ಸಿನಿಮಾ ಸುದ್ದಿ

'ಟೈಟಾನಿಕ್', 'ಅವತಾರ್' ಸಂಗೀತ ನಿರ್ದೇಶಕ ವಿಮಾನ ಅಪಘಾತದಲ್ಲಿ ದುರ್ಮರಣ

ಹಾಲಿವುಡ್ ನ ಖ್ಯಾತ ಸಿನೆಮಾಗಳಾದ 'ಟೈಟಾನಿಕ್' ಮತ್ತು 'ಅವತಾರ್' ಸಿನೆಮಾಗಳ ಸಂಗೀತ ನಿರ್ದೇಶಕ ತಾರೆ ಜೇಮ್ಸ್ ಹಾರ್ನರ್ ಅವರು ವಿಮಾನ ಅಪಘಾತದಲ್ಲಿ

'ಟೈಟಾನಿಕ್', 'ಅವತಾರ್' ಸಂಗೀತ ನಿರ್ದೇಶಕ ವಿಮಾನ ಅಪಘಾತದಲ್ಲಿ ದುರ್ಮರಣ
ಹಾಲಿವುಡ್ ಸಂಗೀತ ನಿರ್ದೇಶಕ ತಾರೆ ಜೇಮ್ಸ್ ಹಾರ್ನರ್
Published On :

ಹಾಲಿವುಡ್ ನ ಖ್ಯಾತ ಸಿನೆಮಾಗಳಾದ 'ಟೈಟಾನಿಕ್' ಮತ್ತು 'ಅವತಾರ್' ಸಿನೆಮಾಗಳ ಸಂಗೀತ ನಿರ್ದೇಶಕ ತಾರೆ ಜೇಮ್ಸ್ ಹಾರ್ನರ್ ಅವರು ವಿಮಾನ ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ಅಮೆರಿಕಾದ ಮಾಧ್ಯಮವೊಂದು ವರದಿ ಮಾಡಿದೆ. ಅವರಿಗೆ ೬೧ ವರ್ಷಗಳಾಗಿತ್ತು.

ಕ್ಯಾಲಫೋರ್ನಿಯಾದ ಸಾಂತಾ ಬರ್ಬಾರಾದಲ್ಲಿ ತಮ್ಮ ವೈಯಕ್ತಿಕ ವಿಮಾನದ ಅಪಘಾತದಲ್ಲಿ ಸಂಗೀತ ನಿರ್ದೇಶಕ ಸಾವನ್ನಪ್ಪಿದ್ದಾರೆ ಎಂದು ಹಾಲಿವುಡ್ ಮಾರುಕಟ್ಟೆ ನಿಯತಕಾಲಿಕೆ 'ವೆರೈಟಿ' ವರದಿ ಮಾಡಿದೆ.

"ಅಧ್ಬುತ ಕಂಪೋಸರ್ ಜೇಮ್ಸ್ ಹಾರ್ನರ್, ನನ್ನ ಗೆಳೆಯ ಮತ್ತು ೭ ಸಿನೆಮಾಗಳಲ್ಲಿ ನನ್ನೊಟ್ಟಿಗೆ ಕೆಲಸ ಮಾಡಿದವರು, ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಪ್ರೀತಿ ಪಾತ್ರರಿಗೆ ನನ್ನ ಹೃದಯ ಮಿಡಿಯುತ್ತಿದೆ" ಎಂದು ನಿರ್ದೇಶಕ ರಾನ್ ಹೊವಾರ್ಡ್ ಟ್ವೀಟ್ ಮಾಡಿದ್ದಾರೆ.

ಹಾಲಿವುಡ್ ನಲ್ಲಿ ದಾಖಲೆ ಸೃಷ್ಟಿಸಿದ್ದ 'ಟೈಟಾನಿಕ್' ಸಿನೆಮಾದ 'ಮೈ ಹಾರ್ಟ್ ವಿಲ್ ಗೋ ಆನ್' ಹಾಡಿಗೆ ಹಾರ್ನರ್ ಆಸ್ಕರ್ ಪ್ರಶಸ್ತಿ ಪಡೆದಿದ್ದರು. 'ಅಪೋಲೊ ೧೩', 'ಬ್ರೇವ್ ಹಾರ್ಟ್' ಮತ್ತು 'ಫಿಲ್ಡ್ ಆಫ್ ಡ್ರೀಮ್ಸ್' ಸೇರಿದಂತೆ ಆಸ್ಕರ್ ಪ್ರಶಸ್ತಿಗೆ ಹಾರ್ನರ್ ೬ ಬಾರಿ ನಾಮಾಂಕಿತರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.