕುಮಾರ ಅವರ ಪುತ್ರಿ ವೃತ್ತಿಪರ ಡಾಕ್ಟರ್ ನಿರುಪಮಾ, ಡಾಕ್ಟರ್ ದಿಲೀಪ್ ಅವರನ್ನು ಆಗಸ್ಟ್ ೩೧ರಂದು ವರಿಸಲಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು.

"ಆಗಸ್ಟ್ ೩೧ಕ್ಕೆ ಮದುವೆ ದಿನಾಂಕ ನಿಗದಿಪಡಿಸಲಾಗಿದೆ. ಜುಲೈ ಅಂತ್ಯಕ್ಕೆ ಶಿವರಾಜ್ ಕುಮಾರ್ ಅವರು ಈಗ ಒಪ್ಪಿಕೊಂಡಿರುವ ಸಿನೆಮಾಗಳನ್ನು ಮುಗಿಸಿರುತ್ತಾರೆ. ನಂತರ ಮದುವೆ ಸಿದ್ಧತೆಗಳನ್ನು ನಡೆಸಲಿದ್ದಾರೆ" ಎಂದು ಮೂಲಗಳಿಂದ ತಿಳಿದುಬಂದಿದೆ.

ಸದ್ಯಕೆ 'ಶಿವಲಿಂಗ' ಸಿನೆಮಾ ಹಾಗು ರಾಮ ಗೋಪಾಲ್ ವರ್ಮಾ ಅವರ ಬಹುಭಾಷಾ ಚಲನಚಿತ್ರ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾಗಳಲ್ಲಿ ಶಿವರಾಜ್ ಕುಮಾರ್ ಕಾರ್ಯನಿರತರಾಗಿದ್ದಾರೆ.

ಮಗಳ ಮದುವೆ ಕಾರ್ಯದ ಬಳಿಕ ಸೆಪ್ಟಂಬರ್ ನಲ್ಲಿ 'ಶ್ರೀಕಂಠ' ಚಲನಚಿತ್ರದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ತೊಡಗಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.