ಸಿನಿಮಾ ಸುದ್ದಿ

`ಚಾಲಾಕಿ' ಕಬೀರ್ ಸಿಂಗ್ ಕನ್ನಡಕ್ಕೆ

`ಚಾಲಾಕಿ' ಕಬೀರ್ ಸಿಂಗ್ ಕನ್ನಡಕ್ಕೆ
ಕಬೀರ್ ಸಿಂಗ್
Published On :

ಇತ್ತೀಚಿನ ಗೋಪಿಚಂದ್ ಅಭಿನಯದ ತೆಲುಗು ಚಿತ್ರ `ಜಿಲ್ಲ್' ಹಾಗೂ `ಕಿಕ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಖಳ ನಟ ಕಬೀರ್ ಸಿಂಗ್ ಈಗ 3ನೇ ಸಿನಿಮಾ `ಚಾಲಾಕಿ' ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ.

ಚೋಟಾ ನಾಯಕ್ ಪಾತ್ರದಲ್ಲಿ ಅಭಿನಯಿಸಿದ ಕಬೀರ್ ಸಿಂಗ್ ಅವರ `ಜಿಲ್ಲ್' ಆಂಧ್ರ ಪ್ರದೇಶದಲ್ಲಿ ಜಯಭೇರಿ ಹೊಡೆಯುತ್ತಿದೆ. ಕಬೀರ್ ಸಿಂಗ್ ಅವರು ನಾಯಕ ಪ್ರಜ್ವಲ್ ದೇವರಾಜ್ ಎದುರು ಅಭಿನಯಿಸುತ್ತಿದ್ದಾರೆ.

ಪ್ರಜ್ವಲ್ ದೇವರಾಜ್ ಅವರ 25 ನೇ ಸಿನಿಮಾ `ಚಾಲಾಕಿ'ಗೆ ನಾಯಕಿ ಆಗಿ ಸೋನಮ್ ಶೆಟ್ಟಿ ಆಯ್ಕೆ ಆಗಿದ್ದಾರೆ.

ವೇಣುಗೋಪಾಲ್ ಚಿತ್ರದ ನಿರ್ದೇಶಕರು. ಪ್ರವೀಣ್ ಕುಮಾರ್ ಚಿತ್ರದ ನಿರ್ಮಾಪಕರು, ಪಿ ರಾಜನ್ ಅವರ ಛಾಯಾಗ್ರಹಣ, ಪ್ರೇಮ್ ಕುಮಾರ್ ಅವರ ಸಂಗೀತ, ದೀಪು ಅವರ ಸಂಕಲನ (ದೀಪಿ ಎಸ್ ಕುಮಾರ್ ಅಲ್ಲ) ಬಾಬು ಖಾನ್ ಅವರ ಕಲಾ ನಿರ್ದೇಶನ, ಜಾಲಹಳ್ಳಿ ನರಸಿಂಹ ಅವರ ಮೇಲ್ವಿಚಾರಣೆ ಚಿತ್ರಕ್ಕೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.