'ಗಾಡ್ ಫಾದರ್' ಗೆ ಗೌರವ ಸಲ್ಲಿಸಿದ ಅನುಪಮ್ ಖೇರ್
'ದಿ ಗಾಡ್ ಫಾದರ್' ಖ್ಯಾತಿಯ ಹಾಲಿವುಡ್ ದಂತಕಥೆ ಮರ್ಲನ್ ಬ್ರ್ಯಾಂಡೊ ಅವರ ೧೧ನೆ ಪುಣ್ಯತಿಥಿಯ ಸಂದರ್ಭದಲ್ಲಿ ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್

ಮುಂಬೈ: 'ದಿ ಗಾಡ್ ಫಾದರ್' ಖ್ಯಾತಿಯ ಹಾಲಿವುಡ್ ದಂತಕಥೆ ಮರ್ಲನ್ ಬ್ರ್ಯಾಂಡೊ ಅವರ ೧೧ನೆ ಪುಣ್ಯತಿಥಿಯ ಸಂದರ್ಭದಲ್ಲಿ ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ 'ದಿ ಗಾಡ್ ಫಾದರ್' ಸಿನೆಮಾದ ದೃಶ್ಯವೊಂದನ್ನು ಮತ್ತೆ ಅಭಿನಯಿಸಿ ವಿಡಿಯೋ ಮಾಡಿ ಗೌರವ ಸಲ್ಲಿಸಿದ್ದಾರೆ.
ವಿಡಿಯೋ ಸೆಲ್ಫಿ ಮೊಬೈಲ್ ಆಪ್ #ವೆಲ್ಫಿ ಬಳಸಿ ಅನುಪಮ್ ಖೇರ್ ವಿಡಿಯೋ ಚಿತ್ರೀಕರಿಸಿದ್ದಾರೆ.
೧೯೭೨ ರ 'ದಿ ಗಾಡ್ ಫಾದರ್' ಸಿನೆಮಾದ ಸಂಭಾಷಣೆಯ ಪ್ರಖ್ಯಾತ ಸಾಲುಗಳಾದ "ಐ ಆಮ್ ಗೋಂನ್ನ ಮೇಕ್ ಎನ್ ಆಫರ್ ಹಿ ಕೆನ್ನಾಟ್ ರೆಫ್ಯೂಸ್" (ಅವನು ತಿರಸ್ಕರಿಸಲು ಆಗದಂತ ಒಂದು ಪ್ರಸ್ತಾವನೆ ನೀಡುತ್ತೇನೆ) ಅಭಿನಯಿಸಿ ಸೋಮವಾರ ಟ್ವಿಟ್ಟರ್ ನಲ್ಲಿ ತೇಲಿಬಿಟ್ಟಿದ್ದಾರೆ.
" ಮರ್ಲನ್ ಬ್ರ್ಯಾಂಡೊ ಅವರ ೧೧ನೆ ಪುಣ್ಯತಿಥಿಯ ಸಂದರ್ಭದಲ್ಲಿ, ಈ ಮೇರು ನಟನಿಗೆ ನಾನು ಗೌರವ ಸಮರ್ಪಿಸಲು ಪ್ರಯತ್ನಿಸಿದ್ದೇನೆ" ಎಂದು ಕೂಡ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


