ಜುಲೈ 1ಕ್ಕೆ ಸೆಟ್ಟೇರಲಿದೆ ಪೂರಿ ಜಗನ್ನಾಥ್ ನಿರ್ದೇಶನದ 'ಲೋಫರ್'
ಪೂರಿ ಜಗನ್ನಾಥ್ ನಿರ್ದೇಶನದ ಯಶಸ್ವಿ ಚಿತ್ರಗಳಾದ ಪೋಕಿರಿ, ಇಡಿಯಟ್, ಟೆಂಪರ್ ಲಿಸ್ಟ್ ಗೆ ಇದೀಗ ಲೋಫರ್ ಚಿತ್ರ ಕೂಡ ಸೇರ್ಪಡೆಗೊಳ್ಳಲಿದ್ದು, ಜುಲೈ 1ಕ್ಕೆ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ...

ಹೈದರಾಬಾದ್: ಪೂರಿ ಜಗನ್ನಾಥ್ ನಿರ್ದೇಶನದ ಯಶಸ್ವಿ ಚಿತ್ರಗಳಾದ ಪೋಕಿರಿ, ಇಡಿಯಟ್, ಟೆಂಪರ್ ಲಿಸ್ಟ್ ಗೆ ಇದೀಗ ಲೋಫರ್ ಚಿತ್ರ ಕೂಡ ಸೇರ್ಪಡೆಗೊಳ್ಳಲಿದ್ದು, ಜುಲೈ 1ಕ್ಕೆ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಈಗಾಗಲೇ ಟೆಂಪರ್ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ನಿರ್ದೇಶಕ ಪೂರಿ ಜಗನ್ನಾಥ್ ಇದೀಗ ನಟ ವರುಣ್ ಅಭಿನಯದ ಲೋಫರ್ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಲಿದ್ದು, ಜುಲೈ 1 ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಲೋಫರ್ ಚಿತ್ರವೊಂದು ಕಮರ್ಷಿಯಲ್ ಸಿನಿಮಾವಾಗಿದ್ದು, ಸೆಂಟಿಮೆಂಟ್ ಹಾಗೂ ಆ್ಯಕ್ಷನ್ ಎರಡನ್ನೂ ಸೇರಿದ ಚಿತ್ರವಾಗಿದೆ, ನಟ ವರುಣ್ ಅಭಿನಯಿಸಲಿರುವ ಮೊದಲ ಸಾಹಸಮಯ ಚಿತ್ರವಾಗಿದೆ ಎಂದು ಚಿತ್ರ ನಿರ್ಮಾಪಕ ಸಿ.ಕಲ್ಯಾಣ್ ಹೇಳಿದ್ದಾರೆ.
ಚಿತ್ರದ ಚಿತ್ರೀಕರಣಕ್ಕಾಗಿ ಈಗಾಗಲೇ ಚಿತ್ರದ ತಂಡ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜೋದ್ಪುರ ಹಾಗೂ ರಾಜಸ್ತಾನದಲ್ಲಿ ಚಿತ್ರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಜುಲೈ 1 ರಿಂದ ಪ್ರಾರಂಭವಾಗುವು ಚಿತ್ರದ ಚಿತ್ರೀಕರಣವು ಸೆಪ್ಟಂಬರ್ ಅಂತಿಮದ ವೇಳೆಗೆ ಮುಕ್ತಾಯವಾಗಲಿದೆ. ದಸರಾ ಹಬ್ಬದಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


