ಜಮ್ಮು ಕಾಶ್ಮೀರದಲ್ಲಿ 'ರಿಕ್ಕಿ' ಚಿತ್ರೀಕರಣ
ರಿಷಬ್ ಶೆಟ್ಟಿ ತಮ್ಮ ಚೊಚ್ಚಲ ನಿರ್ದೇಶನದ ಚಲನಚಿತ್ರ 'ರಿಕ್ಕಿ' ಚಿತ್ರೀಕರಣಕ್ಕೆ ಜಮ್ಮು ಕಾಶ್ಮೀರದತ್ತ ಮುಖ ಮಾಡಿದ್ದಾರೆ. ಮೇ ೧೫ ರಿಂದ ೧೦ ದಿನಗಳ ಕಾಲ ತಮ್ಮ

ಬೆಂಗಳೂರು: ರಿಷಬ್ ಶೆಟ್ಟಿ ತಮ್ಮ ಚೊಚ್ಚಲ ನಿರ್ದೇಶನದ ಚಲನಚಿತ್ರ 'ರಿಕ್ಕಿ' ಚಿತ್ರೀಕರಣಕ್ಕೆ ಜಮ್ಮು ಕಾಶ್ಮೀರದತ್ತ ಮುಖ ಮಾಡಿದ್ದಾರೆ. ಮೇ ೧೫ ರಿಂದ ೧೦ ದಿನಗಳ ಕಾಲ ತಮ್ಮ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದೊಂದಿಗೆ ಕೆಲವು ದೃಷ್ಯಗಳ ಹಾಗೂ ಹಾಡುಗಳ ಚಿತ್ರೀಕರಣಕ್ಕೆ ಕಣಿವೆಗೆ ತೆರಳಲಿದ್ದಾರೆ. "ನಾನು ಲೊಕೇಶನ್ ಹುಡುಕಲು ಮೊದಲು ಹೋಗಲಿದ್ದೇನೆ. ನಮ್ಮ ತಂಡ ನನ್ನನ್ನು ಮೇ ೧೮ ರಂದು ಸೇರಲಿದೆ. ಒಂದು ಡ್ಯುಯೆಟ್, ಪ್ರಯಾಣದ ಹಾಡು ಮತ್ತು ಕೆಲವು ಭಾವನಾತ್ಮಕ ದೃಷ್ಯಗಳನ್ನು ಚಿತ್ರೀಕರಣ ಮಾಡಲಿದ್ದೇವೆ" ಎನ್ನುತ್ತಾರೆ ರಿಷಬ್.
ಜಮ್ಮು ಕಾಶ್ಮೀರದ ಆಯ್ಕೆ ಏಕೆ ಎಂದು ವಿವರಿಸುವ ರಿಷಬ್ "ಇದು ನಮ್ಮ ಸ್ಕ್ರಿಪ್ಟ್ ಗೆ ಪಕ್ಕಾ ಜಾಗ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಉತ್ತರದಿಂದ ದಕ್ಷಿಣಕ್ಕೆ ಬರುವ ವನ್ಯಜೀವಿ ಸಂರಕ್ಷಕನ ಪಾತ್ರ ನಿರ್ವಹಿಸಿದ್ದಾರೆ. ಈ ಜಾಗ ರಮಣೀಯವಾಗಿದ್ದು ಸ್ಕ್ರಿಪ್ಟ್ ಗೆ ಸೂಕ್ತವಾಗಿದೆ" ಎನ್ನುತ್ತಾರೆ ರಿಷಬ್.
ಈಗಾಗಲೇ ಕಾರ್ಕಳದಲ್ಲಿ ಬಹಳಷ್ಟು ಚಿತ್ರೀಕರಣ ಮುಗಿಸಿರುವ ರಿಷಬ್ ಜೊತೆಜೊತೆಯಲ್ಲೇ ಚಿತ್ರೀಕರಣ ನಂತರದ ಕೆಲಸಗಳನ್ನೂ ಪ್ರಾರಂಭಿಸಿದ್ದಾರೆ.
ಚಲನಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಇದ್ದು, ವೆಂಕಟೇಶ್ ಅನುರಾಗ್ ಸಿನೆಮ್ಯಾಟೋಗ್ರಾಫರ್. ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


