ಸಿನಿಮಾ ಸುದ್ದಿ

ದನ ಕಾಯೋಕೆ ಸ್ಥಳ ಹುಡುಕಾಟ

ತಮ್ಮ ಮುಂದಿನ ಸಿನೆಮ 'ದನ ಕಾಯೋನು' ಸಿನೆಮಾಗೆ ಯೋಗರಾಜ್ ಭಟ್ ಚಿತ್ರೀಕರಣವನ್ನು ಮುಂದಿನ ತಿಂಗಳಿಂದ ಪ್ರಾರಂಬಿಸಲಿದ್ದು,...

ದನ ಕಾಯೋಕೆ ಸ್ಥಳ ಹುಡುಕಾಟ
'ದನ ಕಾಯೋನು' ಸಿನೆಮಾದಲ್ಲಿ ನಟಿ ಪ್ರಿಯಾಮಣಿ ಮೊದಲ ನೋಟ
Published On :

ಬೆಂಗಳೂರು: ತಮ್ಮ ಮುಂದಿನ ಸಿನೆಮ 'ದನ ಕಾಯೋನು' ಸಿನೆಮಾಗೆ ನಿರ್ದೇಶಕ ಯೋಗರಾಜ್ ಭಟ್  ಚಿತ್ರೀಕರಣವನ್ನು ಮುಂದಿನ ತಿಂಗಳಿಂದ ಪ್ರಾರಂಬಿಸಲಿದ್ದು, ನಟಿ ಪ್ರಿಯಾಮಣಿಯವರ ಮೊದಲ ನೋಟವನ್ನು ಬಿಡುಗಡೆ ಮಾಡಿದ್ದಾರೆ. ಈ ಸಿನೆಮಾದ ನಾಯಕ ನಟ ದುನಿಯಾ ವಿಜಯ್. ಇಡೀ ಸಿನೆಮಾ ಗ್ರಾಮೀಣ ಸೊಗಡಿನಲ್ಲಿ ಚಿತ್ರೀಕರಣವಾಗಲಿದೆ ಎನ್ನಲಾಗಿದೆ.

ಸದ್ಯಕ್ಕೆ ಚಿತ್ರೀಕರಣಕ್ಕೆ ಸ್ಥಳಗಳ ಹುಡುಕಾಟದಲ್ಲಿದ್ದಾರೆ ಯೋಗರಾಜ್ ಭಟ್. ಗಂಗಾವತಿ, ಚಿತ್ರದುರ್ಗ, ಕನಕಪುರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಈ ಮಧ್ಯೆ ವಿ ಹರಿಕೃಷ್ಣ ಅವರು ಸಂಗೀತ ನೀಡಲಿದ್ದು ಅವರೊಂದಿಗೆ ಯೋಗರಾಜ್ ಕೆಲಸ ಮಾಡುತ್ತಿದ್ದಾರೆ ಹಾಗೂ ಗೀತ ರಚನೆಯಲ್ಲೂ ನಿರತರಾಗಿದ್ದರಂತೆ.

ವಾಸ್ತು ಪ್ರಕಾರ ಯಾಕೋ ಯೋಗರಾಜ್ ಭಟ್ ಅವರಿಗೆ ದಿಕ್ಕು ಬದಲಿಸಲಿಲ್ಲ. ಈಗ 'ದನ ಕಾಯೋನು' ಚಿತ್ರೀಕರಣ ಸ್ಥಳಗಳು ಯೋಗರಾಜ್ ಭಟ್ ಅವರಿಗೆ ಮ್ಯಾಜಿಕ್ ಮಾಡಲಿ ಎನ್ನುವುದೇ ಸಿನಿ ರಸಿಕರ ಹಾರೈಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.