ರೌಡಿ ಸಹೋದರರ ಮೇಲೆ ಮಾಡಿದ ಸಿನೆಮಾಗೆ ೧೦೩ ಕಡೆ ಕತ್ತರಿ
ಬೆತ್ತನಗೆರೆ ಸೀನ ಮತ್ತು ಬೆತ್ತನಗೆರೆ ಶಂಕರ ಎಂಬ ರೌಡಿಗಳನ್ನು ತಮ್ಮ ಸಿನೆಮಾದ ವಿಷಯವಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಸಿನೆಮಾ ನಿರ್ದೇಶಕರು ಭಾರಿ ದಂಡ

ಬೆಂಗಳೂರು: ಬೆತ್ತನಗೆರೆ ಸೀನ ಮತ್ತು ಬೆತ್ತನಗೆರೆ ಶಂಕರ ಎಂಬ ರೌಡಿಗಳನ್ನು ತಮ್ಮ ಸಿನೆಮಾದ ವಿಷಯವಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಸಿನೆಮಾ ನಿರ್ದೇಶಕರು ಭಾರಿ ದಂಡ ತೆತ್ತಬೇಕಾಗಿ ಬಂದಿದೆ. ೧೦೩ ಕಡೆ ಕತ್ತರಿ ಮತ್ತು ನಾಲ್ಕು ಲಕ್ಷ ರೂ.
ಚಲನಚಿತ್ರ ಶೀರ್ಷಿಕೆಯಿಂದಲೇ ಬದಲಾವಣೆ ಮಾಡಬೇಕಾಗಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಮೋಹನ್ ಗೌಡ ಬಿ. ಮೊದಲು ಚಿತ್ರದ ಶೀರ್ಷಿಕೆ ಬೆತ್ತನಗೆರೆ ಸೀನ ಎಂದಿತ್ತು ಅದನ್ನು 'ಬೆತ್ತನಗೆರೆ' ಎಂದು ಬದಲಾಯಿಸಿದ್ದೇವೆ ಎನ್ನುತ್ತಾರೆ ಗೌಡ.
ಸೀನ ಹೆಸರಿನ ಪಾತ್ರವನ್ನು ಈಗ ಶಿವ ಎಂತಲೂ ಶಂಕರನನ್ನು ಶೇಖರ ಎಂತಲೂ ಬದಲಾಯಿಸಲಾಗಿದೆ. ಹೆಸರುಗಳನ್ನು ೪೦ ಕಡೆ ಬದಲಾಯಿಸಬೇಕಾಗಿ ಬಂತು. "ಅವರು ಸ್ಥಳದ (ನೆಲಮಂಗಲ) ಹೆಸರನ್ನೂ ಬದಲಾಯಿಸಲು ಕೂಡ ತಿಳಿಸಿದರು. ಬಂಡಿ ಬಂಡಿ ಜಾರೋ ಬಂಡಿ ಹಾಡಿನ ಸಂಪೂರ್ಣ ಗೀತ ಸಾಹಿತ್ಯವನ್ನು ಬದಲಾಯಿಸಬೇಕಾಯಿತು ಏಕೆಂದರೆ ಮಹಿಳೆಯ ದೇಹವನ್ನು ಸರಿಯಾಗಿ ಬಿಂಬಿಸಿಲ್ಲ ಎಂಬದು ಸೆನ್ಸಾರ್ ಮಂಡಲಿಯ ವಾದ" ಎನ್ನುತ್ತಾರೆ ಮೋಹನ್.
೧೫೦ ನಿಮಿಷಗಳ ಸಿನೆಮಾ ಈಗ ೧೨೫ ನಿಮಿಷಕ್ಕೆ ಇಳಿದಿದೆ. "ನಾವು ಮರುಚಿತ್ರೀಕರಣ ಮಾಡಲಿಲ್ಲ ಆದರೆ ಬಹಳಷ್ಟು ಹಣ ಮತ್ತು ಸಮಯವನ್ನು ವ್ಯಯಿಸಿದ್ದೇವೆ. ಈ ಬದಲಾವಣೆಗಳು ಬಹುತೇಕ ಡಬ್ಬಿಂಗ್ ಸ್ಟುಡಿಯೋದಲ್ಲಿ ನಡೆದದ್ದು ಮತ್ತು ಇದಕ್ಕೆ ನಾಲ್ಕು ಲಕ್ಷ ವ್ಯಯಿಸಿದ್ದೇವೆ" ಎನ್ನುತ್ತಾರೆ ನಿರ್ದೇಶಕ.
ನಿರ್ದೇಶಕ ಇದು ಕಾಲ್ಪನಿಕ ಸಿನೆಮಾ ಎಂದು ಹೇಳುತ್ತಾರೆ ಆದರೆ ನಿಜ ವ್ಯಕ್ತಿಗಳ ಮತ್ತು ಸ್ಥಳಗಳ ಹೆಸರುಗಳನ್ನು ಬಳಸಿದ್ದಾರೆ. ನಿರ್ದೇಶಕರು ಅದೇ ಕುಟುಂಬದ ಸದಸ್ಯರಾಗಿದ್ದು ನಿಜವಾದ ಹೆಸರುಗಳನ್ನು ಬಳಸುವಂತಿಲ್ಲ ಎಂದು ತಿಳಿದಿರಬೇಕಿತ್ತು ಎಂದಿದ್ದಾರೆ ಸೆನ್ಸಾರ್ ಮಂಡಲಿಯ ಪ್ರಾದೇಶಿಕ ಅಧ್ಯಕ್ಷ ಎನ್ ನಾಗೇಂದ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


