'ಮೈತ್ರಿ' ನೋಡಲು ಆಸಕ್ತಿ ತೋರಿದ ಮುಖ್ಯಮಂತ್ರಿ
ಬಿಡುಗಡೆಯಾಗಿ ೪೦ ದಿನ ಕಳೆದರೂ ನಟ ಪುನೀತ್ ರಾಜಕುಮಾರ್ ಮತ್ತು ಮೋಹನ್ ಲಾಲ್ ಅಭಿನಯದ 'ಮೈತ್ರಿ' ಚಲನಚಿತ್ರ ಇನ್ನೂ ಚಾಲ್ತಿಯಲ್ಲಿದೆ.

ಬೆಂಗಳೂರು: ಬಿಡುಗಡೆಯಾಗಿ ೪೦ ದಿನ ಕಳೆದರೂ ನಟ ಪುನೀತ್ ರಾಜಕುಮಾರ್ ಮತ್ತು ಮೋಹನ್ ಲಾಲ್ ಅಭಿನಯದ 'ಮೈತ್ರಿ' ಚಲನಚಿತ್ರ ಇನ್ನೂ ಚಾಲ್ತಿಯಲ್ಲಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಿನೆಮಾ ನೋಡುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಅತ್ಯುತ್ತಮ ಸಿನೆಮಾಗಳನ್ನು ನೋಡುವ ಹವ್ಯಾಸ ಇಟ್ಟುಕೊಂಡಿರುವ ಮುಖ್ಯಮಂತ್ರಿ ಅವರಿಗೆ 'ಮೈತ್ರಿ' ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿರುವ ಸಂದೇಶದ ಬಗ್ಗೆ ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ. ಕುಣಿಗಲ್ ನಲ್ಲಿ ನಡೆದ ಒಂದು ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಜೊತೆ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ 'ಮೈತ್ರಿ' ಸಿನೆಮಾ ನೋಡುವ ಆಸಕ್ತಿಯನ್ನು ನಿರ್ಮಾಪಕ ರಾಜಕುಮಾರ್ ಅವರಿಗೆ ಹೇಳಿಕೊಂಡಿದ್ದಾರೆ.
"ಹಲವಾರು ಅಧಿಕಾರಿಗಳು ಸಿನೆಮಾ ನೋಡಿ ಇಷ್ಟ ಪಟ್ಟಿದ್ದಾರೆ. ಕೆಂಪಯ್ಯ ಐಪಿಸ್ ಅವರು ಈ ಸಿನೆಮಾ ನೋಡಿ ಸಂತಸಪಟ್ಟು ಮುಖ್ಯಮಂತ್ರಿಗಳು ಈ ಸಿನೆಮಾ ನೋಡಲೇಬೇಕು ಎಂದಿದ್ದರು. ಅವರು ಮೈತ್ರಿಯ ವಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ, ಶೀಘ್ರದಲ್ಲೇ ನಾವು ಮುಖ್ಯಮಂತ್ರಿ ಯಾವಾಗ ಸಿನೆಮಾ ನೋಡಲು ಬಿಡುವಾಗಿರುತ್ತಾರೆ " ಎಂಬುದನ್ನು ತಿಳಿದುಕೊಳ್ಳುತ್ತೇವೆ ಎಂಇದ್ದಾರೆ ರಾಜಕುಮಾರ್.
ಈ ಮಧ್ಯೆ ಮೈತ್ರಿ ಸಿನೆಮಾ ನೋಡಿ ಮೆಚ್ಚಿರುವ ಶಿಕ್ಷಣ ಮಂತ್ರಿ ಕಿಮ್ಮನೆ ರತ್ನಾಕರ್ ಶಾಲೆಗಳಿಗೆ ಪತ್ರ ಬರೆದು ಈ ಸಿನೆಮಾವನ್ನು ಮಕ್ಕಳಿಗೆ ತೋರಿಸುವಂತೆ ಸೂಚಿಸಿದ್ದಾರೆ. "ಈಗ ಬೇಸಿಗೆ ರಜೆ ಪ್ರಾರಂಭವಾಗಿದ್ದು, ಮಕ್ಕಳಿಗಾಗಿ ಪ್ರದರ್ಶನಗಳನ್ನು ಏರ್ಪಡಿಸಲಿದ್ದೇವೆ" ಎನ್ನುತ್ತಾರೆ ರಾಜಕುಮಾರ್.
ಕನ್ನಡ 'ಮೈತ್ರಿ' ನಿರ್ದೇಶಿಸಿದ ಬಿ ಎಂ ಗಿರಿರಾಜ್ ಅವರೇ ಮಲಯಾಳಮ್ ನಲ್ಲೂ ಚಿತ್ರೀಕರಣ ಮುಗಿಸಿದ್ದಾರೆ. ಈಗ ಸಿನೆಮಾ ಸೆನ್ಸಾರ್ ಮಂಡಲಿ ಮುಂದಿದ್ದು, "ಏಪ್ರಿಲ್ ಮೂರನೆ ವಾರದಲ್ಲಿ ಮಲಯಾಳಮ್ ಅವತರಿಣಿಕೆ ಬಿಡುಗಡೆ ಮಾಡಲಿದ್ದೇವೆ. ತೆಲುಗು ರಿಮೇಕ್ ನಲ್ಲಿ ನಾಗಾರ್ಜುನ ಅವರೊಂದಿಗೆ ಕೂಡ ಕೆಲಸ ಮಾಡುವ ಭರವಸೆ ಇದೆ ಎನ್ನುತ್ತಾರೆ" ನಿರ್ಮಾಪಕ ರಾಜಕುಮಾರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


